೭೨ ನೇ ಗಣರಾಜ್ಯೋತ್ಸವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣ

ಕೊಪ್ಪಳ :

ಈ ಪವಿತ್ರ ದಿನದಂದು ವೇದಿಕೆಯ ಮೇಲೆ ಆಸೀನರಾಗಿರುವ ಶಾಸಕರೇ, ಸಂಸದರೇ, ಜಿಲ್ಲಾ ಪಂಚಾಯತ್ ಅಧ್ಯಕ್ಷರೇ, ಜಿಲ್ಲಾಧಿಕಾರಿಗಳೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ, ಜಿಲ್ಲಾ ರಕ್ಷಣಾಧಿಕಾರಿಗಳೇ ಹಾಗೂ ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಜನಪ್ರತಿನಿಧಿಗಳೇ ಹಾಗೂ ನಾಗರಿಕ ಬಂಧುಗಳೇ, ವಿದ್ಯಾರ್ಥಿಗಳೇ, ಅಧಿಕಾರಿ ವರ್ಗದವರೇ ಹಾಗೂ ಮಾಧ್ಯಮ ಮಿತ್ರರೇ, ಸ್ವತಂತ್ರ ಭಾರತವು ಗಣರಾಜ್ಯವಾಗಿ ೭೧ ವರ್ಷಗಳು ತುಂಬಿ ೭೨ ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದ್ದೇವೆ. ಈ ಶುಭ ಸಂದರ್ಭದಲ್ಲಿ ತಮಗೆಲ್ಲಾ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.
ದೇಶದ ಇತಿಹಾಸದಲ್ಲಿ ಆಗಸ್ಟ್ ೧೫ ಮತ್ತು ಜನವರಿ ೨೬ ಅತ್ಯಂತ ಮಹತ್ವದ ದಿನಗಳಾಗಿವೆ. ಇವೆರಡೂ ದಿನಗಳನ್ನು ನಾವೆಲ್ಲರೂ ರಾಷ್ಟಿçÃಯ ಹಬ್ಬಗಳಾಗಿ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ.
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡಿರುವ ನಮ್ಮ ಭಾರತ ಪ್ರಜಾತಂತ್ರ ಮತ್ತು ಗಣತಂತ್ರದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದೇಶದ ಸ್ವಾತಂತ್ರö್ಯ ಚಳುವಳಿಯಲ್ಲಿ ಲಾಲಾ ಲಜಪತರಾಯ, ಬಾಲಗಂಗಾಧರ ತಿಲಕ, ಬಿಪಿನ್ ಚಂದ್ರಪಾಲ, ಪಂಡಿತ್ ಜವಾಹರಲಾಲ್ ನೆಹರು, ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್‌ಬಹದ್ದೂರ್ ಶಾಸ್ತಿçà ಸೇರಿದಂತೆ ಅನೇಕ ಮಹಾತ್ಮರ ತ್ಯಾಗ, ಬಲಿದಾನದಿಂದ ೧೯೪೭ ರ ಆಗಸ್ಟ್ ೧೫ ರಂದು ಬ್ರಿಟೀಷರ ಗುಲಾಮಗಿರಿಯಿಂದ ದೇಶಕ್ಕೆ ಮುಕ್ತಿ ದೊರೆಯಿತು. ಭಾರತ ಇಂದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ.
ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ|| ಬಿ.ಆರ್.ಅಂಬೇಡ್ಕರ್ ಅವರ ಅವಿರತ ಪರಿಶ್ರಮದ ಫಲವಾಗಿ ೧೯೫೦ ರ ಜನವರಿ ೨೬ ರಂದು ಭಾರತದ ಆಡಳಿತಕ್ಕೆ ಕೈಗನ್ನಡಿಯಾಗಿರುವ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ದಿನವನ್ನು ನಾವು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ.
