ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ


ಮಹದೇವ ಪ್ರಕಾಶ್ ಒಬ್ಬ ಪ್ರಖರ ಪತ್ರಕರ್ತ: ಸೋಮಣ್ಣ

ಬೆಂಗಳೂರು:
ಕೋವಿಡ್ ಗೆ ಬಲಿಯಾದ ಪತ್ರಕರ್ತರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಹದೇವ ಪ್ರಕಾಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ಅಪಾರ ಜ್ಞಾನ ಭಂಡಾರ ಆಗಿದ್ದ ಅವರು, ಯಾವುದೇ ಕಾಲಘಟ್ಟದ ರಾಜಕೀಯ ವಿಮರ್ಶೆಯನ್ನು ಸಮರ್ಥವಾಗಿ ಮಾಡುತ್ತಿದ್ದ ಅಪರೂಪದ ಕ್ರಿಯಾಶೀಲ ಪತ್ರಕರ್ತ ಎಂದು ಸ್ಮರಿಸಿದರು.

ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ದೇಣಿಗೆ ನೀಡುವುದಾಗಿ ತಿಳಿಸಿದ ಅವರು, ಅವರ ಸ್ಮರಣಾರ್ಥ ಪುಸ್ತಕ ತರುವಂತೆ ಸಲಹೆ ಮಾಡಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸುದ್ದಿ ಮನೆ, ಹಲವು ಕ್ರಿಯಾಶೀಲ ಪತ್ರಕರ್ತರನ್ನು ಕಳೆದುಕೊಂಡು ಬಡವಾಗಿದೆ. ಮಹದೇವ ಪ್ರಕಾಶ್ ಅವರ ಅಗಲಿಕೆ ಮಾಧ್ಯಮ ಕ್ಷೇತ್ರಕ್ಕೆ ಆದ ನಷ್ಟ ಎಂದರು.
ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಬೆಂಗಳೂರು ಘಟಕ ಅಧ್ಯಕ್ಷ ಸೋಮಶೇಖರ ಗಾಂಧಿ, ಕಾರ್ಯದರ್ಶಿ ದೇವರಾಜು ಮತ್ತಿತರರು ಹಾಜರಿದ್ದರು.

ಹಿರಿಯ ಪತ್ರಕರ್ತರಾದ ಮಹದೇವ ಪ್ರಕಾಶ್, ಕಲಬುರ್ಗಿ ಜಯತೀರ್ಥ ಕಾಗಲಕರ, ಚನ್ನರಾಯಪಟ್ಟಣ ತಾಲ್ಲೂಕಿನ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ‌ಸ್ವಾಮಿಗೌಡ, ನಿವೃತ್ತ ವಾರ್ತಾ ಇಲಾಖೆ ಆಯುಕ್ತ ಕೆವಿಆರ್ ಠ್ಯಾಗೂರ್, ತುಮಕೂರು ವಾರ್ತಾಧಿಕಾರಿ ಮಂಜುನಾಥ್, ಪಬ್ಲಿಕ್ ಟಿವಿ ಕ್ಯಾಮರಾಮೆನ್ ಬಸವರಾಜ ಕೋಟಿ, ಆಕಾಶವಾಣಿ& ದೂರದರ್ಶನದಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ವಿ.ಎಸ್.ಸೂರ್ಯನಾರಾಯಣ ರಾವ್, ಕೆಯುಡಬ್ಲ್ಯೂಜೆ ಯಲ್ಲಿ ಮಂಡ್ಯ ವನಸುಮ ಪತ್ರಿಕೆಯ ಹೆಸರಿನಲ್ಲಿ ಪ್ರಶಸ್ತಿ ಪ್ರತಿಷ್ಠಾಪನೆ ಮಾಡಿದ ಆ ಪತ್ರಿಕೆ ಸಂಪಾದಕ ಎಲ್.ಆರ್.ವಾಸುದೇವ ರಾವ್ ರಾಳೇಕರ್, ಮಂಡ್ಯ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜ್, ಇಂದು ಸಂಜೆ ಪತ್ರಿಕೆ ಸಂಪಾದಕ ವಿ.ನಾಗರಾಜ್, ಬೀದರ್ ಹಿರಿಯ ಪತ್ರಕರ್ತ ಪಂಡರಿ ಎಲ್ಲೇನೂರ, ದೇವನಹಳ್ಳಿ ಮೇಘವಾಯ್ಸ್ ಪತ್ರಿಕೆ ಸಂಪಾದಕ ಲಕ್ಷ್ಮೀನಾರಾಯಣ, ಹವ್ಯಾಸಿ ಪತ್ರಕರ್ತ ಎಚ್.ಗವಿಸಿದ್ದಯ್ಯ, ಮಂಗಳ ವಾರಪತ್ರಿಕೆಯ ಟಿ.ಕೆ.ಸುಬ್ರಹ್ಮಣಿ, ವಿಜಯಪುರ ಕಾನಿಪ ಸಂಘದ ಕಾರ್ಯದರ್ಶಿ ಶಮ್ಸುದ್ದೀನ್ ಸೈಯದ್, ಗುಂಬಜ್ ಎಕ್ಸ್‌ಪ್ರೆಸ್‌ ನ ದತ್ತಾತ್ರೇಯ ಪಾನಾಳಕ ಸೇರಿದಂತೆ ಅಗಲಿದ ಎಲ್ಲಾ ಪತ್ರಕರ್ತರ ಆತ್ಮಕ್ಕೆ ಶಾಂತಿ ಕೋರಲಾಯಿತು.

Please follow and like us:
error