ನಿವೃತ್ತ ಪೋಲಿಸರ ಕ್ಷೇಮಾಭಿವೃದ್ದಿಗೆ ಇಲಾಖೆಯಿಂದ ನಾನಾಯೋಜನೆಗಳು- ಟಿ.ಶ್ರೀಧರ್ ಎಸ್ಪಿ

ಕೊಪ್ಪಳದಲ್ಲಿ ಪೋಲಿಸ್ ಧ್ವಜ ದಿನಾಚರಣೆ

ಕೊಪ್ಪಳ : ಸೇವೆಯಲ್ಲಿದ್ದು ನಿವೃತ್ತರಾಗಿರುವ ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ದಿಗೆ ಪೋಲಿಸ್ ಧ್ವಜ ದಿನಾಚರಣೆ ದಿನ ಧ್ವಜಗಳನ್ನು ಮಾರಾಟ ಮಾಡುವ ಮೂಲಕ ನಿಧಿಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ನಿವೃತ್ತರ ಕ್ಷೇಮಾಭಿವೃದ್ದಿಗೆ ಬಳಸಲಾಗುತ್ತದೆ. ಇದಕ್ಕೆ ಎಲ್ಲ ಸಾರ್‍ವಜನಿಕರ ಸಹಕಾರ ಬೇಕು ಎಂದು ಎಸ್ಪಿ ಟಿ.ಶ್ರೀಧರ್ ಹೇಳಿದರು. ನಗರದ ಪೋಲಿಸ್ ಕವಾಯತು ಮೈದಾನದಲ್ಲಿ ಇಂದು ನಡೆದ ಪೋಲಿಸ್ ಧ್ವಜದಿನಾಚರಣೆ ಕಾರ್‍ಯಕ್ರಮ ದಲ್ಲಿ ಮಾತನಾಡಿದ ಅವರು ನಿವೃತ್ತ ಪೋಲಿಸರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಎಸೈ ಪರಸಪ್ಪ, ಅತಿಥಿಗಳಾಗಿ ನಿವೃತ್ತ ಎಎಸೈ ರಮೇಶ ಪದಕಿ, ಸಿಎಚ್ಸಿ ಸುಂಕಪ್ಪ ಆಗಮಿಸಿದ್ದರು. ಕಾರ್‍ಯಕ್ರಮದಲ್ಲಿ ಆಕರ್ಷಕ ಗೌರವವಂಧನೆ, ಪಥಸಂಚಲನ ಹಾಗೂ ರಾಷ್ಟ್ರಧ್ವಜ ಹಾಗೂ ಪೊಲಿಸ್ ಧ್ವಜಗಳ ಆಗಮನ ಮತ್ತು ನಿರ್ಗಮನ ನಡೆಯಿತು.

ಸೇವಾ ನಿವೃತ್ತರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ವಂದನಾರ್ಪಣೆಯನ್ನು ನಗರ ಠಾಣೆಯ ಸಿಪಿಐ ಮಾರುತಿ ಬುಳ್ಳಾರಿ ನೆರವೇರಿಸಿದರೆ ಕಾರ್‍ಯಕ್ರಮವನ್ನು ಗಂಗಾವತಿಯ ಡಿಎಸ್ಪಿ ಆರ್.ಎಸ್.ಉಜ್ಜನಿಕೊಪ್ಪ ssಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂತನ ಡಿಎಸ್ಪಿ ಗೀತಾ ಬೆನಹಾಳ, ಡಿಆರ್‌ನ ಡಿಎಸ್ಪಿ ಶಶಿಧರ , ಹಿರಿಯ ಅಧಿಕಾರಿಗಳಾದ ರವಿ ಉಕ್ಕುಂದ, ನಾಗರೆಡ್ಡಿ, ಮೌನೇಶ ಪಾಟೀಲ್, ವಿಶ್ವನಾಥ ಹಿರೇಗೌಡರ, ಸೇರಿದಂತೆ ಜಿಲ್ಲೆಯ ಹಿರಿಯ,ಕಿರಿಯ ಅಧಿಕಾರಿಗಳು,ಪೋಲಿಸ್ ಸಿಬ್ಬಂದಿಗಳ ಕುಟುಂಬಸ್ಥರು ಭಾಗಿಯಾಗಿದ್ದರು.

Please follow and like us:
error