ಅನ್ಯ ರಾಜ್ಯಗಳಿಗೆ ಶ್ರಮಿಕ ರೈಲು ಓಡಾಟ- ಇದೇ 24 ಕೊನೆ


ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ಅವರ ರಾಜ್ಯಕ್ಕೆ ತೆರಳು ಜಿಲ್ಲಾಡಳಿತ ಸಂಪರ್ಕಕ್ಕೆ ಮನವಿ
ಹಾವೇರಿ: : ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ಅವರ ಸ್ವ ರಾಜ್ಯಕ್ಕೆ ತೆರಳಬೇಕಿದ್ದಲ್ಲಿ ಇದೇ ಜೂನ್ 24 ರಂದು ಕೊನೆಯ ಶ್ರಮಿಕ ರೈಲು ರಾಜ್ಯದಿಂದ ತೆರಳಲಿದೆ. ಜಿಲ್ಲೆಯಲ್ಲಿರುವ ಅನ್ಯ ರಾಜ್ಯದ ವಲಸೆ ಕಾರ್ಮಿಕರು ಸ್ವಂತ ರಾಜ್ಯಕ್ಕೆ ತೆರಳಲು ಇಚ್ಛಿಸಿದಲ್ಲಿ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಇದೇ 24 ಜೂನ್ ರಂದು ಬೆಂಗಳೂರಿನಿಂದ ಶ್ರಮಿಕ ರೈಲು ಹೊರಡಲಿದೆ. ತಮ್ಮ ರಾಜ್ಯಕ್ಕೆ ತೆರಳು ಇಚ್ಛಿಸುವ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತದಿಂದ ಪ್ರಮಾಣಿಕೃತ ಮಾರ್ಗಸೂಚಿ ಅನುಸಾರ ಕಳಹಿಸಿಕೊಡಲಾಗುತ್ತದೆ. ಇದು ಕೊನೆಯ ಅವಕಾಶವಾಗಿದೆ. ಇನ್ನುಮುಂದೆ ತಮ್ಮ ರಾಜ್ಯಕ್ಕೆ ತೆರಳು ಕಾರ್ಮಿಕರು ಸ್ವಂತ ವ್ಯವಸ್ಥೆ ಮೂಲಕ ತೆರಳಬೇಕಾಗುತ್ತದೆ. ಜಿಲ್ಲೆಯಲ್ಲಿರುವ ಕಾರ್ಮಿಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳು ಇಚ್ಛಿಸಿದಲ್ಲಿ ಜೂನ್ 23ರ ಬೆಳಿಗ್ಗೆ 11 ಗಂಟೆಯೊಳಗಾಗಿ ಉಪವಿಭಾಗಾಧಿಕಾರಿಗಳ ಕಚೇರಿ, ಸವಣೂರು (08378-241646) ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ, ಹಾವೇರಿ (08375-232468) ಅಥವಾ ಅಪರ ಜಿಲ್ಲಾಧಿಕಾರಿಗಳ ಕಚೇರಿ (08375-249015), ಜಿಲ್ಲಾಡಳಿತ ಭವನ , ಹಾವೇರಿ ಅಥವಾ ಜಿಲ್ಲಾ ಕೋವಿಡ್ ಸಹಾಯವಾಣಿ 08375-249102/249103/249104 ಇಲ್ಲಿ ನೊಂದಾಯಿಸಿಕೊಳ್ಳಲು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಕೋರಿದ್ದಾರೆ.

Please follow and like us:
error