5ನೇ ಬಾರಿಗೆ ಟಿ-20 ವಿಶ್ವಕಪ್ ಮುಡಿಗೇರಿಸಿದ ಆಸ್ಟ್ರೇಲಿಯಾ ವನಿತೆಯರು

ಫೈನಲ್ ನಲ್ಲಿ ಭಾರತಕ್ಕೆ ಹೀನಾಯ ಸೋಲು

ಮೇಲ್ಬೊರ್ನ್: ಮಹಿಳೆಯರ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯಾಟದಲ್ಲಿ ಆಸ್ಟ್ರೇಲಿಯ ವನಿತೆಯರು ಭಾರತದ ವಿರುದ್ಧ 85 ರನ್ ಗಳ ಜಯಗಳಿಸುವ ಮೂಲಕ ಐದನೇ ಬಾರಿಗೆ ಟಿ-20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿದ್ದಾರೆ.

ಗೆಲುವಿಗೆ 185 ರನ್ ಗಳ ಕಠಿಣ ಸವಾಲು ಪಡೆದಿದ್ದ ಭಾರತ 19.1 ಓವರ್ ಗಳಲ್ಲಿ 99 ರನ್ ಗಳಿಸಿ ಸೋಲೊಪ್ಪಿಕೊಂಡಿತು. ದೀಪ್ತಿ ಶರ್ಮಾ 33 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮೆಗನ್ ಸ್ಕಟ್ 4 ಹಾಗೂ ಜೊನಸ್ಸೆನ್ ಮೂರು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ನಿಗದಿತ 20 ಓವರ್ ಗಳಲ್ಲಿ  ನಾಲ್ಕು ವಿಕೆಟ್ ನಷ್ಟಕ್ಕೆ 184 ರನ್ ಬಾರಿಸಿತು. ಆರಂಭಿಕ ಆಟಗಾರರಾದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಲಿ 39 ಎಸೆತಗಳಲ್ಲಿ 75 ರನ್ ಬಾರಿಸಿದರೆ, ಮೂನಿ 54 ಎಸೆತಗಳಲ್ಲಿ 78 ರನ್ ಸಿಡಿಸಿದರು.

185 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತಿಮವಾಗಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 99 ರನ್ ಗೆ ಆಲೌಟ್ ಆಯಿತು.

Please follow and like us:
error