ಅಭಿನಂದನಾ ಸಮಾರಂಭ : ಗ್ರಾ.ಪಂ. ಸದಸ್ಯರನ್ನು ರಂಜಿಸಿದ ರಸಮಂಜರಿ

ಕೊಪ್ಪಳ : ಗ್ರಾ.ಪಂ. ನೂತನ ಸದಸ್ಯರ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು. ನಿಗದಿಗೊಳಿಸಿದಂತೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ೧೧:೩೦ ಆದರೂ ಆರಂಭವಾಗದಿದ್ದಾಗ ಕಾಂಗ್ರೆಸ್ ಮುಖಂಡ ಪರಶುರಾಮ ಕೆರಳ್ಳಿ ವೇದಿಕೆಯ ಮೇಲೆ ಕರೋಕೆ ಹಾಡುಗಳ ಗಾಯನ ಆರಂಭಿಸಿದರು.

ಗ್ರಾ. ಪಂ. ಸದಸ್ಯರ  ಅಭಿನಂದನಾ ಸಮಾರಂಭ ಕೊಪ್ಪಳದ ಶಿವಶಾಂತ ಮಂಗಲ ಭವನದಲದಲ್ಲಿ ನಡೆಯುತ್ತಿರುವ
ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನ ಸಮಾರಂಭ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಬರುವಿಕೆವರೆಗೂ ಬೇಸರ ಕಳೆಯಲು ಚಿತ್ರಗೀತೆ ಗಳನ್ನು ಹಾಡಿ ಚಿತ್ರಗೀತೆ ಹಾಡಿ ಬಂದವರನ್ನು  ಕಾಂಗ್ರೆಸ್ ಎಸ್‌ಟಿ ಘಟಕದ ಮುಖಂಡ ಪರಶುರಾಮ ಕೆರೆಹಳ್ಳಿ ರಂಜಿಸಿದರು. ಹಳೇ ಕನ್ನಡ ಚಿತ್ರಗೀತೆಗಳ ಟ್ರ್ಯಾಕ್‌ಗೆ ದನಿ ನೀಡಿದ ಕಾಂಗ್ರೆಸ್ ಮುಖಂಡನ ಹಾಡುಗಾರಿಕೆಯನ್ನು  ಗ್ರಾಪಂ ಸದಸ್ಯರು ಎಂಜಾಯ್ ಮಾಡಿದರು.

Please follow and like us:
error