11 ಸಾವಿರ ದಾಟಿದ ಕರೋನಾ ಸೋಂಕಿತರ ಸಂಖ್ಯೆ : ಕೊಪ್ಪಳ ಜಿಲ್ಲೆಯ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಿ

Kannadanet ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಕರೋನಾ ಸೋಂಕಿತರು ಹೆಚ್ಚಾಗುತ್ತಿರುವ ಮತ್ತು ಸಾವನ್ನಪ್ಪುತ್ತಿರುವ ಜಿಲ್ಲೆಯ ಕೊಪ್ಪಳ ಜಿಲ್ಲೆಯಾಗಿದೆ.  ಜಿಲ್ಲಾಡಳಿತ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡರೂ ಸಹಿತ ಜನ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ದಿನೇ ದಿನೇ ಸೋಂಕಿತರ ಮತ್ತು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ಜಿಲ್ಲೆಯ ಭಾಗ್ಯನಗರ ಮತ್ತು ಗಂಗಾವತಿಯಲ್ಲಿ ಗವಿಮಠದ ಶ್ರೀಗಳು ಹಾಗೂ ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಸ್ವತಃ ಪಾದಯಾತ್ರೆ ಮಾಡಿ ನಗರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಆದರೆ  ಅವರ ಎಲ್ಲ ಪ್ರಯತ್ನಗಳು ವಿಫಲವಾದಂತೆ ಕಾಣುತ್ತಿವೆ. ಜನಸಾಮಾನ್ಯರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುತ್ತಿದ್ದಾರೆ ಜಿಲ್ಲಾಧಿಕಾರಿ. ಇದನ್ನು ತಡೆಗಟ್ಟಲು ಮಾಸ್ಕ್ ಕಡ್ಡಾ ಯ ಇಲ್ಲವೇ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದರೂ ಸಹ ಪ್ರಯೋಜನವಾಗಿಲ್ಲ. ಜನಸಾಮಾನ್ಯರು ಇದರ ಬಗ್ಗೆ ಜಾಗೃತಗೊಳ್ಳಬೇಕಿದೆ.  ಇಂದು ಜಿಲ್ಲೆಯಲ್ಲಿ ಒಟ್ಟು 65 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 24 ಗಂಗಾವತಿ 22 ಕೊಪ್ಪಳ 7 ಕುಷ್ಟಗಿ 12 ಯಲಬುರ್ಗಾದಲ್ಲಿ ಪತ್ತೆಯಾಗಿವೆ. ಇಂದು ಮೂವರು ಸಾವನ್ನಪ್ಪಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 231ಕ್ಕೇ ಏರಿಕೆಯಾಗಿದೆ. ಇಂದು 144 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ.  ಇದುವರೆಗೆ 8732 ಜನ ಡಿಸ್ಚಾರ್ಜ ಆಗಿದ್ದಾರೆ. 1840 ಜನ ಹೋಮ್ ಐಸೋಲೇಷನಲ್ಲಿದ್ದಾರೆ.  ಜನರು ಮತ್ತಷ್ಟು ಜಾಗೃತರಾಗಿ ಸುರಕ್ಷಿತ ಅಂತರ ಮತ್ತು ಮಾಸ್ಕ ಕಡ್ಡಾಯ ಮಾಡಿಕೊಳ್ಳದಿದ್ದರೆ ಇಡೀ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುಬೇಕಾಗುತ್ತದೆ

Please follow and like us:
error