35ಕ್ಕೆ ಕಾಲಿಟ್ಟ ಯಶ್ : ಶುಭಾಶಯಗಳ ಸುರಿಮಳೆ

 ಅಭಿಮಾನಿಗಳು,ಚಿತ್ರರಂಗದ ಗಣ್ಯರು, ಸಹನಟರು   ಯಶ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.

ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ  ಯಶ್‌ 35ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ನಟಿ ರಾಧಿಕಾ ಪಂಡಿತ್‌ ಗಂಡನ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ಗಂಡನೊಂದಿಗೆ ಕೇಕ್‌ ಮುಂದೆ ಕುಳಿತಿರುವ ಫೋಟೊ ಹಂಚಿಕೊಂಡಿರುವ ರಾಧಿಕಾ ‘ಕೆಲವೊಮ್ಮೆ ನಾನು ಆಶ್ಚರ್ಯಪಡುತ್ತೇನೆ. ನೀವು ನನಗೆ ಅದ್ಹೇಗೆ ಅಷ್ಟು ಪರಿಪೂರ್ಣ ಜೋಡಿ ಎನ್ನಿಸಿಕೊಂಡಿದ್ದೀರಿ ಎಂದು. ನಂತರ ನನಗೆ ಅರಿವಾಗುತ್ತದೆ. ನಿಮ್ಮ ಕೇಕ್‌ನೊಂದಿಗೆ ಕೂಡ ನಾನು ಪಾಲು ಹೊಂದಿದ್ದೇನೆ ಎಂದು. ಹ್ಯಾಪಿ ಬರ್ತ್‌ಡೇ ನನ್ನ ಆತ್ಮೀಯ ಗೆಳೆಯ’ ಎಂದು ಬರೆದುಕೊಂಡಿದ್ದಾರೆ.

 

Sometimes I wonder, why you are so perfect for me.. then I realise its coz u let me have your share of cake too 😛
Happy birthday my Bestie 😘
#radhikapandit #nimmaRP

Please follow and like us:
error