You are here
Home > ಕರ್ನಾಟಕ > ಅನಾಥ ಮಗುವನ್ನು ಸಾಕಿದ ದಂಪತಿಯ ಕಣ್ಣೀರಿಗೆ ಕರಗುವುದೇ ಕಾನೂನು

ಅನಾಥ ಮಗುವನ್ನು ಸಾಕಿದ ದಂಪತಿಯ ಕಣ್ಣೀರಿಗೆ ಕರಗುವುದೇ ಕಾನೂನು

 ಮಕ್ಕಳಿಲ್ಲದೇ ದಶಕಗಳನ್ನೇ ಕಳೆದಿದ್ದ  ದಂಪತಿಯ ಮನೆಯಲ್ಲಿ ಎರಡು ತಿಂಗಳಿನಿಂದ ಮನೆಮಾಡಿದ್ದ ಸಂಭ್ರಮ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.

ನಮಗೆ ಆ ದೇವರೇ ಮಗು ಕರುಣಿಸಿದ ಎಂಬ ಕುಟುಂಬದ ಖುಷಿ ಕ್ಷಣಮಾತ್ರದಲ್ಲಿ ಕರಗಿಹೋಗಿದೆ. ಆದರೂ ಕೂಡ ಮಾನವೀಯತೆ ನೆಲೆಯಲ್ಲಿ ನಿಂತು ಒಮ್ಮೆ ಯೋಚನೆ ಮಾಡಿದರೆ ಮಗುವನ್ನು ನೀಡುಬಹುದು ಎಂಬ ಆಶಾಭಾವನೆಯಲ್ಲಿ ಆ ಕುಟುಂಬ ಇನ್ನೂ ಕಾಯುತ್ತಿದೆ.ಮುಬಾರಕ್ ಮತ್ತು ನಾಜೀರಾ ಬಾನು ಚಿಕ್ಕಮಗಳೂರಿನ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು. ಕಳೆದೆರಡು ತಿಂಗಳ ಹಿಂದೆ ಇದೇ ಬಡಾವಣೆಯಲ್ಲಿದ್ದ  ಜಾಲಿ ಮುಳ್ಳಿನ ಪೊದೆಯ ಬಳಿ ಈ ದಂಪತಿಗೆ ನವಜಾತ  ಗಂಡು ಶಿಶು ಸಿಕ್ಕಿತ್ತು. ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಿಲ್ಲ ಎನ್ನುವ ಕೊರಗಿನಲ್ಲಿದ್ದ ಈ ದಂಪತಿಯ ಬಾಳಲ್ಲಿ ಹೊಸ ಬೆಳಕು ಮೂಡಿದಂತಾಗಿತ್ತು. ಬೇಲಿಯಲ್ಲಿ ಸಿಕ್ಕಿದ್ದ  ಮಗುವಿಗೆ ಅಬ್ದುಲ್ಲಾ ಅಂತ ಹೆಸರಿಟ್ಟು ಸಂಭ್ರಮಿಸಿದರು. ಆದರೆ ಮಕ್ಕಳ ಕಲ್ಯಾಣ ಸಮಿತಿಗೆ ಈ ದಂಪತಿಗೆ ಮಗು ಸಿಕ್ಕಿರುವ ವಿಚಾರ ಗೊತ್ತಾಗಿದೆ. ದಂಪತಿ ಎಷ್ಟೇ ಅಂಗಲಾಚಿದರೂ ಅಧಿಕಾರಿಗಳು ನೀವು ಮಗು ಸಾಕೋದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎನ್ನುತ್ತಿದ್ದಾರೆ.ಕಾ ನೂನಿನ ಪ್ರಕಾರ ನಿಮಗೆ ಮಗು ನೀಡಲು ಸಾಧ್ಯವಿಲ್ಲ. ಆದರೆ ಮಗುವನ್ನ ದತ್ತು ತೆಗೆದುಕೊಳ್ಳುವ ಅವಕಾಶ ಇದೆ. ಹಾಗಾಗಿ ಮಗುವನ್ನು ದತ್ತು ತೆಗೆದುಕೊಳ್ಳಿ ಎನ್ನುವುದು ಅಧಿಕಾರಿಗಳ ಸಲಹೆ. ಆದರೆ ಈ ದಂಪತಿ ದತ್ತು ಸ್ವೀಕಾರ ಕೇಂದ್ರಕ್ಕೆ ಹೋದರೆ ಅವರಿಗೆ ಈ ಮಗು ಸಿಗಲ್ಲ. ಬೇರೆ ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗುತ್ತದೆ. ಸಹಜವಾಗಿಯೇ ಈ ಮಗುವನ್ನು  ಅಧಿಕಾರಿಗಳ ಕೈಗೆ ಒಪ್ಪಿಸಬೇಕಾಗುತ್ತದೆ. ಈ ವಿಚಾರ ತಿಳಿಯುತ್ತಿದ್ದಂತೆ ಮುಬಾರಕ್ ದಂಪತಿ ಮತ್ತು ಕುಟುಂಬಸ್ಥರಿಗೆ ತೀವ್ರ ಆಘಾತವಾಗಿದೆ. ಇನ್ನು  ಇದೇ ವಿಚಾರ ಸಂಬಂಧ ಇಂದು ಮಗುವನ್ನು ರಕ್ಷಣಾ ಸಮಿತಿ ಮುಂದೆ ಹಾಜರು ಪಡಿಸುವಂತೆ ಅಧಿಕಾರಿಗಳು ನೋಟಿಸ್ ರವಾನೆ ಮಾಡಿದ್ದಾರೆ.ಒಟ್ಟಾರೆ ಕಾನೂನಿನ ದೃಷ್ಠಿಯಲ್ಲಿ ಅನಾಥ ಮಗುವನ್ನು ಸಾಕುವುದು ಅಪರಾಧ ಸರಿ. ಆದರೆ ಆ ಮಗುವನ್ನು 2 ತಿಂಗಳು ಆರೈಕೆ ಮಾಡಿ ಈಗ ಮಗುವನ್ನು ಅಗಲುವ ಸ್ಥಿತಿ ತಲುಪಿರುವ ದಂಪತಿಯ ಸಂಕಟ, ಮಾನವೀಯತೆ ನೆಲೆಯ ಆಧಾರದಮೇಲೆ ಈ ದಂಪತಿಗೆ ಸಿಕ್ಕ ಈ ಅಬ್ದುಲ್ಲಾನೇ  ಮಗನಾಗುತ್ತಾನಾ- ಕಾದು ನೋಡ್ಬೇಕು

Leave a Reply

Top