370ನೇ ವಿಧಿ ರದ್ದತಿಯಿಂದ ಸರ್ದಾರ್ ವಲ್ಲಭಬಾಯಿ ಕನಸು ನನಸು: ಪ್ರಧಾನಿ ಮೋದಿ

ಕೆವಾಡಿಯಾ (ಗುಜರಾತ್), ಅ.31:  ದೇಶದ ಮೊದಲ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್  ಅವರ 144ನೇ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಗುಜರಾತ್ ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಪಟೇಲ್ ಅವರ ಏಕತೆ ಪ್ರತಿಮೆಗೆ  ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಲ್ಲಭಬಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕೆಲಸಗಳಿಂದ ಹಲವು ಪ್ರಾಂತೀಯ ರಾಜ್ಯಗಳು ಇಂದು ಒಂದಾಗಿವೆ.  ಸರ್ದಾರ್ ಪಟೇಲ್ ರಾಜಪ್ರಭುತ್ವಗಳನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಮೂಲಕ ಅಪೂರ್ವ  ಸಾಧನೆ ಮಾಡಿದ್ದರು ಎಂದು  ಹೇಳಿದರು.

ವೈವಿಧ್ಯತೆಯಲ್ಲಿ ಏಕತೆ ನಮ್ಮ ಹೆಮ್ಮೆ ಮತ್ತು ಗುರುತು, ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆ ದಿನವೆಂದು ಆಚರಿಸಲಾಗುತ್ತದೆ. “ನಮ್ಮ ವಿರುದ್ಧ ಯುದ್ಧಗಳನ್ನು ಗೆಲ್ಲಲು ಸಾಧ್ಯವಾಗದವರು ನಮ್ಮ ಏಕತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಕಿಸ್ತಾನದ ಬಗ್ಗೆ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ “ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆ” ಯನ್ನು ಮಾತ್ರ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ದೇಶ ಯಶಸ್ವಿಯಾಗಿದೆ ಅವರು ಹೇಳಿದರು.

ಜಮ್ಮು –ಕಾಶ್ಮೀರ  ದೇಶದಲ್ಲಿ 370 ನೇ ವಿಧಿ ಇರುವ ಏಕೈಕ ಸ್ಥಳವಾಗಿತ್ತು, ಕಳೆದ ಮೂರು ದಶಕಗಳಲ್ಲಿ 40,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ಭಯೋತ್ಪಾದನೆಯಿಂದಾಗಿ ಹಲವಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಈಗ ಆರ್ಟಿಕಲ್ 370 ರ ಈ ಗೋಡೆಯನ್ನು ಕೆಡವಲಾಗಿದೆ.

ದಶಕಗಳಷ್ಟು ಹಳೆಯ ಸಮಸ್ಯೆಗಳು ಪರಿಹಾರದ ಸಮೀಪದಲ್ಲಿರುವುದರಿಂದ ಈಶಾನ್ಯವು ಪ್ರತ್ಯೇಕತಾವಾದದಿಂದ ಬಾಂಧವ್ಯದತ್ತ ಸಾಗುತ್ತಿದೆ ಎಂದು ಮೋದಿ ಹೇಳಿದರು. ಈ ಸಂದರ್ಭದಲ್ಲಿ  ನೆರೆದ ಜನತೆಗೆ ಪ್ರಧಾನಿ ಮೋದಿ ಏಕತೆಯ ಪ್ರಮಾಣವನ್ನು ಬೋಧಿಸಿದರು

Please follow and like us:
error