200 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಬಯ್ಯಾಪುರ

ಕೊಪ್ಪಳ :  ಈ ಹಿಂದೆ ಮಂಜೂರಾಗಿ ವಾಸವಾಗಿದ್ದ 200 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ರಾಜ್ಯ ಸರ್ಕಾರದ ಕೊಳಗೇರಿ ಅಭಿವೃದ್ಧಿ ನಿಗಮದಿಂದ ನೂತನವಾಗಿ ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ 715 ಮನೆಗಳು ಮಂಜೂರಾಗಿವೆ. ನಿಡಶೇಸಿ ಗ್ರಾಮದ ಬಳಿ ಕುಷ್ಟಗಿ ಉಪ ನಗರಕ್ಕಾಗಿ ಖರೀದಿಸಿರುವ 53 ಎಕರೆಯಲ್ಲಿ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಅವರು ಸೋಮವಾರದಂದು ಕುಷ್ಟಗಿಯ 1ನೇ ವಾರ್ಡ್​ ಪುರಸಭೆ ವ್ಯಾಪ್ತಿಯ ಸ್ಲಂ ಬೋರ್ಡ್​ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ನಿಗಮದಿಂದ ಹಕ್ಕು ಪತ್ರ ವಿತರಿಸಿ ಮಾತನಾಡಿದರು. ಮಾರುತಿ ನಗರದ ಸ್ಲಂ ಬೋರ್ಡ್ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಬಹುದಿನಗಳ ಬೇಡಿಕೆ ಇದೀಗ ಈಡೇರಿದ್ದು, 2001-02ನೇ ಸಾಲಿನಲ್ಲಿ ಮಂಜೂರಾದ 200 ಮನೆಗಳ ಪೈಕಿ ಇದೀಗ 150 ಜನ ಅರ್ಹರಿಗೆ ಮನೆಗಳ ಹಕ್ಕು ಪತ್ರ ನೀಡಲಾಗುತ್ತಿದೆ. ಇನ್ನುಳಿದ 50 ಮನೆಗಳನ್ನು ವಿದ್ಯುತ್ ಬಿಲ್ ಪಾವತಿಸುವ ಅರ್ಹರಿಗೆ ನೀಡಲಾಗುತ್ತಿದ್ದು, ತಿಂಗಳ ಅವಕಾಶದಲ್ಲಿ ಬಾಕಿ ವಿದ್ಯುತ್ ಬಿಲ್ ಪಾವತಿಸಿ ಹಕ್ಕು ಪತ್ರ ಪಡೆಯುವಂತೆ ಕರೆ ನೀಡಿದರು.ಸ್ಥಳೀಯ ಸ್ಲಂ ಬೋರ್ಡ್​ನಲ್ಲಿ ಒಂದೇ ಕುಟುಂಬಕ್ಕೆ ಎರಡು ಮನೆಗಳಿರುವುದು, ಬೇರೊಬ್ಬರು ವಾಸವಿರುವುದು ಗಮನಕ್ಕೆ ಬಂದಿದ್ದು ಸರಿಪಡಿಸಲಾಗುತ್ತಿದ್ದು, ಮನೆಗಳ ಹಂಚಿಕೆಯಲ್ಲಿ ಅರ್ಹರಿಗೆ ಸಿಗಬೇಕೇ ವಿನಃ ಯಾವುದೇ ಜಾತಿ ಪಕ್ಷ ನಡೆಯಬಾರದು ಎಂದರು.ಕೊಳಗೇರಿ ಅಭಿವೃದ್ಧಿ ನಿಗಮದ ಎಇಇ ಸುಧಾಕರ ಕಟ್ಟಿಮನಿ, ಪುರಸಭೆ ಸದಸ್ಯರಾದ ಗೀತಾ ಕೋಳೂರು, ವಸಂತ ಮೇಲಿನಮನಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಶಿವು ಹಜಾಳ ಮತ್ತಿತರರಿದ್ದರು.

Please follow and like us:
error