ಭಾರತೀಯರಾದ ನಾವು ದೇಶವನ್ನು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸುವುದಾಗಿ ಘೋಷಿಸಿದ್ದು, ಇದಕ್ಕೆ ಪೂರಕವಾಗಿ ಸ್ವಾತಂತ್ರö್ಯ, ಸಮಾನತೆ ಹಾಗೂ ನ್ಯಾಯವನ್ನು ರಕ್ಷಿಸುವುದಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ನಮ್ಮ ಸಂವಿಧಾನವು ವಿಶ್ವದ ಬೃಹತ್ ಸಂವಿಧಾನವಾಗಿದ್ದು, ೪೪೮ ವಿಧಿಗಳು, ೧೨ ಪರಿಚ್ಛೇಧಗಳು, ೧೦೩ ಕ್ಕೂ ಹೆಚ್ಚು ಬಾರಿ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನವಾಗಿರುತ್ತದೆ.
ಸAವಿಧಾನ ನೀಡಿರುವ ಮೂಲಭೂತ ಹಕ್ಕುಗಳು ರಾಷ್ಟçದ ಪ್ರತಿಯೊಬ್ಬ ಪ್ರಜೆಗೆ ಸಂರಕ್ಷಣೆಯನ್ನು ನೀಡಿದೆ. ನಮ್ಮ ಸಂವಿಧಾನ ಸಂಸದೀಯ ಮಾದರಿಯದ್ದಾಗಿದೆ. ಪ್ರತಿಯೊಂದು ಕಾನೂನನ್ನು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸತ್ತಿನ ಮೂಲಕವೇ ಎಲ್ಲಾ ಶಾಸನಗಳನ್ನು ರೂಪಿಸುವ ಜನತಾಂತ್ರಿಕ ವ್ಯವಸ್ಥೆ ನಮ್ಮದಾಗಿದೆ.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಇಡೀ ಜಗತ್ತಿಗೆ ಮಾದರಿ ಎನಿಸಿದೆ. ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಅಲುಗಾಡದೆ ಗಟ್ಟಿಯಾಗಿ ನಿಂತಿದೆ. ಇದಕ್ಕೆ ಸಂವಿಧಾನದ ಅಡಿಪಾಯ ಹಾಕಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರ ಋಣಿಗಳಾಗಿರಬೇಕು.
ರಾಷ್ಟಿçÃಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಾಗಿದೆ. ಈ ಅಪಾರ ಯುವಶಕ್ತಿಯ ಸದ್ಬಳಕೆಗಾಗಿ ಇಂದು ಅವಕಾಶಗಳನ್ನು ಒದಗಿಸುವುದು ಅಗತ್ಯವಾಗಿದೆ. ಯುವಜನಾಂಗ ತಮ್ಮ ಹೊಣೆಯರಿತು ದುಶ್ಚಟಗಳಿಗೆ ಬಲಿಯಾಗದೆ, ದುಡಿಮೆಯಲ್ಲಿ ನಿರತರಾಗಬೇಕಿದೆ.
ಕೃಷಿ ಇಲಾಖೆ:
ಕಳೆದ ೨೦೨೦ ನೇ ಸಾಲಿನಲ್ಲಿ ಜಿಲ್ಲೆಯ ವಾಡಿಕೆ ಮಳೆ ೬೧೪ ಮಿ.ಮೀ. ಇದ್ದು, ೮೪೯ ಮಿ.ಮೀ. ವಾಸ್ತವಿಕ ಮಳೆಯಾಗಿದ್ದು, ಶೇ.೩೮ ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ ೨,೫೨,೫೦೦ ಹೆಕ್ಟರ್ ಇದ್ದು, ಇದರಲ್ಲಿ ೩,೬೫,೫೭೮ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.೧೨೧ ರಷ್ಟು ಬಿತ್ತನೆಯಾಗಿರುತ್ತದೆ ಹಾಗೂ ಹಿಂಗಾರು ಹಂಗಾಮಿನಲ್ಲಿ ೧,೫೫,೨೦೦ ಹೆಕ್ಟರ್ ಇದ್ದು, ೧,೬೨,೧೨೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.೧೦೪ ರಷ್ಟು ಬಿತ್ತನೆಯಾಗಿರುತ್ತದೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮು ಜಿಲ್ಲೆಗೆ ಆಶಾದಾಯಕವಾಗಿರುತ್ತದೆ.
ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ-ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ ಇದಕ್ಕಾಗಿ ಕೃಷಿ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಡಿ.ಎಂ.ಎಫ್. ಅನುದಾನದಡಿಯಲ್ಲಿ ೨೦ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನಗಳಿಗೆ ಹಾಗೂ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದು ಅಥವಾ ಎರಡರಂತೆ ಒಟ್ಟು ೪೦ ಕೃಷಿ ಸಂಜೀವಿನಿ ವಾಹನಗಳನ್ನು ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿAದ ಲೋಕಾರ್ಪಣೆ ಮಾಡಲಾಗಿದೆ.
ಕೀಟ, ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಯೋಜನೆಯನ್ನು ದೇಶದಲ್ಲಿ ಮೊಟ್ಟ ಮೊದಲನೇಯದಾಗಿ ಕೊಪ್ಪಳ ಜಿಲ್ಲೆಯ ಎಲ್ಲಾ ಹೋಬಳಿವಾರು ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ ಸಲಹಾ ಸಮಿತಿಗಳಿಂದ ಜಿಲ್ಲಾ ಮಟ್ಟದ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ ಹಾಗೂ ಸಂಚಾರಿ ವಾಹನದ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ರೈತರ ತಾಕುಗಳಿಗೆ ತಾಂತ್ರಿಕ ತಂಡವು ಭೇಟಿ ನೀಡಲು ಸಹಕಾರಿಯಾಗುತ್ತದೆ.
ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ನಿಖರವಾಗಿ ಹಾಗೂ ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರದ ಅನುದಾನದ ಮೂಲಕ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಇವರು ಅಭಿವೃದ್ದಿಪಡಿಸಿರುವ ಕೀಟ/ರೋಗಗಳ ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಸಲಹೆ ನೀಡಲು ಇ-ತಂತ್ರಾAಶ (ಇ-ಸ್ಯಾಪ್) ಬಳಕೆಯ ಮೂಲಕ ನಿಯಮಿತವಾಗಿ ರೈತರ ತಾಕುಗಳಿಗೆ ಭೇಟಿ ನೀಡುವುದು. ಸರ್ವೇಕ್ಷಣೆಯಲ್ಲಿ ಕೀಟ/ರೋಗ ಬಾಧೆ ಕಂಡುಬAದಲ್ಲಿ ತಕ್ಷಣವೇ ರೈತರಿಗೆ ಕೈಗೊಳ್ಳಬೇಕಾದ ಸಂಭವನೀಯ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ರೈತರ ಮೊಬೈಲ್‌ಗಳಿಗೆ ಸಂದೇಶ ಅಥವಾ ಮುದ್ರಿತ ಚೀಟಿ ನೀಡುವ ಮೂಲಕ ಉತ್ಪಾದನಾ ವೆಚ್ಚ ಮತ್ತು ಬೆಳೆಹಾನಿಯನ್ನು ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ.
ರೈತರು ತಮ್ಮ ಮಟ್ಟದಲ್ಲಿ ರಸಗೊಬ್ಬರಗಳ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಕಂಡುಕೊAಡು ಗುಣಮಟ್ಟದ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ಈ ದಿಸೆಯಲ್ಲಿ ರೈತರು ಸುಲಭ ಪರೀಕ್ಷೆಗಳಿಂದ ರಸಗೊಬ್ಬರಗಳು ಕಲಬೆರಕೆಯಾಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂದು ತಿಳಿಯಲು ಸುಲಭ ಪರೀಕ್ಷೆಯ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ನೀಡಲಾಗುವುದು. ತದನಂತರ ರೈತರು ತಮ್ಮ ಹಂತದಲ್ಲಿಯೇ ರಸಗೊಬ್ಬರಗಳ ಗುಣಮಟ್ಟವನ್ನು ಪ್ರಾರಂಭಿಕವಾಗಿ ತಿಳಿದು ಖರೀದಿಸಬಹುದಾಗಿರುತ್ತದೆ.
