ಕೇರಳದ 3 ವರ್ಷದ ಮಗುವಿಗೂ ತಟ್ಟಿದ ಕೊರೋನ ವೈರಸ್ ಸೋಂಕು

ಕೊಚ್ಚಿ, ಮಾ.9: ಮಹಾಮಾರಿ ಕೊರೋನ ವೈರಸ್   ಸೋಂಕು  ಬಾಧಿತರ ಸಂಖ್ಯೆ ಭಾರತದಲ್ಲಿ ಏರುತ್ತಿದ್ದು , ಭಾರತದಲ್ಲಿ ಈ ವರೆಗೆ 40 ಮಂದಿಗೆ  ಸೋಂಕು ಬಾಧಿಸಿದೆ. ಕೇರಳದಲ್ಲಿ  ಮೂರು ವರ್ಷದ ಮಗುವಿಗೂ  ಈ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಾರ್ಚ್ 7 ರಂದು ದುಬೈನಿಂದ ವಿಮಾನದಲ್ಲಿ  ಮಗು ತನ್ನ ಹೆತ್ತವರೊಂದಿಗೆ ಕೊಚ್ಚಿಗೆ ಆಗಮಿಸಿತ್ತು.  ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಮಗುವಿಗೆ  ಸೋಂಕು ಬಾಧಿಸಿರುವುದು ದೃಢಪಟ್ಟಿದೆ.  ಮಗುವನ್ನು ಆಸ್ಪತ್ತೆಗೆ ದಾಖಲಿಸಲಾಗಿದೆ.

ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶಕ್ಕಾಗಿ ದಿಲ್ಲಿಯಲ್ಲಿ  ಪ್ರಾಥಮಿಕ ಶಾಲೆಗಳು ಸೇರಿದಂತೆ ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.  ಕಳೆದ ಒಂಬತ್ತು ದಿನದಲ್ಲಿ ಕೊರೋನವೈರಸ್ ಪೀಡಿತ ಪ್ರದೇಶಗಳಿಂದ ಮರಳಿದ ಮೂವರನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೊರೋನ  ವೈರಸ್‌ನಿಂದ  ಪ್ರಪಂಚದಲ್ಲಿ  ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ದಕ್ಷಿಣ ಕೊರಿಯಾವನ್ನು ಸೋಂಕು ಪ್ರಕರಣದಲ್ಲಿ  ಇಟಲಿ  ಹಿಂದಿಕ್ಕಿದೆ. ವಿಶ್ವದಲ್ಲಿ  ಎರಡನೇ ಅತಿ ಹೆಚ್ಚು ಪ್ರಕರಣಗಳು ಇಟಲಿಯಲ್ಲಿ ದಾಖಲಾಗಿದೆ. ಸಾವಿನ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, ರವಿವಾರ 133 ರಿಂದ 366 ಕ್ಕೆ ಏರಿದೆ. ಚೀನಾದಲ್ಲಿ  ಸೋಮವಾರ 22 ಸಾವಿನ ಪ್ರಕರಣಗಳು ದಾಖಲಾಗಿವೆ.

Please follow and like us:
error