5ನೇ ದಿನದತ್ತ ಹೊರಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

Kannadanet :  ಕರ್ನಾಟಕ ರಾಜ್ಯ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ನೋಂದಾಯಿತ ಸಂಘವು, ನೌಕರರ ಹಿತಕ್ಕಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ೫ ನೇ ದಿನಕ್ಕೆ ಕಾಲಿರಿಸಿದೆ.
ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವ್ಯದ್ಯಕಿಯ ಶಿಕ್ಷಣ ಇಲಾಖೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದು ನೌಕರರಿಗೆ ಸೇವಾಭದ್ರತೆ ಕೆಲಸಕ್ಕೆ ಸಮಾನ ವೇತನ ಮತ್ತು ಜೀವವಿಮೆ ಕಲ್ಪಿಸಿಲ್ಲ ಖಾಯಂ ನೌಕರರಿಗೆ ನೀಡುವಂತೆ ನೌಕರರ ವೇತನವನ್ನು ಕಲ್ಪಿಸಿ ನೌಕರರನ್ನು ಕಾಯಂಗೊಳಿಸುವಂತೆ ಹಿಂದಿನ ದಿನಗಳಲ್ಲಿ ದಿ  ೨೫.೧೦.೨೦೧೮ ರಂದು ಎಲ್ಲಾ ಜಿಲ್ಲಾ ಮಟ್ಟದಲ್ಲಿ ಸಾಂಕೇತಿಕವಾಗಿ ಒಂದು ದಿನ ಹೋರಾಟ ಮಾಡಿತ್ತು. ೧೦,೨,೨೦೧೯ ರಿಂದ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ೩ ದಿನ ಧರಣಿ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಮನವಿ ಪಡೆದ ಮುಖ್ಯಮಂತ್ರಿಗಳು ಭರವಸೆಯನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದಾದ ನಂತರದ ದಿನಗಳಲ್ಲಿ ಭರವಸೆಗಳು ಈಡೇರದಿದ್ದಾಗ, ಮತ್ತೆ ಹೋರಾಟ ಮಾಡಿದ ಪ್ರತಿಫಲವಾಗಿ ಬೇಡಿಕೆಗಳನ್ನು ಈಡೇರಿಸಲು ಮಾನವ ಸಂಪನ್ಮೂಲ ನೀತಿ ಸಮಿತಿಯನ್ನು ದಿ. ೩,೬,೨೦೨೦ ರಂದು ರಚಿಸಲಾಗಿತ್ತು ಮತ್ತೆ ೩ ತಿಂಗಳೊಳಗೆ ಸಮಿತಿಯು ವರದಿಯನ್ನು ಸಲ್ಲಿಸಲು ಆದೇಶ ನೀಡಲಾಗಿತ್ತು. ೩ ಕ್ಕೆ ಮೂರು ತಿಂಗಳಾಯಿತು.
ಅಂದಿನಿಂದ ಈ ದಿನದವರೆಗೂ ಸಮಿತಿ ವರದಿ ನೀಡಿಲ್ಲ, ನೀಡಿದ ಬಗ್ಗೆ ತಿಳಿದು ಬಂದಿಲ್ಲ ವರದಿಯ ಕುರಿತು ಚರ್ಚೆಯಾಗಿಲ್ಲ. ಬೇಡಿಕೆಗಾಗಿ ಕಳೆದ ೫ ದಿನಗಳಿಂದ ಕರ್ನಾಟಕದಾದ್ಯಂತ ಗುತ್ತಿಗೆ ನೌಕರರು ಅನಿರ್ಧಿ?ವಧಿ ಮುಷ್ಕರನಡೆಸುತ್ತಿದ್ದಾರೆ. ಮತ್ತು ಕೊರೊನಾ ಸೇರಿದಂತೆ ಅನೇಕ ಸಾಂಕ್ರಾಮಿಕ ಕಾಯಿಲೆ, ರೋಗಗಳ ವಿರುದ್ಧ, ಆಸ್ಪತ್ರೆಯಲ್ಲಿ ಸಾರ್ವಜನಿಕ ಸೇವೆಯನ್ನು, ಜೀವದ ಹಂಗು ತೊರೆದು ಹೋರಾಡುತ್ತಾ ನೀಡುತ್ತಿದ್ದೇವೆ. ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವವರೆಗೂ ಹಂತಹಂತದ ಹೋರಾಟಗಳು ಮುಂದುವರೆಯುತ್ತವೆ ಮುಂದಿನ ದಿನಗಳಲ್ಲಿ ಸಂಘ ಉಗ್ರ ಹೋರಾಟ ಮಾಡುತ್ತದೆ.ದಯಮಾಡಿ ತಾವುಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಮೂಲಕ ಇಂದು ಕೊಪ್ಪಳದಲ್ಲಿ ಸಂಸದರಾದ ಸಂಗಣ್ಣ ಕರಡಿಯವರಿಗೆ ಮನವಿ ಸಲ್ಲಿಸಲಾಯಿತು. ಗಂಗಾವತಿಯಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ ಅವರಿಗೆ ಯಲಬುರ್ಗಾದಲ್ಲಿ ಶಾಸಕರಾದ ಹಾಲಪ್ಪ ಆಚಾರ್ ಅವರಿಗೆ ಗುತ್ತಿಗೆ ನೌಕರರ ಸಂಘದ ಆಯಾ ತಾಲೂಕು ಮತ್ತು ಜಿಲ್ಲಾ ಘಟಕದಿಂದ ಮನವಿಯನ್ನು ಸಲ್ಲಿಸಲಾಯಿತು.

ಈ ಸಮಯದಲ್ಲಿ ಶರತ್, ಪ್ರಕಾಶ ನವಲೆ, ಸಂಗಮೇಶ, ಗವಿಸಿದ್ಧಪ್ಪ, ಶಿವು, ರೂಪಾ, ಡಿ.ಸಿ.ರತ್ನಾ, ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

Please follow and like us:
error