ಅಂಬೇಡ್ಕರ್ ಜಯಂತಿ.

ಎಪ್ರಿಲ್ ೧೪ ರಂದು ಸ್ವಾತಂತ್ರ ಭಾರತದ ಸಂವಿಧಾನ ಶಿಲ್ಪಿ, ಆಧುನಿಕ ಮನು, ಸಮಾನತೆಯ ಹರಿಕಾರ, ದಲಿತರ ಆಶಾಜ್ಯೋತಿ, ಸಮಾನತೆಗಾಗಿ, ಮಾನವೀಯತೆಯ ಮೌಲ್ಯಗಳಿಗಾಗಿ ಅಹರ್ನಿಶಿ ದುಡಿದ ಪುರುಷ ಸಿಂಹ, ಭಾರತಾಂಭೆಯ ಹಮ್ಮೆಯ ವರಪುತ್ರ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮದಿನವನ್ನು ಆಚರಣೆಯನ್ನು ಮಾಡುತ್ತೇವೆ. index
ಬಿ.ಆರ್. ಅಂಬೇಡ್ಕರ್ ೧೮೯೧ ರ ಎಪ್ರಿಲ್ ೧೪ ರಂದು ಮಹರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿನ ಅಂಬಾವಾಡಿ ಗ್ರಾಮದಲ್ಲಿ ಜನಿಸಿದರು. ತಂದೆ ರಾಮಜೀ ಸಕ್‌ಪಾಲ್, ತಾಯಿ ಭೀಮಾಬಾಯಿ ಇವರು ಈ ದಂಪತಿಗಳ ೧೪ ನೇ ಸುಪುತ್ರ ಸಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಹಿಂದೂ ಸಮಾಜದಲ್ಲಿ ಪ್ರಮುಖವಾಗಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿವೆ. ಈ ಜಾತಿ ಏಣಿಯ ಕೆಳಗಡೆಯ ಮೆಟ್ಟಿಲಾಗಿ ಪಂಚಮರು ಎಂದು ಕರೆಯಲ್ಪಡುವ ಅಸ್ಪು ಶ್ಯರು, ಹರಿಜನರು ಇದ್ದಾರೆ. ಅಂತಹ ಜಾತಿಯ ಅಂದರೆ ನಮ್ಮಲ್ಲಿನ ಮಾದಿಗ ಜಾತಿಗೆ ಸರಿಸಮಾನವಾದ ಮಹಾರ್ ಜಾತಿಯಲ್ಲಿ ಹುಟ್ಟಿದವರೇ ಭೀಮರಾವ್ ರಾಮಜೀ ಅಂಬವಾಡೇಕರ್.
ಅಂಬವಾಡೇಕರ್ ಕುಟುಂಬ ಜಾತಿ ಮತಬೇದಗಳಲ್ಲಿ ನಂಬಿಕೆ ಇಲ್ಲದ ಕಬೀರದಾಸ್ ಭಕ್ತಿ ಪಂಥಕ್ಕೆ ಸೇರಿತ್ತು. ಜಾತಿ, ಪಂಥಗಳ ವ್ಯತ್ಯಾಸ ಮುಖ್ಯವಲ್ಲ. ಹರಿಭಜನೆ ಮಾಡುವವರೆಲ್ಲಾ ದೇವರಿಗೆ ಸೇರಿದವರು ಎಂಬ ನಂಬಿಕೆಯೇ ಅವರದು. ತಂದೆ ರಾಮಜೀ ಸೈನ್ಯ ಶಾಲೆಯ ಮುಖ್ಯೋಪಾಧ್ಯಾಯರು ತಾಯಿ ಸುಗುಣಶೀಲೆ ಹಾಗೂ ದೈವಭಕ್ತೆ ಅದರಿಂದಾಗಿ ಮನೆಯಲ್ಲಿ ಸುಸಂಸ್ಕೃತ ವಾತಾವರಣವಿತ್ತು. ಸಸ್ಯಹಾರ,ಪ್ರೀತಿ, ವಿಶ್ವಾಸ, ಸಹನೆ, ಸಹೃದಯತೆ, ಭಕ್ತಿ ಮೊದಲಾದ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಉತ್ತಮ ಪರಿಸರವಿತ್ತು. ಸರಳತೆ, ಸಜ್ಜನಿಕೆ, ಹೃದಯ ಶ್ರೀಮಂತಿಕೆ, ಔದಾರ್ಯ ವ್ಯಕ್ತಿತ್ವದಲ್ಲಿ ಬೆಳೆದು ಬರಲು ಪೂರಕ ವಾತಾವರಣವಿತ್ತು.
