ಅಮೃತಸಿಟಿ ಯೋಜನೆ: ಕಾಮಗಾರಿಯ ನಾಮಫಲಕ ಹಾಕಲು ಆಗ್ರಹ

ಕೊಪ್ಪಳ : ಪ್ರಧಾನಮಂತ್ರಿಯವರ ಕನಸಿನ ಯೋಜನೆ ಅಮೃತಸಿಟಿ ಗಂಗಾವತಿ ನಗರಕ್ಕೆ ಘೋಷಣೆ ಆಗಿ ಕೆಲಸಗಳು ಆಗಿವೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ನಗರಸಭೆ ನಾಮಫಲಕವನ್ನು ಅಳವಡಿಸಿ ಯೋಜನೆಯ ಕಾಮಗಾರಿಗಳು ಎಲ್ಲೆಲ್ಲಿ ಆಗಿವೆ ಎಂದು ತಿಳಿಸಲು ಉತ್ತರ ಕರ್ನಾಟಕ ಯುವ ವೇದಿಕೆ ಆಗ್ರಹಿಸಿದೆ. ಯುವ ವೇದಿಕೆಯ ಪದಾಧಿಕಾರಿಗಳು ಮಂಗಳವಾರಂದು ಗಂಗಾವತಿ ನಗರಸಭೆಯ ಪೌರಯುಕ್ತರಿಗೆ ಮನವಿ ಸಲ್ಲಸುವ ಮೂಲಕ ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ವೇದಿಕೆಯ ತಾಲೂಕ ಅಧ್ಯಕ್ಷ ಅಬ್ದುಲ್ ಪಾಷಾ ಮಾತನಾಡಿ, 2015-16 ನೇ ಸಾಲಿನಲ್ಲಿ ಯೋಜನೆ ಘೋಷಣೆ ಆಗಿದ್ದು, ಅಂದಿನಿಂದ ಇಲ್ಲಿಯವರೆಗೂ ಕಾಮಗಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು, ಗುತ್ತಿಗೆದಾರರು ಕೋಟ್ಯಾಂತರ ಹಣವನ್ನು ನುಂಗಿ ಹಾಕಿದ್ದಾರೆ. ಆದರೆ ಇದುವರೆಗೂ ಸಂಪೂರ್ಣವಾಗಿ ಎಲ್ಲೆಲ್ಲಿ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಿಸಿದ್ದೇವೆ. ಹಾಗೂ ಪ್ರಗತಿಯಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ನಾಮಫಲಕವನ್ನು ಹಾಕಿ ಎಂದು ಆಗ್ರಹಿಸಿದರು. ನಾಮಫಲಕ ಹಾಕದೇ ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಾಮಗಾರಿ ಪೂರ್ಣಗೊಳ್ಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಲಿ ಒಂದು ವೇಳೆ ಇದನ್ನು ನಿರ್ಲಕ್ಷ್ಯ ಮಾಡಿದರೆ ನಗರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂಧರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಫಕೀರಪ್ಪ, ಪದಾಧಿಕಾರಿಗಳಾದ ಉದಯ್, ಮೌಲಾಹುಸೇನ್ ಸೇರಿದಂತೆ ಮತ್ತಿತರರು ಇದ್ದರು

Please follow and like us:
error