ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕೊಪ್ಪಳ : ಜಿಲ್ಲೆಯ ಹಿಟ್ನಾಳ್ ಗ್ರಾಮ ಪಂಚಾಯತಿ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕೊಪ್ಪಳದ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್ ಜಿ ಓ ) ಇವರು ಆಯೋಜಿಸಿದ್ದರು. ಸರ್ವೋದಯ ಸಂಸ್ಥೆ ಕಳೆದ ಆರು ವರ್ಷಗಳಿಂದ ಕೊಪ್ಪಳದ ಅನೇಕ ಹೆಸರಾಂತ ಕಾರ್ಖಾನೆಗಳ ಜೊತೆಗೆ ಕೈಜೋಡಿಸಿ ಗ್ರಾಮೀಣಾಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಈ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಿಟ್ನಾಳ್ ಗ್ರಾಮದಲ್ಲಿ ಆಯೋಜಿಸಿ ಈ ಭಾಗದಲ್ಲಿ ಸಮಾಜಮುಖಿಯಾಗಿ ಸಮಾಜಿಕ ಕಳಕಳಿಯನ್ನು ಹೊಂದಿದ ಮಹಿಳೆಯಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಆಫೀಸರ್ ಕ್ಲಬ್ ಅಧ್ಯಕ್ಷಿರಾದ ಶ್ರೀಮತಿ ಕಮಲಾ ಗುಮಾಸ್ತೆ ಯವರ ಸಮಾಜಿಕ ಕಾರ್ಯವನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅದೇ ರೀತಿ ಸರ್ವೋದಯ ಸಂಸ್ಥೆಯ ಸಿಬ್ಬಂದಿ ಯಾದ ಶ್ರೀಮತಿ ರೇಣುಕಮ್ಮ ಇವರು ಮಾಡಿದಂತಹ ಸಾಮಾಜಿಕ ಕೆಲಸ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರನ್ನು ಸಹ ಸನ್ಮಾನಿಸಲಾಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಿಟ್ನಾಳ್ ಗ್ರಾಮದಲ್ಲಿ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀಮತಿ ಕಮಲಾ ಗುಮಾಸ್ತೆಯವರು ಗ್ರಾಮೀಣ ಭಾಗದಲ್ಲಿ ಮಹಿಳೆಯರು ಆರ್ಥಿಕವಾಗಿ ಮುಂದಾಗಲು ಬೇಕಾದಂತಹ ಅವಶ್ಯಕವಾದ ಸೌಲತ್ತುಗಳನ್ನು , ತರಭೇತಿಗಳನ್ನು ಆಯೋಜಿಸಲು ನಮ್ಮ ಕಂಪನಿಯು ಸದಾ ಸಿದ್ದ ಹಾಗೂ ಮಹಿಳೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಕ್ಕೆ ಕೈಜೋಡಿಸಿ ಮಹಿಳೆಯರು ಮುಂದುವರೆಯಲು ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು ಹಾಗೂ ಸರ್ವೋದಯ ಟ್ರಸ್ಟ್ ಈ ಭಾಗದಲ್ಲಿ ಮಾಡುತ್ತಿರುವ ಕೆಲಸಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿಟ್ನಾಳ್ ಗ್ರಾಮದ ಮಹಿಳೆಯರು, ಸರ್ವೋದಯ ಟ್ರಸ್ಟ್ ಮುಖಸ್ಥರು ಮತ್ತು ಸಿಬ್ಬಂದಿ ,ಕೆ ಎಫ್ ಐ ಎಲ್ ಲೇಡೀಸ್ ಕ್ಲಬ್ ಮುಖ್ಯಸ್ಥರಾದ ಶ್ರೀಮತಿ ಲಕ್ಷ್ಮಿ ನಾರಾಯಣ, ಶ್ರೀಮತಿ ರಾಧಿಕಾ ರಮೇಶ್ ಭಾಗವಹಿಸಿದ್ದರು.

Please follow and like us:
error