ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ನೀತಿಗೆ ಕೆಯುಡಬ್ಲೂಜೆ ಖಂಡನೆ

ಕೊಪ್ಪಳ : ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ನೀತಿಗೆ ಕೆಯುಡಬ್ಲೂಜೆ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( ರಿ ) ಜಿಲ್ಲಾ ಘಟಕ , ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಪವರ್ ಟಿವಿ ಕನ್ನಡ ಸುದ್ದಿ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮ ಅಲ್ಲ , ಇದೇ ಟಿವಿ ವಾಹಿನಿ ಮಾಲೀಕರ ಮೇಲೆ ಆರೋಪ ಮಾಡಿರುವುದು ಬೇರೆ ವಿಚಾರ , ಆ ಕುರಿತು ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ . ಆದರೆ ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನೇ ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ , ಆದ್ದರಿಂದ ತಾವು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನಕಾರಿ ನೀತಿಗೆ ಕೆಯುಡಬ್ಲೂಜೆ ಖಂಡನೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ . ಜಿಲ್ಲಾಧ್ಯಕ್ಷ ಎಂ , ಸಾದಿಕ್ ಅಲಿ , ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ , ಹರೀಶ್ ಎಚ್ .ಎಸ್ ರಾಜ್ಯ ಕಾರ್ಯಕಾರಣಿ ಸದಸ್ಯರು ( ನಾಮಕರಣ )

ಜಿ , ಎಸ್ ಗೋನಾಳ ರಾಜ್ಯ ಕಾರ್ಯಕಾರಣಿ ಸದಸ್ಯರು ಖಜಾಂಚಿ ಸಿರಾಜ್ ಬಿಸರಳ್ಳಿ, ಸದಸ್ಯರಾದ ಈರಣ್ಣ ಕಳ್ಳಿಮನಿ, ರಾಜು ಬಿ.ಆರ್, ರಾಜಾಬಕ್ಷಿ ಎಚ್.ವಿ., ಶಿವರಾಜ್ ನುಗಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error