ಇನ್ನೂ ಕುಟುಂಬದ ಹೊರಗಿನ ಸಮಾಜಕ್ಕೆ ಸಂಬಂಧಿಸಿದಂತೆ ೧೯೪೭ರ ಹಿಂದಿನ ಹರಿಜನರ ಬಾಳು ನಿಜಕ್ಕೂ ನಾಯಿ ಬಾಳು. ಅಂದಿನ ದಿನಗಳಲ್ಲಿ ಕೆಲವು ಕಡೆ ಅಸ್ಪ ಶ್ಯ ಜಾತಿಯ ಯಾವ ವ್ಯಕ್ತಿಯು ಮೇಲ್ಜಾಜಿಯವರು ವಾಸಿಸುತ್ತಿದ್ದ ಬೀದಿಗಳಲ್ಲಿ ಹಗಲಿನ ಬೆಳಿಗ್ಗೆ ಒಂಬತ್ತು ಗಂಟೆಯೊಳಗೆ ಮತ್ತು ಮಧ್ಯಾಹ್ನ ಮೂರ ನಂತರ ತಿರುಗಾಡುವಂತಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ವ್ಯಕ್ತಿಯ ನೆರಳು ಉದ್ದವಾಗಿದ್ದು ಮೇಲ್ಜಾತಿಯವರ ಮೇಲೆ ಬಿದ್ದು ಮೈಲಿಗೆ ಮಾಡಬಹುದಾದ ಸಂಭವವಿತ್ತು! ನಿರ್ಧಿಷ್ಟ ಅವಧಿಯಲ್ಲಿ ತಿರುಗಾಡಬಹುದಾಗಿದ್ದರು ಆ ಬೀದಿಯ ಮೇಲೆ ಉಗುಳುವ ಸ್ವಾತಂತ್ರವಿರಲಿಲ್ಲ. ಒಂದು ವೇಳೆ ಕೆಮ್ಮು ಮೊದಲಾದ ಕಾರಣಗಳಿಂದ ತೊಂಟೆಬಂದು ಉಗುಳುವಂತಾದರೆ, ದನಗಳಿಗೆ ಕುಕ್ಕೆಹಾಗೆ ಇವರ ಕುತ್ತಿಗೆಗೆ ಒಂದು ಚಿಪ್ಪು ಅಥವಾ ಕುಡಿಕೆ ಕಟ್ಟಿಕೊಂಡು ಅದರಲ್ಲಿ ಉಗುಳಿಕೊಂಡು ಸಾಗಬೇಕಿತ್ತು! ಬೀದಿಗಳ ಬದಿಯಲ್ಲಿ ಅಲ್ಲಲ್ಲಿ ಗುಂಡಿಗಳಿರುತ್ತಿದ್ದು ತಾವು ನಡೆದು ಹೋಗುತ್ತಿರುವಾಗ ಒಂದು ವೇಳೆ ಸವರ್ಣಿಯರು ಎದುರಿಗೆ ಬಂದರೆ ಅವರ ಮೇಲೆ ಇವರ ನೆರಳು ಬಿಳದಿರಲಿ, ಇವರ ಮೇಲೆ ಬಿಸಿದ ಗಾಳಿ ಅವರಿಗೆ ತಗುಲದಿರಲಿ ಎಂದು ಆ ಗುಂಡಿಗಳಲ್ಲಿ ಹೋಗಿ ಕುಳಿತುಕೊಳ್ಳಬೇಕಿತ್ತು. ಅಸ್ಪು ಶ್ಯರು ಊರಿನ ಒಳಗಡೆ ಕೆಲವು ಬೀದಿಗಳಲ್ಲಿ ಬರುವಾಗ ಹೊಲೆಯ, ಹೊಲೆಯ ಎಂದು ತಾವೇ ಕೂಗಿಕೊಂಡು ಬರಬೇಕಿತ್ತು! ಆಗ ಜನ ಎಚ್ಛೆತ್ತು ಆದಷ್ಟು ದೂರ ಇರುತ್ತಿದ್ದರು. ನಮ್ಮ ಹಿಂದುಗಳಿಗೆ ಅವರು ಸೇರಿದ್ದರು, ನಾವು ಪೂಜಿಸುವ ರಾಮ, ಕೃಷ್ಣ, ಶಿವ, ಪಾರ್ವತಿ ಮೊದಲಾದ ದೇವರು ದೇವತೆಗಳನ್ನು ಪೂಜಿಸುತ್ತಿದ್ದರು. ಅವರು ಆ ದೇವಾಲಯಗಳಿಗೆ ಪ್ರವೇಶಿಸುವಂತಿರಲಿಲ್ಲ. ಸವರ್ಣಿಯರ ಕೆರೆ, ಕಟ್ಟೆ, ಬಾವಿ, ಸ್ಮಶಾನಗಳನ್ನು ಉಪಯೋಗಿಸುವಂತಿರಲಿಲ್ಲ.
ಅಂಬವಾಡೇಕರ್‌ರವರಿಗೂ ಬಾಲ್ಯದಲ್ಲಿ ಇಂತಹ ಕೆಲವು ಕಹಿ ಅನುಭವಗಳಾದವು. ಒಮ್ಮೆ ಆತ ತನ್ನ ಅಣ್ಣನೊಡಗೂಡಿ ತಮ್ಮ ತಂದೆಯವರನ್ನು ನೋಡಲು ಅವರು ಕೆಲಸ ಮಾಡುತ್ತಿದ್ದ ಊರಿಗೆ ಹೋರಟರು ರೈಲು ಹತ್ತಿ ಮಾಸೂರು ಎಂಬ ರೈಲ್ವೆ ನಿಲ್ದಾಣದಲ್ಲಿ ಇಳಿದು ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದು ಮೂರು ಮೈಲಿ ಪ್ರಯಾಣಕ್ಕಾಗಿ ಕುಳಿತು ಹೋಗುತ್ತಿದ್ದಾರೆ. ಅವರ ಮಾತುಕತೆಗಳಿಂದ ಆ ಸವರ್ಣಿಯ ಗಾಡಿಯವನಿಗೆ ಅವರು ಅಸ್ಪು ಶ್ಯರು ಎಂದು ಗೋತ್ತಾಯಿತು. ಅವನು ಇದ್ದಕ್ಕಿದ್ದಂತೆಯೇ ಗಾಡಿ ನಿಲ್ಲಿಸಿ, ಮೂಕಿಯನ್ನು ಎತ್ತಿ ಅನಾಮತ್ ಗೊಬ್ಬರ ಸುರಿಯುವಂತೆ ಸುರಿದು ಅವಾಚ್ಯ ಶಬ್ಧಗಳಿಂದ ಬೈಯಲು ಆರಂಭಿಸಿದ. ಆ ಹುಡುಗರು ರಫ್ ಎಂದು ಬಿದ್ದು ಹಿಂದೆ-ಮುಂದೆ ನೋಡದೇ ಓಡಬೇಕಾಯಿತು.
