PSI  ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ – ವಯೋಮಿತಿ ಹೆಚ್ಚಳ ಮಾಡಿ ಸರಕಾರದ ಆದೇಶ

 

ಬೆಂಗಳೂರು : ಪಿಎಸ್ಐ  ಹುದ್ದೆಗಳ ಆಕಾಂಕ್ಷಿಗಳಿಗೆ ಇದೊಂದು  ಸಿಹಿಸುದ್ದಿ.  ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಪಿಎಸ್ ಐ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 2 ವರ್ಷ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗ ಸದ್ಯ ಪಿಎಸ್ ಐ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 30 ವರ್ಷ ಮತ್ತು  ಎಸ್ ಸಿ/ಎಸ್ ಟಿ ಮತ್ತು ಹಿಂದುಳಿದ ವರ್ಗಗಳಿಗೆ 32 ವರ್ಷ ಎಂದು ನಿಗದಿಪಡಿಲಾಗಿದೆ. ಈಗಿನ ಆದೇಶದ ಪ್ರಕಾರ ವಯೋಮಿತಿ ಸಡಿಲಿಕೆ ದಿ 3-9-20 ರಿಂದ ಜಾರಿಗೆ ಬರಲಿದೆ ಎಂದು ಅದೇಶದಲ್ಲಿ ತಿಳಿಸಲಾಗಿದೆ.

Please follow and like us:
error