ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳು

ಲೋಕಸಭಾ ಚುನಾವಣೆ; ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಕೊಪ್ಪಳ,ಏಪ್ರಿಲ್ : ಕೊಪ್ಪಳ ಲೋಕಸಭೆಗೆ ಚುನಾವಣೆ ನಡೆಯುತ್ತಿದ್ದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಏಪ್ರಿಲ್ 8 ರಂದು ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದು ಅಂತಿಮವಾಗಿ ಚುನವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ. ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನಿಂದ ರಾಜಶೇಖರ, ಭಾರತಿಯ ಜನತಾ ಪಕ್ಷದಿಂದ ಸಂಗಣ್ಣ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಶರಣಯ್ಯ, ಮಾಕ್ರ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್‍ಫ್ಲ್ಯಾಗ್)ದಿಂದ ಬಸಲಿಂಗಪ್ಪ, ಸರ್ವ ಜನತಾ ಪಾರ್ಟಿಯಿಂದ ಬಿ.ಅನ್ನೋಜಿರಾವ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್-ಲೆನಿನಿಸ್ಟ್ ರೆಡ್‍ಸ್ಟಾರ್) ಹೇಮರಾಜ ವೀರಾಪೂರ, ಬಹುಜನ ಸಮಾಜ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ ಪಕ್ಷೇತರರಾಗಿ ಸುರೇಶ್, ನಾಗರಾಜ ಕಲಾಲ, ಬಾಲರಾಜ, ಸತೀಸರೆಡ್ಡಿ, ಮಲ್ಲಿಕಾರ್ಜುನ ಹಡಪದ, ಪ.ಯ.ಗಣೇಸ, ಸುರೇಶ.ಹೆಚ್ ಇವರು ಅಂತಿಮವಾಗಿ ಕಣದಲ್ಲಿದ್ದಾರೆ.

Related posts