ಅನಿಷ್ಟ ದೇವದಾಸಿ ಪದ್ದತಿಗೆ ಬಲಿಯಾಗುತ್ತಿದ್ದ ಯುವತಿಯನ್ನು ರಕ್ಷಿಸಿದ ಜಿಲ್ಲಾಡಳಿತ

ಕೊಪ್ಪಳ : ಅಮಾಯಕ ಯುವತಿ ದೇವದಾಸಿಯಾಗುವದನ್ನು ಜಿಲ್ಲಾಡಳಿತ ತಪ್ಪಿಸಿ ಸಂರಕ್ಷಣೆ ಮಾಡಿದೆ. ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. 25ರ ಪ್ರಾಯದ ಯುವತಿ. ಬದುಕಿನ ಬಗ್ಗೆ ಅಪಾರ ಭರವಸೆ, ಕನಸುಗಳನ್ನು ಕಟ್ಟಿಕೊಂಡಿದ್ದ ಆ ಯುವತಿ ಇನ್ನೇನು ದೇವದಾಸಿಯಾ ಗುವಷ್ಟರಲ್ಲಿ ಪೊಲೀಸರು ತಡೆದು, ಆಕೆಯನ್ನ ದೇವದಾಸಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ ಘಟನೆ ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣ ಸಮೀಪದ ಬಸವಣ್ಣ ಕ್ಯಾಂಪ್‌ನಲ್ಲಿ ಮಂಗಳವಾರ ನಡೆದಿದೆ.

ತಾವರಗೇರಾ ಸಮೀಪದ ಬಸವಣ್ಣ ಕ್ಯಾಂಪ್‌ನ ಹುಸೇನಪ್ಪ ಮತ್ತು ಅಸೆಂಗೆಮ್ಮ ದಂಪತಿಯ‌ ಪುತ್ರಿಯನ್ನು ಮುದಗಲ್ ಠಾಣಾ ವ್ಯಾಪ್ತಿಯ ರಾಮತ್ನಾಳ ಗ್ರಾಮದ ಕಂಠಿ ದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರ ದೇವದಾಸಿಯನ್ನಾಗಿ ಮಾಡಲು ಸಿದ್ಧತೆ ನಡೆದಿರುವ ಖಚಿತ ಮಾಹಿತಿ ಮೇರೆಗೆ ತಾವರಗೇರಾ ಪೊಲೀಸರು ದಾಳಿ ನಡೆಸಿದ್ದು, ಯುವತಿ ದೇವದಾಸಿಯಾಗುವ ಅನಿಷ್ಠ ತಪ್ಪಿದೆ. ಯುವತಿಯನ್ನು ರಕ್ಷಿಸಿದ ಪೊಲೀಸರು ಹೆತ್ತವರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ರಕ್ಷಣೆಗೊಳಗಾದ ಯುವತಿ ಕೊಪ್ಪಳದ ದೇವದಾಸಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ, ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದರು. ಕಂಟೆಮ್ಮ‌ ದೇವಸ್ಥಾನದಲ್ಲಿ ನಡೆಯಬೇಕಿದ್ದ ಅನಿಷ್ಠ ಪದ್ದತಿ ತಪ್ಪಿದಂತಾಗಿದೆ.

Please follow and like us:
error