ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ- ಲಕ್ಷ್ಮಣ ಸವದಿ

ಬೆಳಗಾವಿ , : ‘ ಅನರ್ಹ ಶಾಸಕರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ‘ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ . ಬುಧವಾರ ನಗರದಲ್ಲಿ ಮಾಧ್ಯಮ 

ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಅನರ್ಹ ಶಾಸಕರ ಬಗ್ಗೆ ನಾವು ಏಕೆ ಚಿಂತೆ ಮಾಡಬೇಕು . ಅನರ್ಹ ಶಾಸಕರ ಬಗ್ಗೆ ನಾವು ಚಿಂತೆ ಮಾಡುವ ಅಗತ್ಯವೂ ಇಲ್ಲ . ಅವರು ನಮ್ಮ ಪಕ್ಷಕ್ಕೆ ಬರುವ ಬಗ್ಗೆ ನಾವು ಎಲ್ಲಿಯೂ ಹೇಳಿಲ್ಲ ಎಂದರು . ಕೆ . ಆರ್‌ . ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದ ವೇಳೆ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದರೆ , ಅದನ್ನು ಪ್ರಶ್ನಿಸಿದ ಅವರೆಲ್ಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ . ಅನರ್ಹ ಶಾಸಕರು ತಮಗೆ ನ್ಯಾಯ ಸಿಗಬೇಕೆಂದು , ಕಾಂಗ್ರೆಸ್ ತಮಗೆ ನ್ಯಾಯ ದೊರೆಯಬೇಕೆಂದು ಕೋರ್ಟ್‌ಗೆ ಹೋಗಿದ್ದಾರೆ . ಇದು ಅವರಿಬ್ಬರ ನಡುವಿನ ವ್ಯಾಜ್ಯ . ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ . ಹೀಗಿರುವಾಗ ನಾವೇಕೆ ಉತ್ತರ ನೀಡಬೇಕು . ಈ ಕ್ಷಣದ ವರೆಗೂ ಅನರ್ಹ ಶಾಸಕರಿಗೂ , ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಲಕ್ಷ್ಮಣ್ ಸವದಿ ಇದೇ ವೇಳೆ ಸ್ಪಷ್ಟಪಡಿಸಿದರು .

Please follow and like us:
error