ರೈತರಿಗೆ ಅನುಕೂಲವಾಗುವಂತೆ ಕೀಟ/ರೋಗ/ಕಳೆಗಳ ಬಾಧೆ ಮತ್ತು ಪೋಷಕಾಂಶಗಳ ಕೊರತೆ ಕುರಿತ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ೧೫೫೩೧೩ ನ್ನು ಅಳವಡಿಸಲಾಗಿರುತ್ತದೆ.
ಪ್ರಥಮ ಬಾರಿಗೆ ಜಿಲ್ಲೆಯ ಒಂದು ಲಕ್ಷ ಮೂವತ್ತು ಸಾವಿರ ರೈತರಿಗೆ ಮೊದಲನೇ ಹಂತದಲ್ಲಿ “ಸ್ವಾಭಿಮಾನಿ ರೈತ ಕಾರ್ಡ್” ವಿತರಿಸುವ ಕೆಲಸ ಪ್ರಾರಂಭಿಸಲಾಗಿದೆ. ಸ್ವಾಭಿಮಾನಿ ರೈತ ಕಾರ್ಡ್ ನಿಂದ ರೈತರು ಇಲಾಖೆಯಲ್ಲಿ ಯಾವುದೇ ಸೌಲಭ್ಯ ಪಡೆಯಲು ಅನುಕೂಲವಾಗುವುದು. ಈ ಕಾರ್ಡ್ ನಲ್ಲಿ ರೈತರ ಸರ್ವೇ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಇತರೆ ವಿವರಗಳ ಬಗ್ಗೆ ಮಾಹಿತಿ ಸಂಗ್ರಹವಾಗಿರುತ್ತದೆ.
ಒAದು ಕಾಳು ಉಳಿಸುವುದು ಎರಡು ಕಾಳು ಬೆಳೆಸುವುದಕ್ಕೆ ಸಮವಾಗಿದೆ, ಕಾರಣ ಜನವರಿ ೧೧ ರಿಂದ ಮಾರ್ಚ್ ೩೧ರವರೆಗೆ ಸಿ.ಎಫ್.ಟಿ.ಆರ್.ಐ. ಮೈಸೂರಿನಲ್ಲಿ ಕೃಷಿ ಇಲಾಖೆ ಹಾಗೂ ಕಪೆಕ್ ಸಹಯೋಗದೊಂದಿಗೆ ೫೦೦ ರೈತರನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಆಧಾರದ ಮೇಲೆ ಆಹಾರ ಸಂಸ್ಕರಣೆ ಹಾಗೂ ಮಾರಾಟ ಕುರಿತು ತರಬೇತಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಸೀಬೆ ಹಣ್ಣಿನ(ಪೇರಲ) ಕುರಿತು ಸಂಸ್ಕರಣೆ ಹಾಗೂ ಮಾರುಕಟ್ಟೆ ತರಬೇತಿಗೆ ಪ್ರತಿ ತಾಲ್ಲೂಕಿನಿಂದ ಇಬ್ಬರು ರೈತರಂತೆ ಒಟ್ಟು ೧೦ ಜನರಿಗೆ ತರಬೇತಿ ಒದಗಿಸಲಾಗುವುದು. ಪಿ.ಎಂ.ಎಫ್.ಎA.ಇ. ಯೋಜನೆಯಡಿಯಲ್ಲಿ ರೂ.೪೯೩ ಕೋಟಿಗಳ ಅನುದಾನವು ರಾಜ್ಯಕ್ಕೆ ದೊರೆತಿದ್ದು, ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವವರಿಗೆ ಶೇ.೩೫ ರಷ್ಟು ಗರಿಷ್ಠ ರೂ.೧೦.೦೦ ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುವುದು.