ಸುಡುಬಿಸಿಲು ಕುಡಿಯಲು ನೀರು ಬೇಕಾಯಿತು. ೪-೫ ಜನರನ್ನು ವಿನಂತಿಸಿಕೊಂಡರು ನೀರು ಕೋಡಲಿಲ್ಲ. ಒಂದು ಹಳ್ಳದ ನೀರನ್ನು ಕದ್ದು ಕುಡಿದು ಹೋಗಬೇಕಾಯಿತು.
ಎಂತೆಂತಹ ಕೊಳಕು ತಲೆಗಳ ಕ್ಷೌರ ಮಾಡುತ್ತಿದ್ದ ಕ್ಷೌರಿಕನು ಪರಿಶುದ್ಧ, ಶುಭ್ರ ಅಂಬೇಡ್ಕರ್ ತಲೆಯ ಕ್ಷೌರ ಮಾಡಲು ನಿರಾಕರಿಸಿದ. ಸತಾರಾ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಶಾಲೆಯ ಒಳಗು ಇದ್ದಿದ್ದು ವಿಚಿತ್ರ ಪರಸ್ಥಿತಿ. ಸವರ್ಣಿಯ ಬಾಲಕಬಾಲಕಿಯರು ಬಹಳ ಮುಂದೆ ಅಂಬವಾಡೇಕರ್ ಹಿಂದಿನ ಗೋಡೆಯ ಬಳಿ ತಾವೇ ತಂದಿದ್ದ ಗೋಣಿಚೀಲದ ಮೇಲೆ ಕುಳಿತಿರ ಬೇಕಾಗಿತ್ತು. ಉಪಾಧ್ಯಾಯರು ಇವನನ್ನು ಇವನ ಪುಸ್ತಕಗಳನ್ನು ಮೈಲಿಗೆಯಾದರೇನು ಎಂಬ ಭಯದಿಂದ ಬಹಳ ಮಟ್ಟಿಗೆ ಮುಟ್ಟುತ್ತಿರಲಿಲ್ಲ. ಒಂದು ದಿನ ತರಗತಿ ಕೊಠಡಿಯಲ್ಲಿ ಲೆಕ್ಕದ ಉಪಾಧ್ಯಾಯರು ಇತನನ್ನು ಕಪ್ಪು ಹಲಗೆಯ ಬಳಿ ಕರೆದಾಗ ಮೇಲ್ಜಾತಿಯ ವಿದ್ಯಾರ್ಥಿಗಳು ಓಡಿ ಓಡಿ ಬಂದು ಮೈಲಿಗೆಯಾದವು ಎಂದು ತಿಂಡಿ ಇದ್ದ ಟಿಫೀನ್ ಕ್ಯಾರಿಯರ್‌ಗಳನ್ನು ಎತ್ತಿ ಓಡಿ ಅವರ ಜಾಗಗಳಲ್ಲಿ ಕುಳಿತರು! ಸಂಸ್ಕೃತ ಕಲಿಯಲೆಂದು ಶಾಲೆಗೆ ಸೇರಿ ಛೀ ಮಾರಿ ಹಾಕಲ್ಪಟ್ಟು ಹೋರಬಂದು ಸ್ವಂತ ಶಕ್ತಿಯಿಂದ ಸಂಸ್ಕೃತ ಕಲಿತ!
ಅಂಬವಾಡೇಕರ್ ಬುದ್ಧಿವಂತ, ಛಲಗಾರ, ನಿರ್ಭೀತ, ಆತ ಆರಂಭದಿಂದಲೂ ಒಬ್ಬ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ತಂದೆ ನಿವೃತ್ತರಾಗಿದ್ದು ಆದಾಯ ಕಡಿಮೆಯಿತ್ತು. ಮುಂಬಾಯಿಯ ಒಂದು ಚಿಕ್ಕ ಕೊಠಡಿಯಲ್ಲಿ ತಂದೆ ಮಗನ ವಾಸ. ಒಬ್ಬ ಮಲಗುವಷ್ಟು ಮಾತ್ರ ಜಾಗವಿದ್ದು ಆ ಕೊಠಡಿಯಲ್ಲಿ ೨ ಗಂಟೆ ರಾತ್ರಿಯವರೆಗೂ ಮಗನಿದ್ರೆ ಮಾಡಿ ನಂತರ ಎದ್ದು ಎದ್ದು ಓದಲು ತೋಡಗುವುದು. ತಂದೆ ಆ ಜಾಗದಲ್ಲಿ ನಿದ್ರೆ ಮಾಡುವುದು.
ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅಂಬೇಡ್ಕರ್ ಎಂಬ ಒಬ್ಬ ಉಪಾಧ್ಯಾಯರು ಅಂಬವಾಡೇಕರ್‌ರವರಿಗೆ ತುಂಬಾ ಪ್ರೀಯವಾಗಿದ್ದರು. ಅವನ ಬುದ್ಧಿಶಕ್ತಿ ಆತನ ಬಗ್ಗೆ ತಮಗಿದ್ದ ಪ್ರೀತಿ ಅಭಿಮಾನಗಳಿಂದ ಅವನ ಹೆಸರನ್ನು ಅಂಬೇಡ್ಕರ್ ಆಗಿ ಪರಿವರ್ತಿಸಿದರು. ಅಂದಿನಿಂದ ಆತ ಅಂಬೇಡ್ಕರ್ ಆದ.
ಅಂಬೇಡ್ಕರ್ ಎಸ್.ಎಸ್.ಎಲ್.ಸಿ. ಯನ್ನು ಮುಂಬೈಯಲ್ಲಿ ಮುಗಿಸಿದರು. ೧೭ ವರ್ಷ ವಯಸ್ಸಾಗಿದ್ದಾಗ ಅವರಿಗೆ ಬಾಲ್ಯವಿವಾಹ ಸಂಪ್ರದಾಯದಂತೆ ರಾಮಾಬಾಯಿ ಎಂಬುವವರೊಡನೆ ವಿವಾಹವಾಯಿತು. ನಂತರ ಬಿ.ಎ. ಯಲ್ಲಿ ಉತ್ತಿರ್ಣರಾದರು. ತಂದೆ ದೈವಾದೀನರಾದರು. ಅಂಬೇಡ್ಕರ್ ಬರೋಡಾ ಮಹರಾಜರ ಬಳಿ ಕೆಲಸಕ್ಕೆ ಸೇರಿದರು. ಅವರ ಪ್ರತಿಭೆಯನ್ನು ಗುರುತಿಸಿದ ರಾಜ ಅವರನ್ನು ಅಮೇರಿಕಾಕ್ಕೆ, ನಂತರ ಇಂಗ್ಲೇಡಿಗೆ ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದರು. ಅಲ್ಲಿ ಅವರು ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ವಿಷಯಗಳನ್ನು ಆಳವಾಗಿ ಅಭ್ಯೇಸಿಸಿ ಎಂ.ಎ. ಪಧವಿ, ಅನಂತರ ಡಾಕ್ಟರೇಟ್ ಪಡೆದರು. ಅವರು ವ್ಯಾಸಂಗ ಮಾಡುವಾಗ ಯಾವುದೇ ಮಿಸಲಾತಿ ಸೌಲಭ್ಯ ಪಡೆದುಕೊಳ್ಳದೆ ಕೇವಲ ಅರ್ಹತೆಯ ಆಧಾರದ ಮೇಲೆ ಶೈಕ್ಷಣಿಕ ಉನ್ನತಿ ಸಾಧಿಸಿದರು.
ಭಾರತಕ್ಕೆ ಮರಳಿದ ಮೇಲೆ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿ ಇಲ್ಲಿನ ಹರಿಜನರ ಪರಿಸ್ಥಿತಿಯನ್ನು ದೃದಯಂಗಮವಾಗಿ ತೀವ್ರತರವಾಗಿ ವರ್ಣಿಸಿ ಬರೆಯಲಾರಂಭಿಸಿದರು. ಅವರು `ಬಹಿಷ್ಕೃತ ಭಾರತ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಗಾಂಧಿಜೀಯವರ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿತ್ತು. ಗಾಂಧಿಜೀ `ಹರಿಜನ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಹೋದ ಕಡೆ ಹರಿಜನ ಕೇರಿಗಳಲ್ಲಿ ತಂಗುತ್ತಿದ್ದರು.
