ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ

ಬೆಂಗಳೂರು : ಅತಿಥಿ ಉಪನ್ಯಾಸಕರನ್ನಯ ಮುಂದಿನ ೨೦-೨೧ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಿ ಸರಕಾರ ಆದೇಶ ಹೊರಡಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಉನ್ನತ ಶಿಕ್ಷಣದ ಆಧೀನ ಕಾರ್ಯದರ್ಶಿಯವರ

ಆದೇಶ ಈ ರೀತಿ ಇದೆ

, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕೋವಿಡ್ -19 ಹಿನ್ನಲೆಯಲ್ಲಿ 2020-21 ನೇ ಶೈಕ್ಷಣಿಕ ಸಾಲಿಗೂ ಇವರ ಸೇವೆಯನ್ನು ಮತ್ತೊಂದು ವರ್ಷಕ್ಕೆ ಮುಂದುವರೆಸುವ ಕುರಿತು . ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ 2019-20 ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಒಂದು ದಿನದ ಮಟ್ಟಿಗೆ ಬಿಡುಗಡೆಗೊಳಿಸಿ , ಕೂವಿಡ್ 19 ರೋಗದ ಪ್ರಸರಣೆಯಿಂದಾಗಿ ಎದುರಾಗಿರುವ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ , 2020-21 ನೇ ಶೈಕ್ಷಣಿಕ ಸಾಲಿಗೂ ಇವರ ಸೇವೆಯನ್ನು ಸಾರ್ವಜನಿಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೊಂದು ವರ್ಷಕ್ಕೆ ಒಂದು ಬಾರಿಯ ಕ್ರಮವಾಗಿ ಮಾತ್ರ ನಿಯಮಾನುಸಾರ ಮುಂದುವರೆಸುವಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ .

ತಮ್ಮ ನಂಬುಗೆಯ ( ಶೀತಲ್ ಎಂ . ಹಿರೇಮಠ ) ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ ( ವಿಶ್ವವಿದ್ಯಾನಿಲಯ -1 )

Please follow and like us:
error