1869.85 ಕೋಟಿ ರೂ. ರಾಜ್ಯಕ್ಕೆ ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರಕಾರ

ಬೆಂಗಳೂರು, ಜ.6: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ನೆರೆ ಹಾಗೂ ಅತೀವೃಷ್ಟಿ ಪೀಡಿತ ಕರ್ನಾಟಕಕ್ಕೆ 1869.85 ಕೋಟಿ ರೂ.ಗಳ ಪರಿಹಾರವನ್ನು ಸೋಮವಾರ ಘೋಷಿಸಿದೆ. ಈ ಹಿಂದೆ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು.

ಅಸ್ಸಾಂ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತ್ರಿಪುರಾ ಹಾಗೂ ಉತ್ತರ ಪ್ರದೇಶದಲ್ಲಿ 2019ರಲ್ಲಿ ನೆರೆ ಹಾವಳಿ, ಭೂ ಕುಸಿತ ಹಾಗೂ ಮೇಘ ಸ್ಫೋಟದ ಪರಿಣಾಮ ಸಾಕಷ್ಟು ಪ್ರಮಾಣ ಹಾನಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಎನ್‌ಡಿಆರ್‌ಎಫ್ ವತಿಯಿಂದ 5908.56 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅಸ್ಸಾಂ ರಾಜ್ಯಕ್ಕೆ 616.63 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 284.93, ಕರ್ನಾಟಕಕ್ಕೆ 1869.85 ಕೋಟಿ ರೂ., ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರಕ್ಕೆ 956.93 ಕೋಟಿ ರೂ., ತ್ರಿಪುರಾ ರಾಜ್ಯಕ್ಕೆ 63.32 ಕೋಟಿ ರೂ. ಹಾಗೂ ಉತ್ತರ ಪ್ರದೇಶಕ್ಕಕೆ 367.17 ಕೋಟಿ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಕರ್ನಾಟಕಕ್ಕೆ 1200 ಕೋಟಿ ರೂ., ಮಧ್ಯಪ್ರದೇಶಕ್ಕೆ 1000 ಕೋಟಿ ರೂ., ಮಹಾರಾಷ್ಟ್ರಕ್ಕೆ 600 ಕೋಟಿ ರೂ. ಹಾಗೂ ಬಿಹಾರ ರಾಜ್ಯಕ್ಕೆ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. 2019-20ನೇ ಸಾಲಿನಲ್ಲಿ ಈವರೆಗೆ ಕೇಂದ್ರ ಸರಕಾರವು 8068.33 ಕೋಟಿ ರೂ.ಗಳನ್ನು 27 ರಾಜ್ಯಗಳಿಗೆ ಎಸ್‌ಡಿಆರ್‌ಎಫ್‌ನಲ್ಲಿ ತನ್ನ ಪಾಲನ್ನು ಬಿಡುಗಡೆ ಮಾಡಿದೆ.

Please follow and like us:
error