ಸಮಾಜಕ ಸುಧಾರಕ ಬೋಲೆಯವರು ದಲಿತರ ಹಿತರಕ್ಷಣೆಗಾಗಿ ಸಾರ್ವಜನಿಕ ಹಣದಿಂದ ನಿರ್ಮಾಣವಾದ ಕೆರೆ, ಕಟ್ಟೆ, ಬಾವಿಗಳನ್ನು ಹರಿಜನರೂ ಸೇರಿದಂತೆ ಎಲ್ಲರೂ ಉಪಯೋಗಿಸಲು ಅವಕಾಶ ಕಲ್ಪಿಸುವ ಮಸೂದೆ ತಂದರು. ಮುಂಬಾಯಿ ಸರ್ಕಾರ ಅದನ್ನು ಅಂಗೀಕರಿಸಿ ಶಾಸನ ಮಾಡಿತು. ದಂಡೀ ಸತ್ಯಾಗ್ರಹ ಆದ ೮-೧೦ ದಿನಗಳಲ್ಲಿ ಅಂಬೇಡ್ಕರ್ ನಾಯಕತ್ವದಲ್ಲಿ ಚೌಡರ್ ಕೆರೆ ಚಳುವಳಿ ನಡೆಯಿತು. ಅದು ಒಂದು ಬೃಹತ್ ಮೆರವಣಿಗೆ ಅತ್ಯಂತ ಉತ್ಸಾಹದಿಂದ ಸಾವಿರಾರು ಹರಿಜನರು ಮೆರವಣಿಗೆಯಲ್ಲಿ ಹೋಗಿ ಆ ಕೆರೆಯ ನೀರು ಕುಡಿಯಲು ಆರಂಭಿಸುವುದು. ಅವರ ಯೋಜನೆ ಹಾಗೂ ಉದ್ದೇಶವಾಗಿತ್ತು. ಅಂಬೇಡ್ಕರ್‌ರವರು ಸೇರಿದಂತೆ ಸಹಸ್ರಾರು ಜನ ಅಸ್ಪು ಶ್ಯರು ಕೆರೆಯ ಬಳಿ ಹೋಗಿ ಸಂತೋಷದಿಂದ ನೀರು ಕುಡಿದರು. ಪವಿತ್ರ ತೀರ್ಥವೆಂದು ಭಾವಿಸಿ ತಲೆಯ ಮೇಲೂ ಸಿಂಪಡಿಸಿಕೊಂಡರು. ಇದನ್ನು ತಿಳಿದ ಸವರ್ಣಿಯರು ಸಾವಿರ ಸಂಖ್ಯೆಯಲ್ಲಿ ಬಂದು ಹಲ್ಲೆ ಮಾಡಿ ಕೆಲವರ ತಲೆ ಹೋಡೆದು ಸಾಯಿಸಿದರು. ಹಲವರು ಕೈಕಾಲು ಮುರಿದುಕೊಂಡರು. ಅಂಗವಿಕಲರಾದರು. ನ್ಯಾಯ ಬೇಡುವ ಹಿಂದುಗಳೇ ನ್ಯಾಯ ಕೋಡಬೇಡವೇ ಎಂದು ಮೊದಲಾಗಿ ಅಲುಬಿದರು.
ಭಾರತದ ಸಮಸ್ಯೆಗಳನ್ನು ಚರ್ಚಿಸುವದಕ್ಕಾಗಿ ಬ್ರಿಟಿಷ ಸರ್ಕಾರ ಭಾರತದ ಹಲವಾರು ನಾಯಕರುಗಳನ್ನು ಸಭೆಗೆ ಕರೆಯಿತು. ಗಾಂಧಿಜೀ ಭಾಗವಹಿಸಿದ ದುಂಡು ಮೆಜಿನ ಪರಿಷತ್ತಿನಲ್ಲಿ ಅಂಬೇಡ್ಕರ್‌ರವರು ಭಾಗವಹಿಸಿದ್ದರು. ಹಿಂದೂಗಳಲ್ಲಿ ಆಗಬೇಕಾದ ಸುಧಾರಣೆಗಳನ್ನು ಭಾರತೀಯರ ವಾಸ್ತವಿಕ ಪರಸ್ಥಿತಿಯನ್ನು ನೊಂದ ಮನಸ್ಸಿನಿಂದ ತೀಕ್ಷ್ಣಮತಿಯಿಂದ ನಿವೇದಿಸಿಕೊಂಡರು. ಹಿಂದೂ ಸಮಾಜದಲ್ಲಿ ಶತಶತಮಾನಗಳವರೆಗೆ ಸವರ್ಣಿಯರು ತಿಂದು ಬಿಸಾಕಿದ, ಮಿಕ್ಕ ವಸ್ತುಗಳನ್ನು ಪ್ರಸಾದವೆಂದು ತಿನ್ನುತ್ತಾ, ಅವರ ಗುಲಾಮರಾಗಿ ವರ್ತಿಸುತ್ತಾ, ತುಂಬಾ ಅಮಾನುಷ ವರ್ತನೆ ಓಳಗಾಗಿದ್ದ ಅಸ್ಪು ಶ್ಯರು ಎಚ್ಚರಗೊಳ್ಳುವಂತೆ ಜಾಗೃತಗೊಳಿಸುತ್ತಿದ್ದರು. ಹಿಂದೂ ಧರ್ಮವಿರಲಿ ಜಾತಿಯತೆ ಹೋಗಲಿ ಅಸ್ಪು ಶ್ಯತೆ ಸಂಪೂರ್ಣವಾಗಿ ತೋಲಗಲಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದರು ಹಿಂದೂ ಸಮಾಜದ ಅಮೂಲಾಗ್ರ ಸುಧಾರಣೆಗಾಗಿ ಆಗ್ರಹಿಸಿದ್ದರು. ಶಿಕ್ಷಣ, ಸಂಘಟನೆ ಮತ್ತು ಚಳುವಳಿಗಳಲ್ಲಿ ಬಹಳವಾಗಿ ನಂಬಿಕೆ ಇಟ್ಟು ಹೋರಾಟ ನಡೆಸಿದರು ಗಣನೀಯ ಸಾಧನೆ ಮಾಡಿದರು.
