1.50 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ : ನದಿ ಪಾತ್ರದಲ್ಲಿರುವವರಿಗೆ ಪ್ರವಾಹದ ಮುನ್ಸೂಚನೆ ನೀಡಿ- ಎಂ.ಪಿ ಮಾರುತಿ

ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿರುವವರಿಗೆ ಪ್ರವಾಹದ ಮುನ್ಸೂಚನೆ ನೀಡಿ : ಎಂ.ಪಿ ಮಾರುತಿ
ಕೊಪ್ಪಳ,   ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ-ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಪ್ರವಾಹದ ಮುನ್ಸೂಚನೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಅವರು ಸಂಬAಧಪಟ್ಟ ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ತುಂಗಭದ್ರಾ ಅಚ್ಚು-ಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಸುಮಾರು 1.50 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುವುದೆಂದು ಉಪ ವಿಭಾಗೀಯ ಅಧಿಕಾರಿ, ಎಸ್ಟೇಟ್ & ಎಚ್.ಡಬ್ಲೂö್ಯ. ಉಪವಿಭಾಗ ಟಿಬಿ ಡ್ಯಾಂ ಇವರು 4ನೇ ಪ್ರವಾಹ ಮುನ್ನೆಚ್ಚರಿಕಾ ಸಂದೇಶದಲ್ಲಿ ತಿಳಿಸಿದ್ದಾರೆ. ಹಾಗೂ ಹವಮಾನ ಇಲಾಖೆಯ ವರದಿಯಂತೆ ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚು-ಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿರುತ್ತಾರೆ.
ಆದ್ದರಿಂದ ತುಂಗಭದ್ರಾ ಜಲಾಶಯದ ನದಿಪಾತ್ರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳ ಸುರಕ್ಷತೆಗಾಗಿ ಜನರು ಯಾವುದೇ ಚಟುವಟಿಕೆ ನಡೆಸದಂತೆ ಮುಂಜಾಗ್ರತೆಯನ್ನು ವಹಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಹ ಸಂಭವಿಸುವ ಗ್ರಾಮಗಳಲ್ಲಿ ಡಂಗೂರ ಸಾರುವುದು, ಮೈಕ್ ಮೂಲಕ ಪ್ರಚಾರ ಮಾಡುವುದರ ಮುಖಾಂತರ ಹಾಗೂ ತಮಟೆ ಭಾರಿಸುವ ಮುಖಾಂತರ ಜನರಿಗೆ ಜಾಗೃತಿ ಮೂಡಿಸಲು ಸಂಬAಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಹಾಗೂ ಗ್ರಾಮ ಪಂಚಾಯತಿ ವಿಪತ್ತು ನಿರ್ವಹಣಾ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ.
ನದಿ ಪಾತ್ರದಲ್ಲಿರುವ ಗ್ರಾಮಗಳ ವಿವರ;
ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿರುವ ಗ್ರಾಮಗಳ ವಿವರ ಇಂತಿದೆ.  ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆನ್ನೂರು, ಶ್ಯಾಲಿಗನೂರು, ನಂದಿಹಳ್ಳಿ ಹಾಗೂ ಕಕ್ಕರಗೋಳ ಗ್ರಾಮಗಳು, ಬರಗೂರು ಗ್ರಾ.ಪಂ.ನ ಬರಗೂರು ಮತ್ತು ಕುಂಟೋಜಿ, ಮುಷ್ಟೂರು ಗ್ರಾ.ಪಂ., ಉಳೇನೂರು ಗ್ರಾ.ಪಂ.ನ ಉಳೇನೂರು, ಜಮಾಪುರ, ಈಳಿಗನೂರು ಹಾಗೂ ಕುಟ್ನಿಕಲ್, ಗಂಗಾವತಿ ತಾಲ್ಲೂಕಿನ ಡಾಣಾಪೂರ ಗ್ರಾ.ಪಂ.ನ ಡಾಣಾಪೂರ ಮತ್ತು ಹೆಬ್ಬಾಳ, ಆನೆಗೊಂದಿ ಗ್ರಾ.ಪಂ., ಚಿಕ್ಕಜಂತಕಲ್ ಗ್ರಾ.ಪಂ.ನ ಚಿಕ್ಕಜಂತಕಲ್, ನಾಗರಹಳ್ಳಿ ಹಾಗೂ ಅಯೋಧ್ಯ, ಸಾಣಾಪೂರ ಗ್ರಾ.ಪಂ.ನ ಸಾಣಾಪೂರ, ಹನುಮನಹಳ್ಳಿ ಹಾಗೂ ವಿರುಪಾಪುರಗಡ್ಡಿ, ಸಂಗಾಪುರ ಗ್ರಾ.ಪಂ.ನ ವಿಪ್ರ, ರಾಮದುರ್ಗಾ ಹಾಗೂ ಸಿಂಗನಗುAಡಾ, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಡ್ಯಾಂ ಗ್ರಾ.ಪಂ.ನ ಹೊಳೆಮುದ್ಲಾಪುರ, ಹುಲಿಗಿ ಗ್ರಾ.ಪಂ., ಬಂಡಿಹರ್ಲಾಪುರ ಗ್ರಾ.ಪಂ.ನ ನಾರಾಯಣಪೇಟೆ, ಬೋಚನಹಳ್ಳಿ ಗ್ರಾ.ಪಂ.ನ ಕೇಸಲಾಪುರ, ನಿಲೋಗಿಪುರ, ಹಲವಾಗಲಿ ಹಾಗೂ ಬೋಚನಹಳ್ಳಿ, ಮತ್ತೂರು ಗ್ರಾ.ಪಂ.ನ ಮತ್ತೂರು, ತಿಗರಿ ಹಾಗೂ ಹನಕುಂಟಿ, ಶಿವಪುರ ಗ್ರಾ.ಪಂ.ನ ಶಿವಪುರ ಹಾಗೂ ಮಹ್ಮದ್‌ನಗರ, ಗೊಂಡಬಾಳ ಗ್ರಾ.ಪಂ., ಹೊಸಳ್ಳಿ ಗ್ರಾ.ಪಂ., ಕಾತರಕಿ-ಗುಡ್ಲಾನೂರು ಗ್ರಾ.ಪಂ., ಬಹದ್ದೂರ ಬಂಡಿ ಗ್ರಾ.ಪಂ.ನ ಮೆಳ್ಳಿಕೇರಿ, ಹಿರೇಬಗನಾಳ ಗ್ರಾ.ಪಂ.ನ ಕರ್ಕಿಹಳ್ಳಿ ಮತ್ತು ಕುಣಿಕೇರಿ ಗ್ರಾ.ಪಂ.ನ ಲಾಚನಕೇರಿ ಹಾಗೂ ಹ್ಯಾಟಿ-ಮುಂಡರಗಿ, ಈ ಗ್ರಾಮಗಳ ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿರುವ ಜನ-ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಪ್ರವಾಹದ ಮುನ್ಸೂಚನೆ ನೀಡುವಂತೆ ಸಂಬAಧಪಟ್ಟ ಗ್ರಾ.ಪಂ. ಅಧಿಕಾರಿಗಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error