ನನ್ನ ಬೆಳೆ ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬೆಳೆಸಮೀಕ್ಷೆ ಆಪ್ ಬಳಸಿ, ರೈತರು ರಾಜ್ಯದಲ್ಲಿ ಒಟ್ಟು ೨ ಕೋಟಿ ೧೦ ಲಕ್ಷ ತಾಕುಗಳಲ್ಲಿ ಬೆಳೆ ವಿವರಗಳನ್ನು ತಾವೇ ದಾಖಲಿಸಿ, ದಾಖಲೆ ಮಾಡಿದ್ದಾರೆ. ಅದೇ ರೀತಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.೧೦೦ರಷ್ಟು ಪ್ರಗತಿಯನ್ನು ಸಾಧಿಸಿ, ಹಿಂಗಾರು ಹಂಗಾಮಿನಲ್ಲಿ ಈಗಾಗಲೇ ಒಂದು ಲಕ್ಷ ೪೪ ಸಾವಿರ ತಾಕುಗಳಲ್ಲಿ ಬೆಳೆ ಸಮೀಕ್ಷೆ ಶೇ.೮೦ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಈ ಬೆಳೆ ಸಮೀಕ್ಷೆ ಯೋಜನೆಯನ್ನು ಜನಾಂದೋಲನವಾಗಿ ಕೈಗೊಂಡಿದ್ದಕ್ಕೆ ಕೇಂದ್ರ ಕೃಷಿ ಸಚಿವಾಲಯದಿಂದ ನನಗೆ ಪ್ರಶಂಸನಾ ಪತ್ರ ನೀಡಿದ್ದು, ಕರ್ನಾಟಕ ರಾಜ್ಯವು ಮಾದರಿಯ ರಾಜ್ಯವಾಗಿದ್ದು, ಈ ಯೋಜನೆಯನ್ನು ಉಳಿದ ರಾಜ್ಯಗಳಿಗೆ ವಿಸ್ತರಿಸಲು ಕ್ರಮ ಜರುಗಿಸಲಾಗುವುದೆಂದು ತಿಳಿಸಿರುವುದನ್ನು ತಮಗೆ ಹೇಳಲು ನನಗೆ ಸಂತೋಷವೆನಿಸುತ್ತದೆ.
ತೋಟಗಾರಿಕೆ ಇಲಾಖೆ:
ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಗ್ರಾಮದ ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ತೋಟಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಕಳೆದ ೨೦೨೦ನೇ ಸಾಲಿನಲ್ಲಿ ಸಾವಯವ ತೋಟಗಾರಿಕೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಬೃಹತ್ ಎರೆಹುಳು ಘಟಕಗಳನ್ನು ಸ್ಥಾಪಿಸಲಾಗಿದ್ದು, ರೈತರಿಗೆ ಅನುಕೂಲಕರ ತೋಟಗಾರಿಕೆ ಬೆಳೆ ಪದ್ಧತಿ ಬಗ್ಗೆ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ:
ಅಂತರರಾಷ್ಟಿçÃಯ ಆಟಿಕೆ ಸಾಮಾನುಗಳ ಭಾರತದ ರಫ್ತಿನ ಪ್ರಮಾಣ ಕೇವಲ ಶೇ.೦.೫ರಷ್ಟು ಇದ್ದು, ಬಹುತೇಕ ಶೇ.೮೫ ರಷ್ಟು ಆಟಿಕೆ ಸಾಮಾನುಗಳನ್ನು ಚೀನಾ, ಫಿಲಿಫೈನ್ಸ್, ಮಲೇಷಿಯಾ, ಹಾಂಕ್‌ಕಾAಗ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಸ್ವಾವಲಂಭಿ ದೇಶವನ್ನಾಗಿಸಲು ಹಾಗೂ ಆಟಿಕೆ ಸಾಮಾನುಗಳ ತಯಾರಿಕೆಯನ್ನು ಪ್ರೋತ್ಸಾಹಿಸಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸುವಂತೆ ಹಾಗೂ ರಫ್ತು ಹೆಚ್ಚಿಸಲು ರಾಜ್ಯ ಸರ್ಕಾರವು ಮೆ: ಏಕಸ್ ಸಂಸ್ಥೆಯಿAದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬಾನಾಪುರ ಗ್ರಾಮದಲ್ಲಿ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಆಟಿಕೆಗಳ ಕ್ಲಸ್ಟರ್ ಭೂಮಿ ಪೂಜೆಯನ್ನು ಇತ್ತೀಚೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಿAದ ನೆರವೇರಿಸಲಾಗಿದೆ.
