ಅರಮನೆ ಇದೆ, ರಾಜ-ರಾಣಿ-ಸೇನಾಧಿಕಾರಿ, ಪ್ರಜೆಗಳೂ ಇಲ್ಲದ ಕೊಪ್ಪಳ ಇಂಜಿನಿಯರಿಂಗ್ ಕಾಲೇಜ್ – ಬಿ.ಸಿ.ಪಾಟೀಲ್

Kannadanet ,‌ತಳಕಲ್ :
ಬೃಹತ್ ಹಾಗೂ ಸುಸಜ್ಜಿತ ಕಾಲೇಜು ಕಟ್ಟಡ‌ ಇದ್ದರೂ, ಇಲ್ಲಿ ಸಿಬ್ಬಂದಿಯೇ ಇಲ್ಲ.‌ಇದು ಅರಮನೆಯಲ್ಲಿ ರಾಜ-ರಾಣಿ-ಸೇನಾಧಿಕಾರಿ ಅಷ್ಟೇ ಅಲ್ಲ ಪ್ರಜೆಗಳೇ ಇಲ್ಲದ ಸ್ಥಿತಿ‌ ತಳಕಲ್ ಇಂಜಿನಿಯರಿಂದ ಕಾಲೇಜಿದ್ದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್‌ ಹೇಳಿದರು.
ಕೊಪ್ಪಳ ಜಿಲ್ಲೆ‌ ಕುಕನೂರು ತಾಲೂಕು ತಳಕಲ್ ಸಮೀಪದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಮಾತನಾಡಿದರು.
ಸುಸಜ್ಜಿತ ಇಂಜಿನಿಯರಿಂಗ್ ಕಾಲೇಜು ಇದೆ. ಆದರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಲ್ಲ.‌ ಇದರಿಂದ ಕಟ್ಟಡ ಅನುಪಯುಕ್ತ ಆಗಿದೆ. ಇದೆಲ್ಲವನ್ನೂ ತೋರಿಸುವ ಪ್ರಯತ್ನವಾಗಿ ಉನ್ನತ ಶಿಕ್ಷಣ ಮಂತ್ರಿಗಳನ್ನು ಇಲ್ಲಿಗೆ ಕರೆ ತಂದಿದ್ದೇವೆ. ಉನ್ನತ ಶಿಕ್ಷಣ ‌ಮಂತ್ರಿ ಸಿ.ಅಶ್ವಥನಾರಾಯಣ ಅವರು ವೀಕ್ಷಣೆ ಮಾಡಿದ್ದು, ಎಲ್ಲ ಸಮಸ್ಯೆ ಪರಿಹಾರ ಮಾಡುವ ಭರವಸೆ ಇದೆ ಎಂದರು. ಉನ್ನತ ಶಿಕ್ಷಣ ಮಂತ್ರಿ ಸಿ.ಅಶ್ವಥನಾರಾಯಣ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ,‌ ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪೂರ, ಡಿಸಿ ಎಸ್. ವಿಕಾಸ‌ ಕಿಶೋರ,‌ ಜಿಪಂ ಸಿಇಒ ರಘುನಂದನ ಮೂರ್ತಿ, ಎಸ್ಪಿ ಟಿ.ಶ್ರೀಧರ ಇದ್ದರು.

Please follow and like us:
error