1250 ಕೋ.ರೂ.ನ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು  ಕೋವಿಡ್ 2 ನೇ ಆಲೆಯ ಸಪೋರ್ಟ್ ( ಬೆಂಬಲ ) ಪ್ಯಾಕೇಜ್ ಸಾಂಕ್ರಾಮಿಕದ 2 ನೆ ಆಲೆ ತೀವ್ರತೆಯಿಂದಾಗಿ , ಹೆಚ್ಚುತ್ತಿರುವ ತೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ , ಹಾಗೂ ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಜ್ಯ ಸರ್ಕಾರವು ಮೇ 24 , 2021 ರವರೆಗೆ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿತ್ತು .

• ಈ ನಿರ್ಬಂಧನೆಗಳಿಂದ ಸಾಮಾಜಿಕ ಮತ್ತು ಆರ್ಥಿಕ ಪರಿರ್ಕಮಗಳನ್ನು ಕಡಿಮೆಗೊಳಿಸಲು ಮತ್ತು ಸಾರ್ವಜನಿಕರ ದೈನಂದಿನ ಅಗತ್ಯತೆಗಳಿಗಾಗಿ ಕೃಷಿ , ಸರಕು ಸಾಗಾಣಿಕ , ಅಗತ್ಯ ಸೇವೆ , ಕಟ್ಟಡ ಕಾಮಗಾರಿಗಳು ( in – stu ) , ಹೋಟೆಲ್ ಉದ್ಯಮ ( ಡೆಲಿವರಿ ಮಾತ್ರ ) , ಇ ಶಾಮರ್ಸ್ , ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆ , ಅಗತ್ಯ ಸೇವೆಗಾಗಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಸೇವೆ ಮುಂತಾದವುಗಳಿಗೆ ಅವಕಾಶ ಕಲ್ಪಿಸಲಾಗಿತ್ತು ,

• ಬೆಳಗ್ಗೆ 10 ರಿಂದ 10 ಘಂಟೆಯವರೆಗೆ ದಿನಸಿ , ಹಣ್ಣು , ತರಕಾರಿ , ಹೂವು , ಹಾಲು ಉತ್ಪನ್ನಗಳು ಮತ್ತು ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ಮಾಡಿಕೊಡಲಾಗಿದೆ . * ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಅನಿವಾರ್ಯವಾಗಿ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದ್ದು , ಇದರಿಂದಾಗಿ ಜನರು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಬಾರದೆಂದು ಸರ್ಕಾರವು ಈ ಕೆಳಗಿನಂತೆ ಜನರ ನೆರವಿಗೆ ಧಾವಿಸಿದೆ , • ಕೋವಿಡ್ 1 ನೇ ಅಲೆಯಲ್ಲಿ ನಮ್ಮ ಸರ್ಕಾರದ್ದು ಹಲವಾರು ವಲಯಗಳಿಗೆ ಆರ್ಥಿಕ ಪ್ಯಾಕೇಜ್‌ನ್ನು ನೀಡಿರುತ್ತದೆ . * ಆದಾಗ್ಯೂ , ಪ್ರಸಕ್ತ ನಿರ್ಬಂಧಗಳೆಂದ ಹಲವು ಅಸಂಘಟಿತ ವಲಯಗಳಿಗೆ ಹಾಗೂ ರೈತರಿಗೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು , ಪರಿಣಾಮ ತಗ್ಗಿಸಲು ರಾಜ್ಯದ ಜನತೆಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಟ್ಟು 1250 ಕೋ.ರೂ.ನ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಸಚಿವರು ಮತ್ತು ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ CM ಹೂ ಬೆಳೆಗಾರರಿಗೆ ಪ್ರತಿ ಒಂದು ಹೆಕ್ಟೇರ್ ಗೆ ತಲಾ 10 ಸಾವಿರ ರೂ. ಸಹಾಯಧನ ನೀಡಲಾಗುವುದು. ಇದಕ್ಕೆ 12.73 ಕೋ.ರೂ. ಖರ್ಚಾಗಲಿದ್ದು, ಸುಮಾರು 20 ಸಾವಿರ ರೈತರಿಗೆ ಸಹಾಯವಾಗಲಿದೆ. ಹಣ್ಣು-ತರಕಾರಿ ಬೆಳೆಗಾರರಿಗೆ ಗರಿಷ್ಠ ಒಂದು ಹೆಕ್ಟೇರ್ ಗೆ ತಲಾ 10 ಸಾವಿರ ರೂ. ಸಹಾಯಧನ ನೀಡಲಾಗುವುದು. ಇದಕ್ಕೆ 69 ಕೋ.ರೂ. ಖರ್ಚಾಗಲಿದ್ದು, ಸುಮಾರು 70 ಸಾವಿರ ರೈತರಿಗೆ ಇದರಿಂದ ಸಹಾಯವಾಗಲಿದೆ ಎಂದು ತಿಳಿಸಿದರು.

ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕ (ಲೈಸೆನ್ಸ್ ಹೊಂದಿದ ಹಾಗೂ ನೋಂದಾಯಿತ)ರಿಗೆ ತಲಾ 3 ಸಾವಿರ ರೂ., ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ರಾಜ್ಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ತಲಾ 3 ಸಾವಿರ ರೂ., ಅಸಂಘಟಿತ ವಲಯದ ಕ್ಷೌರಿಕರು, ಅಗಸರು, ಟೈಲರ್‌ಗಳು, ಹಮಾಲಿ, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‌ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರಿಗೆ  ತಲಾ 2 ಸಾವಿರ ರೂ., ಆತ್ಮ ನಿರ್ಭರ್ ನಿಧಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಬೀದಿ ವ್ಯಾಪಾರಿಗಳಿಗೆ 2 ಸಾವಿರ ರೂ., ಕಲಾವಿದರು ಮತ್ತು ಕಲಾ ತಂಡಗಳಿಗೆ 3 ಸಾವಿರ ರೂ. ನೆರವು ನೀಡಲಾಗುವುದು ಎಂದವರು ವಿವರಿಸಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಫಲಾನುಭವಿಗೆ ಮೇ ಮತ್ತು ಜೂನ್ ತಿಂಗಳಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು.

Please follow and like us:
error