ಜಿಲ್ಲಾ ಪಂಚಾಯತಿ:
೨೦೧೯-೨೦ ಮತ್ತು ೨೦೨೦-೨೧ನೇ ಸಾಲಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲೆಯ ಎಲ್ಲಾ ಅನುಷ್ಟಾನ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಜಲಾಮೃತ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಜಲಾಮೃತ ಯೋಜನೆಯಡಿ ೪೯ ಕೆರೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದರಂತೆ ಸಮುದಾಯಾಧಾರಿತ ಮತ್ತು ನೈಸರ್ಗಿಕ ನಿರ್ವಹಣಾ ಕಾಮಗಾರಿಗಳಾದ ಕೆರೆಗಳ ಹೂಳೆತ್ತುವ ಕಾಮಗಾರಿ, ಹೊಸಕೆರೆ, ಚೆಕ್‌ಡ್ಯಾಂ, ಗೋ-ಕಟ್ಟೆಗಳನ್ನು, ಕುಂಟೆ, ಕೃಷಿ ಹೊಂಡ, ಬದು ನಿರ್ಮಾಣ, ಹಸರೀಕರಣ, ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು ಮತ್ತು ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ರೇಷ್ಮೆ, ಬದು ನಿರ್ಮಾಣ, ದನದ/ ಕುರಿ/ ಹಂದಿ ದೊಡ್ಡಿ ನಿರ್ಮಾಣ. ಈರುಳ್ಳಿ ಶೇಖರಣಾ ಉಗ್ರಾಣ ಮುಂತಾದ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.
ಮಹಾತ್ಮಾಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ದಿನಾಂಕ: ೨೨-೦೧-೨೦೨೧ ರ ಅಂತ್ಯದವರೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ೪೬.೦೯ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಹಾಗೂ ರೂ.೧೮,೭೨೦.೬೧ ಕೋಟಿಗಳ ಅನುದಾನ ಬಳಕೆ ಮಾಡಲಾಗಿದೆ.
೨೦೧೯-೨೦ ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೨,೯೬೨ ಮನೆಗಳ ಗುರಿ ನೀಡಿದ್ದು, ೨,೫೨೭ ಮನೆಗಳು ಅನುಮೋದನೆಗೊಂಡಿದ್ದು ಇದರಲ್ಲಿ ೮೮೨ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುತ್ತವೆ.
ಕೊಪ್ಪಳ ಜಿಲ್ಲೆಗೆ ೨೦೨೦-೨೧ ನೇ ಸಾಲಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ರೂ. ೬೦,೭೭೧.೯೯ ಲಕ್ಷಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ೫೧೧ ಜನವಸತಿಗಳಿಗೆ ೧,೫೩,೭೭೬ ನಳ ಸಂಪರ್ಕ ನೀಡಲು ರೂ. ೨೯೮.೬೧ ಲಕ್ಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ೪೮ ಜನವಸತಿಗಳ ಕಾಮಗಾರಿ ಪ್ರಗತಿಯಲ್ಲಿದ್ದು, ೬೬ ಜನವಸತಿಗಳ ಕಾಮಗಾರಿಗಳಿಗೆ ಐಔಂ ನೀಡಲಾಗಿದ್ದು, ಇನ್ನುಳಿದ ಜನವಸತಿಗಳ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯು ಸರ್ಕಾರದ ಮುಂಚೂಣಿ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ, ಆರೋಗ್ಯ, ತ್ಯಾಜ್ಯ ವಿಲೇವಾರಿ, ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪದೊAದಿಗೆ ಸಮರೋಪಾದಿಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.
ಬೇಸ್‌ಲೈನ್ ಸಮೀಕ್ಷೆ-೨೦೧೨ ರಿಂದ ಹೊರಗುಳಿದ ಫಲಾನುಭವಿಗಳನ್ನು ಗುರುತಿಸಲಾಗಿದೆ. ಒಟ್ಟು ೧೫,೨೬೫ ಫಲಾನುಭವಿಗಳ ಗುರಿಯನ್ನು ನಿಗದಿಪಡಿಸಿಕೊಂಡಿದ್ದು, ಎಲ್ಲಾ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಂಡಿದ್ದಕ್ಕಾಗಿ ಪ್ರೋತ್ಸಾಹಧನ ಮಂಜೂರಾತಿ ನೀಡಿ ಶೇ.೧೦೦ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.
