fbpx

KAMS ಕೊಪ್ಪಳ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ, ೨೨- ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (KAMS) ) ಕೊಪ್ಪಳ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಮಂಗಳವಾರ ಸಂಜೆ ಕೊಪ್ಪಳ ನಗರದ ನಿವೇದಿತಾ ಶಾಲೆಯಲ್ಲಿ ತಾಲೂಕ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು.
ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಮಂಜುನಾಥ ಅಂಗಡಿ, ತಾಲೂಕು ಅಧ್ಯಕ್ಷರಾಗಿ ರಾಜು ಚಿಲವಾಡಗಿ, ಪ್ರಧಾನ ಕಾರ್ಯದರ್ಶಿಯಾಗಿ, ನಿತೀಶ್ ಪುಲಸ್ಕರ್, ಖಜಾಂಚಿಯಾಗಿ ಬಸವರಾಜ ಶಿರಗುಂಪಿ ಶೆಟ್ಟರ್‌ನ್ನು ಹಾಗೂ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹುಲಗಪ್ಪ ಕಟ್ಟಿಮನಿ ಹಾಗೂ ಕೃಷ್ಣ ಕಬ್ಬೇರರನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರ ತಿಳಿಸಿದ್ದಾರೆ.

Please follow and like us:
error
error: Content is protected !!