3 ತಿಂಗಳಾದ್ರೂ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸಿದ ಜನರಿಗಿಲ್ಲ ಹಣ

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕು ಮಂಗಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಿದ ಜನರಿಗೆ ಇನ್ನೂ ಕೂಡ ಹಣ ಬಂದಿರುವುದಿಲ್ಲ ಜೊತೆಗೆ ಮೇಟಿಗಳು ಕೂಡ ಹಣ ಬಂದಿರುವುದಿಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೂಡ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಂಗಳೂರು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಕೂಡ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ಜನರು ಪಂಚಾಯಿತಿಗೆ ಅಲೆದಾಡುವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.ಜೊತೆಗೆ ಮಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಕೂಡ ಪಂಚಾಯಿತಿ ವತಿಯಿಂದ ಜವಾಬ್ದಾರಿತನದಿಂದ ನಿಭಾಯಿಸುತ್ತಿಲ್ಲ . ನೂರು ದಿನಗಳ ಕಾಲದ ಉದ್ಯೋಗ ಖಾತ್ರಿ ಕೆಲಸವನ್ನು ಕೇವಲ ಹದಿನೈದು ದಿನಗಳ ಮಾತ್ರ ನೀಡಿರುತ್ತಾರೆ . ಇನ್ನೂ ಅನೇಕ ಜನರ ಖಾತೆಗೆ ಹಣ ಬಂದಿರುವುದಿಲ್ಲ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಬಗೆ ಬಗೆಹರಿಸಬೇಕು ಇಲ್ಲದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

Please follow and like us:
error