೨೦೨೦-೨೧ ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಅನುಷ್ಠಾನ ಮಾಡಲು ಸರ್ಕಾರದಿಂದ ನಿರ್ದೇಶನ ನೀಡಿರುತ್ತಾರೆ. ೨೦೧೩-೧೪ ರಲ್ಲಿ ಜಿಲ್ಲೆಗೆ ಒಟ್ಟು ೩೮ ಗ್ರಾಮ ಪಂಚಾಯತಿಗಳಿಗೆ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಠಾನಕ್ಕಾಗಿ ಸರ್ಕಾರದಿಂದ ಮಂಜೂರಾತಿ ನೀಡಲಾಗಿತ್ತು, ಅದರಂತೆ ಪ್ರಾಯೋಗಿಕವಾಗಿ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನುರಮಟ್ಟಿಯಲ್ಲಿ ವಿನೂತನವಾಗಿ ಒಟ್ಟು ೧೦ ಗ್ರಾಮ ಪಂಚಾಯತಿಗಳನ್ನು ಒಗ್ಗೂಡಿಸಿ ಬಹುಗ್ರಾಮಗಳ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗಿದ್ದು, ಇದು ರಾಜ್ಯದಲ್ಲಿ ಪ್ರಶಂಸೆಗೆ ಪಾತ್ರವಾಗಿರುತ್ತದೆ. ಈ ಮಾದರಿ ಘಟಕವನ್ನು ವೀಕ್ಷಿಸಲು ರಾಜ್ಯದ ನಾನಾ ಕಡೆಯಿಂದ ಸಾರ್ವಜನಿಕರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.
೨೦೧೯-೨೦ ನೇ ಸಾಲಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಅನುಷ್ಠಾನ ಮಾಡಲು ಜಾಗ ಇಲ್ಲದ ಗ್ರಾಮ ಪಂಚಾಯತಿಗಳನ್ನು ಒಗ್ಗೂಡಿಸಿಕೊಂಡು ಬಹುಗ್ರಾಮ ತ್ಯಾಜ್ಯ ಘಟಕಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದೆ. ಇದರಿಂದ ಘಟಕದ ನಿರ್ವಹಣೆ ಸುಲಭವಾಗಿ ಮಾಡಬಹುದಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಗ್ರಾಮ ಪಂಚಾಯತಿಗಳ ಕಸವನ್ನು ವಿಲೇವಾರಿ ಮಾಡಬಹುದಾಗಿದೆ. ಒಟ್ಟು ೯೧ ಗ್ರಾಮ ಪಂಚಾಯತಿಗಳ ಡಿಪಿಆರ್ ಅನುಮೋದನೆಯಾಗಿರುತ್ತವೆ, ೪೨ ಗ್ರಾಮ ಪಂಚಾಯತಿಗಳ ಜಮೀನು ಮಂಜೂರಾತಿ ಪ್ರಕ್ರಿಯೆಯುವ ವಿವಿಧ ಹಂತದಲ್ಲಿರುತ್ತವೆ. ೨೦ ಗ್ರಾಮ ಪಂಚಾಯತಿಗಳಲ್ಲಿ ಜಮೀನು ಲಭ್ಯತೆ ಇಲ್ಲದೇ ಇರುವುದರಿಂದ ಸರ್ಕಾರಿ ಹಳೆ ಕಟ್ಟಡಗಳನ್ನು ಗುರುತಿಸಲಾಗಿದೆ. ಕಸ ವಿಲೇವಾರಿಗಾಗಿ ಜಿಲ್ಲೆಯ ಒಟ್ಟು ೩೫ ಗ್ರಾಮ ಪಂಚಾಯತಿಗಳಲ್ಲಿ ಟ್ರಾö್ಯಕ್ಟ್ರ್ ಮತ್ತು ಆಟೋ ಟಿಪ್ಪರ್ ವಾಹನಗಳನ್ನು ಸರಬರಾಜು ಮಾಡಲಾಗಿರುತ್ತದೆ. ಬಾಕಿ ಉಳಿದ ಗ್ರಾಮ ಪಂಚಾಯತಿಗಳಿಗೆ ವಾಹನ ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ನಗು-ಮಗು, ಜನನಿ ಸುರಕ್ಷಾ ವಾಹಿನಿ (ಜೆ.