ಅಂಜನಾದ್ರಿಗೆ ಭೇಟಿ ನೀಡಿದ ರಾಜ್ಯಪಾಲರು

ಕೊಪ್ಪಳ : ಐತಿಹಾಸಿಕ ಪ್ರಸಿದ್ದ ಕಿಷ್ಕಿಂದಾ ಪ್ರದೇಶದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ರಾಜ್ಯಪಾಲ ವಜುಬಾಯಿವಾಲಾ ಅವರು ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ ೧೧.ಗಂಟೆಗೆ ಸರಿಯಾಗಿ ಆನೆಗುಂದಿಯ ಉತ್ಸವ ವೇದಿಯಲ್ಲಿ ನಿರ್ಮಿಸಲಾದ ಹೆಲಿಪ್ಯಾಡಿಗೆ ಹೆಲಿಕ್ಯಾಪ್ಟರ್ ಬಂದುಳಿದರು. ಜಿಲ್ಲಾಡಳಿತ ಸ್ವಾಗತಿಸಿ, ಗೌರವ ವಂದನೆ ಸಲ್ಲಿಸಿದರು. ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿ ಆಯೋಜಿಸಲಾಗಿದ್ದ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೊಲೀಸ್ ಬೀಗಿ ಭದ್ರತೆ:

ದೇವರ ದರ್ಶನಕ್ಕೆ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆನೆಗೊಂದಿಯಿAದ ಅಂಜನಾದ್ರಿ ಬೆಟ್ಟದವರೆಗೆ ಬೀಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಅಲ್ಲದೆ, ದೇವಸ್ಥಾನ ಕೆಳಗಡೆ ಸೇರಿದಂತೆ ವಿವಿಧೆಡೆ ಬ್ಯಾರಿಕೇಡ್ ಹಾಕಲಾಗಿತ್ತು .ಭದ್ರತೆಗಾಗಿ ಒಬ್ಬರು ಸಿಪಿಐ, ಮೂವರು ಪಿಎಸ್‌ಐ, ೧೩ ಎಎಸ್‌ಐ, ೨೮ ಹೆಡ್ ಕಾನ್ಸಸ್ಟೇಬಲ್, ೫೨ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

Please follow and like us:
error