ನಮ್ಮ ಭಾರತಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂತು. ನಮಗೆ ಪ್ರಜಾಪ್ರಭುತ್ವ ವಿರಬೇಕು ಸಂವಿಧಾನಬೇಕು. ರಾಜ್ಯಾಂಗ ರಚನಾ ಸಮಿತಿಯನ್ನು ರಚಿಸಬೇಕು. ನಮ್ಮ ರಾಷ್ಟ್ರಕ್ಕೆ ಸಂವಿಧಾನವನ್ನು ರಚಿಸಲು ಸಮರ್ಥರಾರು? ಯಾರನ್ನಾದರೂ ಅಮೇರಿಕಾ ಇಲ್ಲವೇ ಇಂಗ್ಲೇಂಡಿನಿಂದ ಕರೆಸುವದೇ ಎಂದು ಮೊದಲಾಗಿ ಸಲಹೆಗಳು ಬಂದವು. ಆದರೆ ಅಂಬೇಡ್ಕರವರ ಪ್ರತಿಭೆಯ ಪರಿಚಯವಿದ್ದು ಕೆಲವು ಪ್ರಮುಖರು ಸಂವಿಧಾನವನ್ನು ರೂಪಿಸಲು ಅವರ ಹೆಸರನ್ನು ಸೂಚಿಸಿದರು. ಅಂಬೇಡ್ಕರ್ ಮತ್ತು ಸಹ ಸದಸ್ಯರು ಸಾಕಷ್ಟು ಸಮರ್ಪಕವಾದ ಸಂವಿಧಾನವನ್ನು ೧೯೪೯ ರ ನವೆಂಬರ್‌ನಲ್ಲಿ ನೀಡಿದರು.
ನೆಹರು ಪ್ರಧಾನಿಯಾದರೂ ಅಂಬೇಡ್ಕರ್‌ರನ್ನು ಕಾನೂನು ಮಂತ್ರಿಯನ್ನಾಗಿ ನೇಮಿಸಿಕೊಂಡರು. ಅಂಬೇಡ್ಕರ್ ನಮ್ಮ ಮಂತ್ರಿ ಮಂಡಲದ ರತ್ನ ಎಂದು ಹೇಳುತ್ತಿದ್ದರು. ಅಂಬೇಡ್ಕರ್ ತಮ್ಮ ಮೊದಲ ಪತ್ನಿ ತೀರಿ ಹೋಗಲಾಗಿ ಡಾ|| ಶಾರದಾ ಕಬೀರ ಎಂಬ ಬ್ರಾಹ್ಮಣ ಕನ್ನೆಯನ್ನು ವಿವಾಹವಾದರು. ೧೯೫೧ ರಲ್ಲಿ ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟರು. ೧೯೫೨ ರಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಎದುರಾಗಿ ನಿಂತು ಸೋತರು. ನಂತರ ರಾಜ್ಯಸಭೆಗೆ ಆಯ್ಕೆಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು.
೧೯೫೦ ರಲ್ಲಿ ಸಿಂಹಳದಲ್ಲಿ ನಡೆದ ಬೌದ್ಧ ಸಮ್ಮೇಳನಕ್ಕೆ ಹೋಗಿ ಬಂದರು. ಆಗ ಅವರು ಬೌದ್ಧಮತಕ್ಕೆ ಸೇರಲು ಮನಸ್ಸು ಮಾಡಿದರು. ಎಕೆಂದರೆ ಅವರೇ ಹೇಳುವಂತೆ ನನಗೆ ಕ್ರೈಸ್ತ ಇಲ್ಲವೆ ಇಸ್ಲಾಮ್ ಧರ್ಮಕ್ಕೆ ಸೇರಲು ಇಚ್ಛೆ ಇಲ್ಲ. ಕಾರಣ ಆ ಧರ್ಮಗಳಿಗೆ ಹೋದರೆ ನಾನು ಹಿಂದೂ ಸಂಸ್ಕೃತಿಯಿಂದ ವಂಚಿತನಾಗುತ್ತೇನೆ. ಆದ್ದರಿಂದ ಹಿಂದೂ ಸಂಸ್ಕೃತಿ ಹಾಗೂ ಪರಿಪೂರ್ಣ ಸಮಾನತೆಯುಳ್ಳ ಬೌದ್ಧಮತವನ್ನು ಸ್ವೀಕರಿಸುತ್ತೇನೆ. ೧೯೫೬ ರ ಅಕ್ಟೋಬರ್ ೧೪ ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ತಮ್ಮ ೨ ನೇ ಪತ್ನಿಯವರೊಂದಿಗೆ ಬೌದ್ಧ ಮತಕ್ಕೆ ಸೇರಿದರು ನಂತರ ಕೆಲವೇ ದಿನಗಳಲ್ಲಿ ಅಂದರೆ ೧೯೫೬ ನೇ ಡಿ.೬ ರಂದು ಅಂಬೇಡ್ಕರ್ ದೈವಾದೀನರಾದರು.
