ಅಗಸ್ಟ್ ೩೧ರವರೆಗೆ ಶಾಲೆಗಳನ್ನು ತೆರೆಯದಿರಲು ಸರಕಾರ ಆದೇಶ

ಬೆಂಗಳೂರು : ಕೋವಿಡ್ ೧೯ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಶಾಲೆಗಳನ್ನು ಅಗಸ್ಟ್ ೩೧ರವರೆಗೆ ತೆರೆಯದಿರುವಂತೆ ಆದೇಶ ನೀಡಿದೆ. ಈಗಾಗಲೇ ಎಲ್ಲಾ ಖಾಸಗಿ, ಅನುದಾನಿತ, ಅನುದಾನರಹಿತ , ಸರಕಾರಿ ಶಾಲೆಗಳು ಮುಚ್ಚಲಾಗಿದೆ. ಇದನ್ನೇ ಮುಂದುವರೆಸುವಂತೆ ಅಗಸ್ಟ್ ೩೧ ರವರೆಗೆ ತೆರೆಯಬಾರದು ಎಂದು ಸರಕಾರ ಆದೇಶ ನೀಡಿದೆ.

ದಿನಾಂಕ : 31-8-20219 ರವರೆಗೆ ಮುಚ್ಚುವ ಬಗ್ಗೆ ಉಲ್ಲೇಖ : 1 ) ಗೃಹ ವ್ಯವಹಾರಗಳ ಸಚಿವಾಲಯ , ನವದೆಹಲಿ ಕಛೇರಿಯ ಪತ್ರ ಸಂಖ್ಯೆ : DO No 40-3 / 2020 – DM- ( A Date : 29-7-2020 ಕೆವಿಡ್ -19 ವೈರಸ್ ಸೋಂಕು ಹರಡುತ್ತಿರುವುದು ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದಿನಾಂಕ : 31-7-2020ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಿರುವಂತೆ ಆದೇಶಿಸಲಾಗಿತ್ತು . ಉಲ್ಲೇಖ ( ³ ) ರ ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ಶಾಲೆಗಳು , ಕಾಲೇಜುಗಳು , ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ದಿನಾಂಕ : 31-8-2020ರವರೆಗೆ ಮುಚ್ಚುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ , ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ದಿನಾಂಕ : 31-8-2020ರವರೆಗೆ ಮುಚ್ಚಿರತಕ್ಕದ್ದು .

ಎಂದು ಆಯುಕ್ತರು , ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದ್ದಾರೆ

Please follow and like us:
error