​ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ  ಮಕ್ಕಳಿಂದ ಜಾಗೃತಿ

ಕೊಪ್ಪಳ : ಭಾಗ್ಯನಗರದ ೧೭ನೇ ವಾರ್ಡ್ನ ಧನ್ವಂತರಿ  ಕಾಲೋನಿಯಲ್ಲಿ ನಕ್ಷತ್ರ ಸ್ವಸಹಾಯ ಸಂಘದ ವತಿಯಿಂದ ರವಿವಾರ ಬೆಳ್ಳಂಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಮಕ್ಕಳು ಬಯಲು ಬಹಿರ್ದೆಸೆ  ಮುಕ್ತ ಕುರಿತು ಜಾಗೃತಿ ಮೂಡಿಸಿದರು.
ನಕ್ಷತ್ರ ಸ್ವಸಹಾಯ ಸಂಘದ ಮಕ್ಕಳು ಮತ್ತು  ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಬಯಲು ಶೌಚಾಲಯದಿಂದ ರೋಗರುಜಿನಗಳು ಉಂಟಾಗುತ್ತವೆ ಹೀಗಾಗಿ  ಕೂಡಲೇ ನಿಮಗೆ ಶೌಚಾಲಯ ಇಲ್ಲದಿದ್ದರೇ ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಶೌಚಾಲಯ ಕಟ್ಟಸಿಕೊಡುವರು ದಯಮಾಡಿ ಬಯಲು ಬಹಿರ್ದೆಸೆ ನಿಲ್ಲಿಸಿ  ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳಾದ ಅರ್ಪಿತಾ ಎಸ್.ಎನ್, ಅಭಿಷೇಕ್ಸ್ಎ .ಎನ್, ಸಹನಾ, ಸಿಂಚನಾ ಉಜ್ವಲ್ ಜ್ಯೊÃತಿ, ಸಮಾನ್ವಿ ಪ್ರಜ್ವಲ್ ಜ್ಯೊÃತಿ, ಸಮೃದ್ಧ ಜಾಣದ, ಶ್ರೆÃಯಾ, ನಕ್ಷತ್ರ  ಸ್ವಸಹಾಯ  ಯ ಸಂಘದ ಲಲಿತಾ ಅಳವಂಡಿ,ಸುಜಾತ ಪ್ರಜ್ವಲ್, 

ವೀಣಾ ನಾಯಕ್, ರಾಖಿ ಜಾಣದ, ಶಂಕ್ರಮ್ಮ ಸಿಂಗಾಡಿ, ಪದ್ಮಾವತಿ ನುಗಡೋಣಿ,ಸಿಂಧೂಲ್ ಉಜ್ವಲ್,ರೇಖಾ ಮಡಿವಾಳರು,ಮುಖಂಡರಾದ ಕನಕಮೂರ್ತಿ  ಚಲವಾದಿ,ಸೋಮಲಿಂಗಪ್ಪ ಮೆಣಸಿನಕಾಯಿ, ಮಹೇಶ ಸೇರಿದಂತೆ ಅನೇಕರು ಪಾಲ್ಗೊÃಂಡಿದ್ದರು.

Please follow and like us:
error