ಅನರ್ಹ ಶಾಸಕ ಬಿಸಿ ಪಾಟೀಲ ತಮ್ಮ ಅಭಿಮಾನಿಗಳಿಗೆ ಬರೆದ ಪತ್ರದಲ್ಲೇನಿದೆ ಗೊತ್ತಾ ?/

ಹಾವೇರಿ : ಅನರ್ಹ ಶಾಸಕ ಬಿಸಿ ಪಾಟೀಲ ಕ್ಷೇತ್ರದ ಕಾರ್ತಕರ್ತರನ್ನುದ್ದೇಶಿಸಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದು ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಮೊದಲ ಬಾರಿ ಪ್ರತಿಕ್ರಿಯೆ

*ಆತ್ಮೀಯರೇ ಎಲ್ಲರಿಗೂ ನಮಸ್ಕಾರ… ಈ ಮೂಲಕ ನನ್ನ ಅಭಿಮಾನಿ ಬಂಧುಗಳು ಮತ್ತು ಕಾರ್ಯಕರ್ತರಿಗೆ ವಿನಂತಿಸಿ ಕೊಳ್ಳುವದೆನೆಂದರೆ ಇಷ್ಟು ದಿನ* *ತಾಲ್ಲೂಕಿನ ಅಭಿವೃದ್ದಿಗೆ ನನ್ನ ಜೊತೆಗೆ ಕ್ಯೆ ಜೋಡಿಸಿ ಎಂತಹ ಕಷ್ಟ ಕಾಲದಲ್ಲೂ ಜೊತೆಗಿದ್ದು. ನನ್ನ ತಾಲ್ಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆಯನ್ನು ಉಂಟು* *ಮಾಡಿದ ಈ ಹಿಂದಿನ ಸರ್ಕಾರದ ವಿರುದ್ಧ ಹೋರಾಡಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟಿರೋದು ತಮ್ಮಲ್ಲರಿಗೂ ಗೊತ್ತಿರುವ ಸಂಗತಿ.. ಅದರಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು*

*ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವಂತಹ ತೀರ್ಪು ಸ್ವಾಗತಿಸುತ್ತೇನೆ.. ಆದ್ದರಿಂದ ಸದ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗೆ ನಾವೆಲ್ಲರೂ* *ಸಿದ್ಧರಾಗಿ ಉಪ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕೆಂಬುದು ನನ್ನ ಹಾಗೂ ತಮ್ಮೆಲ್ಲರ ಆಶಯ. ಆದ್ದರಿಂದ ತಮ್ಮೆಲ್ಲರ ಅಪ್ಪಣೆ ಹಾಗೂ ಆರ್ಶಿವಾದದಿಂದ  ನಾನು ನಾಳೆ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಬೆಂಗಳೂರಿನಲ್ಲಿರುವ ಭಾರತೀಯ ಜನತಾ ಪಾರ್ಟಿ { B.J.P } ಕಚೇರಿಯಲ್ಲಿ ಬಿಜೆಪಿ ಪಕ್ಷವನ್ನು* *ಸೇರ್ಪಡೆಗೊಳ್ಳುತ್ತಿದ್ದೇನೆ. ಹಾಗೂ  ಸಾಯಂಕಾಲ 3 ಗಂಟೆಗೆ ಬೆಂಗಳೂರಿನಿಂದ ಹಿರೇಕೆರೂರ ತಾಲ್ಲೂಕಿಗೆ ಆಗಮಿಸುತ್ತಿದ್ದು*

*ತಾಲ್ಲೂಕಿನ ಬತ್ತೀಕೊಪ್ಪ ಕ್ರಾಸ್ ನಿಂದ ಹಿರೇಕೆರೂರನವರೆಗೆ ಬೈಕ್ ರೈಾಲಿಯನ್ನು ಹಮ್ಮಿಕೊಂಡಿದ್ದು ಕಾರಣ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಕಾರ್ಯಕರ್ತರು ಅಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬ್ಯೆಕ್ ರೈಾಲಿಯನ್ನು  ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರುತ್ತೇನೆ…* 
*ತಮ್ಮ ಸೇವಕ*

*ಬಿ.ಸಿ.ಪಾಟೀಲ್* 

*ಹಿರೇಕೆರೂರು*

Related posts