ಅನಸೂಯಾ ಜಾಗೀರದಾರರಿಗೆ ಕುವೆಂಪು ಪುರಸ್ಕಾರ ಪ್ರದಾನ

ಕೊಪ್ಪಳ : ಕೇಂದ್ರ ಕನ್ನಡ ಸಾಹಿತ್ಯವೇದಿಕೆ ಬೆಂಗಳೂರು ಹಾಗು ಶಿವಮೊಗ್ಗ ಜಿಲ್ಲಾ ಘಟಕ ಹಾಗು ಸಾಗರ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಬರಹಗಾರರೂ ಸಂಘಟಕರೂ ಹಾಗು ಕವಯತ್ರಿ ಅನಸೂಯ ಜಹಗೀರದಾರರಿಗೆ ಕುವೆಂಪು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಪುರಸ್ಕಾರವನ್ನು ನಾಡಿನ ಹೆಸರಾಂತ ಸಾಹಿತಿ ನಾ. ಡಿಸೋಜ ಅವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿದ ಜಿಲ್ಲೆಯ ಸಾಧಕರನ್ನು ಗುರುತಿಸಿ
ಯು ಆರ್ ಅನಂತಮೂರ್ತಿ,
ಪೂರ್ಣಚಂದ್ರ ತೇಜಸ್ವಿ, ನಾ ಡಿಸೋಜ
ಪುರಸ್ಕಾರಗಳನ್ನು ಕೊಡಮಾಡಲಾಯಿತು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಧ್ಯಕ್ಷರಾದ ಕೊಟ್ರೇಶ ಉಪ್ಪಾರ, ಶಿವಮೊಗ್ಗ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಡಾ. ಹಸೀನಾ ಹಾಗು ಸಾಗರ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರಾಜ್ಯ ಕಾರ್ಯದರ್ಶಿ ಸಮುದ್ರವಳಗಳಿ ವಾಸು ಹಾಗು ರಾಜ್ಯ ಸಂಘಟನಾ ಮಹಿಳಾ ಕಾರ್ಯದರ್ಶಿ ಕುಮುದಾ ಹಾಗು ಇನ್ನಿತರ ಗಣ್ಯ ಮಾನ್ಯರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಸಾಗರ ತಾಲ್ಲೂಕಿನ ಸಿರಿವಂತೆ ಯಲ್ಲಿ ಬುದ್ಧಗೃಹ ಸ್ಥಳದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಿತು.

Please follow and like us:
error