ಅಂಬೇಡ್ಕರ್ ಮಹಾನ್ ಪ್ರಾಜ್ಞಾರಾಗಿದ್ದು. ಉತ್ತಮ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. `ಪಾಕಿಸ್ತಾನವನ್ನು ಕುರಿತ ಚಿಂತನೆ’, `ಅಸ್ಪು ಶ್ಯರು ಯಾರು?’, `ಬುದ್ಧ ಮತ್ತು ಅವನ ತತ್ವಗಳು’, `ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’, `ಹಿಂದೂಮತದ ಉಗಮ’ ಮೊದಲಾದವು ಅವರ ಉತ್ತಮ ಕೃತಿಗಳಾಗಿವೆ. ಇಡೀ ರಾಷ್ಟ್ರಕ್ಕೆ ತಮ್ಮ ವಿಶಿಷ್ಟ ಕಾಣಿಕೆಯಾಗಿ ಸಂವಿಧಾನವನ್ನು ನೀಡಿರುವರು. ಆ ಸಂವಿಧಾನದಲ್ಲಿ ಭಾರತದ ಎಲ್ಲಾ ವರ್ಗದ ಜನರ ಪ್ರಗತಿಗೆ, ಅಸ್ಪು ಶ್ಯರ ಸರ್ವತೋಮುಖ ಅಭಿವೃದ್ಧಿಗೆ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ವಿವಿಧ ಕ್ಷೇತ್ರಗಳಲ್ಲಿನ ಬದುಕಿಗೆ ಉತ್ತಮ ರೀತಿಯ ಅವಕಾಶ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಿರುವರು.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಸಾಂಪ್ರದಾಯಿಕ ಹಿಂದೂ ಸಮಾಜದ ಅಸ್ಪು ಶ್ಯ ಜಾತಿಯಲ್ಲಿ ಹುಟ್ಟಿ ಬೆಳೆದು ತಮ್ಮ ವಯಕ್ತಿಕ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆದು ಈ ರಾಷ್ಟ್ರದ, ಹಿಂದೂ ಸಮಾಜದ ಯಾವುದೇ ಮೇಲುಜಾತಿಯ ವ್ಯಕ್ತಿಗೆ ಬೀಳದಂತೆ ಉತ್ತಮ ವ್ಯಕ್ತಿತ್ವವನ್ನು ಪಡೆದ ಅಸಾಧಾರಣ ಸಾಧನೆ ಮಾಡಿದ ಅಂಬೇಡ್ಕರ್ ಪ್ರಾತಃಸ್ಮರಣೀಯರಾಗಿರುವವರು ದೀನದಲಿತರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಿಜವಾದ ಅರ್ಥದ ಜನನಾಯಕರಾಗಿರುವವರು. ತುಳಿತಕ್ಕೀಡಾದವರನ್ನು ಮೇಲೆತ್ತಲು ಅವಿಶ್ರಾಂತವಾಗಿ ದುಡಿದ ಮಹಾನ್ ಚೇತನರಾಗಿರುವವರು.
ಡಾ|| ಭೀಮರಾವ್ ರಾಮಜೀ ಅಂಬೇಡ್ಕರ್ ಒಬ್ಬ ಮಹಾನ್ ರಾಷ್ಟ್ರೀಯವಾದಿಯಾಗಿದ್ದರು. ನಿರ್ಧಿಷ್ಟ ಕಾಲದಲ್ಲಿ ಪರಿಸರದಲ್ಲಿ ಈ ದೇಶ ಒಂದಾಗುವುದನ್ನು ತಪ್ಪಿಸಲು ವಿಶ್ವದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಮ್ಮೆಲ್ಲ ಜಾತಿ, ಮತ, ಪಂಥ, ಪಂಗಡಗಳ ಹಿನ್ನೆಲೆಯಲ್ಲೂ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಎಂಬುದಾಗಿ ಸಾರಿ ಹೇಳುತ್ತಿದ್ದರು. ಅವರು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಕೋಡುತ್ತಿದ್ದರು. ಸಂಘಟಿತವಾದ ಸ್ವಾತಂತ್ರ್ಯವಾದ ಹಾಗೂ ಸಮಗ್ರವಾದ ಸಮಾಜವನ್ನು ಸೃಷ್ಠಿಸಲು ಅವರು ಕಾತುರರಾಗಿದ್ದರು. ವಿಭಿನ್ನಸ್ತರ ಹಾಗೂ ವರ್ಗಗಳಲ್ಲಿರುವ ಜನರನ್ನು ವಿಶೇಷವಾಗಿ ಒಟ್ಟಾಗಿ ಸೇರಿಸಿ ಅವರು ರಾಷ್ಟ್ರದ ಏಕತೆಗೆ ಕಟಿಬದ್ಧರಾಗಿ ಹೋರಾಟ ಮಾಡಲು ಸಜ್ಜು ಗೊಳಿಸಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಈ ಗುರಿ ಸಾಧಿಸಲು ಪ್ರತಿಯೊಬ್ಬರ ಸಹಕಾರವನ್ನು ಅವರು ನಿರೀಕ್ಷಿಸುತ್ತಿದ್ದರು. ಹಾಗೂ ಆ ಬಗ್ಗೆ ಆಗಾಗ್ಗೆ ಒತ್ತಿ ಹೇಳುತ್ತಿದ್ದರು. ಇಡೀ ರಾಷ್ಟ್ರದ ಒಂದು ಕುಟುಂಬದಂತಿರಬೇಕು ಆಂತರೀಕ ವ್ಯವಹಾರಗಳನ್ನು ನಾವು ನಾವೇ ಒಳಗಡೆ ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಡೀಯಾಗಿ ಒಗ್ಗಟ್ಟಿನಿಂದ ವ್ಯವಹರಿಸಬೇಕು ಎಂಬುದಾಗಿ ತಿಳಿ ಹೇಳಿದ್ದರು.
