ನರಭಕ್ಷಕ ಚಿರತೆಗೆ ಸೆರೆಗೆ 4 ಬೋನ್ ಅಳವಡಿಕೆ : ದ್ರೋಣ ಕ್ಯಾಮರಾ ಮೂಲಕ ಕಾರ್ಯಚರಣೆ.

KannadanetNEWS

ಕೊಪ್ಪಳ : ದೇವಸ್ಥಾನದ ಅಡುಗೆ ಕೆಲಸದವನನ್ನು ಚಿರತೆ ಹೊತ್ತೊಯ್ದು, ತಿಂದು ಹಾಕಿದ ಘಟನೆ ಇಡೀ ಕೊಪ್ಪಳ ಜಿಲ್ಲೆಯನ್ನೆ ಬೆಚ್ಚಿಬಿಳಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರೋ ಅರಣ್ಯ ಇಲಾಖೆ, ಜಿಲ್ಲೆಯ ಆನೆಗೊಂದಿ ವಿವಿಧ ಬೆಟ್ಟಗಳಲ್ಲಿ ಚಿರತೆ ಸೆರೆ ಹಿಡಿಯಲು 4 ಬೋನ್ ಗಳನ್ನು ಅಳವಡಿಸಿದೆ. ಇಷ್ಟೇ ಅಲ್ಲದೆ ಚಿರತೆ ಸೆರೆಯಾಗುವವರೆಗೂ ದ್ರೋಣ ಮೂಲಕ ಕಾರ್ಯಚರಣೆ ಪ್ರಾರಂಭಿಸಿದೆ. ಇನ್ನೂ ಘಟನೆ ನಡೆದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾದೇವಿ ಬೆಟ್ಟಕ್ಕೆ ಕೊಪ್ಪಳ ಜಿಲ್ಲಾಅರಣ್ಯಾಧಿಕಾರಿ ಹರ್ಷಾಬಾನು, ಬಳ್ಳಾರಿ ವಲಯ ಅರಣ್ಯಧಿಕಾರಿ ಲಿಂಗರಾಜ್ ,ಗಂಗಾವತಿಯ ಅರಣ್ಯಧಿಕಾರಿ ಶಿವರಾಜ್ ಮೇಟಿ ನೇತೃತ್ವದಲ್ಲಿ ಕಾರ್ಯಚರಣೆ ಪ್ರಾರಂಭವಾಗಿದೆ. ಗುರುವಾರದಿಂದ ಆನೆಗೊಂದಿ ಸುತ್ತಮುತ್ತ ಅರಣ್ಯ ಇಲಾಖೆಯ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಚಿರತೆಯ ಚಲನವಲನ್ನು ತಿಳಿಯಲು 5 ಕಡೆ ಸಿಸಿ ಕ್ಯಾಮರಾಗಳನ್ನು ಅಧಿಕಾರಿಗಳು ಅಳವಡಿಸಿದ್ದು, ಸತತವಾಗಿ ಕಾರ್ಯಚರಣೆ ಆರಂಭವಾಗಿದೆ.
ಇನ್ನೂ ಒಂದು ತಿಂಗಳಿನಿಂದ ಬಹಳಷ್ಟು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ವಾರದಲ್ಲಿ ಒಬ್ಬರಂತೆ ಚಿರತೆಗೆ ಸಿಕ್ಕು ಗಾಯಗೊಳ್ಳುತ್ತಿದ್ದಾರೆ. ಆದರೆ ಬುಧುವಾರದ ರಾತ್ರಿ ಅಡುಗೆ ಕೆಲಸಗಾರ ಹುಲಗೇಶ್ ಬಲಿಯಾಗಿದ್ದು, ಭಾರೀ ಆತಂಕಕ್ಕೆ ಕಾರವಾಗಿದೆ.

Please follow and like us:
error