​ಕಾರ್ಗಿಲ್ ವಿಜಯೋತ್ಸವ ಆಚರಣೆ

ಸೈನಿಕರು, ರೈತರು ದೇಶಕ್ಕೆ ಎರಡು ಕಣ್ಣುಗಳಿದ್ದಂತೆ : ಗವಿಸಿದ್ಧಪ್ಪ
ಕೊಪ್ಪಳ : ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಅಳವಂಡಿಯ ವೀರಯೋಧ ಮಲ್ಲಯ್ಯ ಮೇಗಳಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಗವಿಸಿದ್ಧಪ್ಪ ಮುತ್ತಾಳ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದು ನಾವು ಇಷ್ಟೊಂದು ನೆಮ್ಮದಿಯಾಗಿ ಇರುವುದಕ್ಕೆ ಕಾರಣ ಗಡಿ ಕಾಯುವ ಯೋಧರಿಂದ. ರೈತರು ಹಾಗೂ ಯೋಧರು ಈ ದೇಶದ ಎರಡು ಕಣ್ಣುಗಳಿದ್ದಂತೆ. ರೈತ ಕೃಷಿಮಾಡಿ ದೇಶಕ್ಕೆ ಅನ್ನ ನೀಡಿದರೆ, ಸೈನಿಕ ಗಡಿ ಕಾಯುವುದರ ಮೂಲಕ ದೇಶದ ರಕ್ಷಣೆ ಮಾಡುತ್ತಾನೆ. ಹಾಗಾಗಿ ಜೈ ಜವಾನ್ ಜೈ ಕಿಸಾನ್ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು.
ಕಾಲೇಜಿನ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಇಮಾಮ್ ಸಾಬ್ ಮಾತನಾಡಿ, ಈ ದೇಶಕ್ಕಾಗಿ ಸೈನಿಕರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಕಾರ್ಗಿಲ್ ದಿವಸವನ್ನು ವಜಯೋತ್ಸವವಾಗಿ ಆಚರಿಸುತ್ತೇವೆ. ಆದ್ರೆ ಅದು ವಿಜಯೋತ್ಸವವಲ್ಲ ಅಂದು ನೂರಾರು ಸೈನಿಕರು ಹುತಾತ್ಮರಾದರು, ಸಾವಿರ ಸಂಖ್ಯೆಯ ಸೈನಿಕರು ಗಾಯಗೊಂಡರು, ಕಾಲು ಕೈಯಿ ಕಳೆದುಕೊಂಡರು. ಅವರ ಕುಟುಂಬಗಳ ಸ್ಥಿತಿ ಚಿಂತಜನಕವಾಗಿದೆ. ಈ ದಿನ ಅವುಗಳನ್ನು ನೆನಪಿಸುತ್ತದೆ ಎಂದು ಹೇಳಿದರು.
ಹುತಾತ್ಮರಾದ ಸೈನಿಕರಿಗೆ ಒಂದು ನಿಮಿಷ ಮೌಚಾರಣೆ ಮಾಡುವ ಮೂಲಕ ಗೌರವಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ನಾಗೇಂದ್ರಪ್ಪ, ಉಪನ್ಯಾಸಕರಾದ ಸಂಗಮೇಶ್, ಮಂಜುನಾಥ, ದೇವೆಂದ್ರಪ್ಪ, ಭಗತ್‌ಸಿಂಗ್ ಸಂಘದ ಸದಸ್ಯ ಪ್ರತಾಪ ಸೇರಿದಂತೆ ಇನ್ನಿತರರು ಇದ್ದರು. ಕು. ಲಲಿತ ಪ್ರಾರ್ಥಿಸಿದರು, ನಾಗರತ್ನ ಕರಿಬಸನಗೌಡರು ಸ್ವಾಗತಿಸಿದರು, ಕು. ಹನುಮವ್ವ ಕಳ್ಳಿ ವಂದಿಸಿದರು. ಕು. ಭಾರತಿ ನಿರೂಪಿಸಿದರು.

Please follow and like us:
error