ಕೇಂದ್ರದಲ್ಲಿ ಬಲಿಷ್ಟ, ಸ್ಥಿರ ಹಾಗೂ ಸಂಘಟಿತ ಸರ್ಕಾರ ವಿರಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಅವರು ಏಕರೂಪದ ನ್ಯಾಯಾಂಗ ವ್ಯವಸ್ಥೆಯ ಪ್ರತಿಪಾದಕರಾಗಿದ್ದರು. ಏಕರೂಪದ ನ್ಯಾಯಾಂಗ ವ್ಯವಸ್ಥೆ ಹಾಗೂ ಏಕರೂಪದ ನಾಗರೀಕ ಸಂಹಿತೆ ಭಾರತದ ಸಮಗ್ರತೆಗೆ ಅತ್ಯವಶ್ಯ ಎಂದು ಅವರು ದೃಢವಾಗಿ ನಂಬಿದ್ದರು. ಪ್ರಾಥಮಿಕ ಹಂತದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ದೇಶದ ಎಲ್ಲಾ ಕಛೇರಿಗಳಲ್ಲಿ ಒಂದು ರಾಷ್ಟ್ರೀಯ ಭಾಷೆಯನ್ನು ಬಳಸಬೇಕೆಂದು ಪ್ರತಿಪಾದಿಸಿದರು.
ಡಾ|| ಬಿ.ಆರ್. ಅಂಬೇಡ್ಕರ್ ಮಿಸಲಾತಿಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅದು ಶಾಶ್ವತವಾಗಿರಬೇಕು ಎಂಬುದು ಅವರ ಅಭಿಪ್ರಾಯವಾಗಿರಲಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳಿಗೆ ಮಿಸಲಾತಿ ಇತ್ಯಾದಿ ಸೌಲಭ್ಯಗಳು ತಾತ್ಕಾಲಿಕವೆಂದು ಅವರು ದೃಢವಾಗಿ ನಂಬಿದ್ದರು. ಎಲ್ಲರೂ ರಾಷ್ಟ್ರೀಯ ಪ್ರವಾಹದಲ್ಲಿ ತಮ್ಮ ವೈಶಿಷ್ಟವನ್ನು ಬದಿಗೊತ್ತಿ ಒಂದಾಗಬೇಕು ಎಂದು ಅವರು ಬಯಸ್ಸಿದ್ದರು.
ಅಂಬೇಡ್ಕರ್ ಅಭಿಪ್ರಾಯದಂತೆ ಈ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ತಪ್ಪು ಹಾದಿ ಹಿಡಿದಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಲ್ಲಗಳೆಯುವುದಾಗಲಿ ಅಥವಾ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಮುಂದುವರೆಸುವದಾಗಲಿ ತಪ್ಪು. ಈ ಎರಡಕ್ಕೂ ಪರಿಹಾರಗಳನ್ನು ನಾವು ಕಂಡು ಹಿಡಿಯಬೇಕು ಆ ಪರಿಹಾರ ಅಲ್ಪಸಂಖ್ಯಾತರ ಅಸ್ತಿತ್ವನ್ನು ಮನಗಾಣಬೇಕು. ಜೊತೆಗೆ ಮುಂದೊಂದು ದಿನ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಬೇದಭಾವ ಅಳಿಸಿ ಒಂದಾಗಬೇಕು. ಅಲ್ಪಸಂಖ್ಯಾತರ ವಿರುದ್ಧ ಯಾವುದೇ ಭೇದಭಾವವೆಸಗಬಾರದು ಎಂಬುದನ್ನು ಬಹುಸಂಖ್ಯಾತರು ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರು ಮುಂದುವರೆಯುತ್ತಾರೋ ಅಥವಾ ಮಾಯವಾಗುತ್ತಾರೋ ಇದು ಬಹುಸಂಖ್ಯಾತರ ನಡವಳಿಕೆಯ ಮೇಲೆ ಅವಲಂಭಿತವಾಗಿದೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುವ ಪದ್ಧತಿಯನ್ನು ಕೈಬಿಟ್ಟ ಘಳಿಗೆಯಲ್ಲೇ ಅಲ್ಪಸಂಖ್ಯಾತರ ತಮ್ಮ ಸ್ಥಿತಿಯಲ್ಲಿ ಇರುವುದಕ್ಕೆ ಯಾವುದೇ ಕಾರಣವು ಇರುವುದಿಲ್ಲ. ಆಗ ಅಲ್ಪಸಂಖ್ಯಾತ ಎಂಬ ವರ್ಗವೇ ಮಾಯವಾಗುತ್ತದೆ ಎಂಬುದಾಗಿ ಹೇಳುತ್ತಿದ್ದರು. ಅಂಬೇಡ್ಕರ್ ಈ ನಿಟ್ಟಿನ ಅವರ ಚಿಂತನೆಯೂ ಮೌಲ್ಯಯುತವಾದುದೇ ಆಗಿರುವುದು.
ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್ ರವರಂತಹ ಮಹಾ ಪುರುಷರು ಎಂದೆಂದಿಗೂ ಅಜರಾಮರು. ಅವರ ಸಿದ್ಧಾಂತಗಳನ್ನು ಅನುಷ್ಟಾನಗೊಳಿಸುವ ಹಾಗೂ ಆದರ್ಶಗಳನ್ನು ಪಾಲಿಸುವ ಕೆಲಸ ವ್ಯಾಪಕವಾಗಿ ಆಗಬೇಕಾಗಿದೆ.

Please follow and like us:
error