ಎಸ್.ವಿ),  ೧೦೮ ಅಂಬುಲೆನ್ಸ್, ರಾಷ್ಟಿçÃಯ ಬಾಲ ಸ್ವಾಸ್ಥö್ಯ ಕಾರ್ಯಕ್ರಮ, ನವಜಾತ ಶಿಶುಗಳ ವಿಶೇಷ ಕಾಳಜಿ ಘಟಕ, ರಾಷ್ಟಿçÃಯ ಲಸಿಕಾ ಕಾರ್ಯಕ್ರಮ, ಶಾಲಾ ಲಸಿಕಾ ಅಭಿಯಾನ, ಮಾ ಕಾರ್ಯಕ್ರಮ, ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿ.ಎಮ್.ಎಸ್.ಎಮ್.ಎ), ಶುಚಿ, ವಿಟಾಮಿನ್ ಎ ಅನ್ನಾಂಗ ಪೂರಕ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ನಿಯಮಾನುಸಾರ ಆರೋಗ್ಯ ಸೌಲಭ್ಯ ಒದಗಿಸಿ ನಿಗದಿತ ಗುರಿ ಸಾಧಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ:
೨೦೨೦-೨೧ನೇ ಸಾಲಿಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಯೋಜನೆಯಲ್ಲಿ ಒಟ್ಟು ರೂ: ೫೧,೧೫೦.೩೫ ಲಕ್ಷಗಳನ್ನು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಲ್ಲಿ ರೂ: ೮,೬೮೫.೫೩ ಲಕ್ಷಗಳು ನಿಗದಿಪಡಿಸಿದ್ದು, ಒಟ್ಟಾರೆ ಜಿಲ್ಲಾ ಶಿಕ್ಷಣ ಇಲಾಖೆಗೆ ರೂ: ೫೯,೮೩೫.೬೫ ಲಕ್ಷಗಳ ಅನುದಾನ ಕಲ್ಪಿಸಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಅನುಮೋದಿತ ಕ್ರಿಯಾ ಯೋಜನೆಯಂತೆ ಡಿಸೆಂಬರ್-೨೦೨೦ರ ಅಂತ್ಯಕ್ಕೆ ರೂ: ೩೫,೧೦೧.೬೫ ಲಕ್ಷಗಳ ಬಿಡುಗಡೆ ಅನುದಾನಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಯೊಜನೆ ಕಾರ್ಯಕ್ರಮಗಳು ಹಾಗೂ ಎಸ್.ಎಸ್.ಕೆ ಯೋಜನಾ ಕಾರ್ಯಕ್ರಮಗಳಿಗೆ ಡಿಸೆಂಬರ್-೨೦೨೦ ಅಂತ್ಯಕ್ಕೆ ರೂ: ೨೫,೨೦೦.೧೦ ಲಕ್ಷಗಳ ಖರ್ಚು ಮಾಡಲಾಗಿರುತ್ತದೆ. ಶೇ.೬೩.೧೬ ರಷ್ಟು ಸಾಧನೆ ಮಾಡಲಾಗಿದೆ.
೨೦೨೦ನೇ ಸಾಲಿನ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಒಟ್ಟಾರೆ ೧೮,೯೮೦ ಮಕ್ಕಳು ಕುಳಿತಿದ್ದು, ೧೪,೦೪೧ ಉತ್ತೀರ್ಣರಾಗಿ ಶೇ.೭೩.೯೮ ರಷ್ಟು ಸಾಧನೆ ಮಾಡಿರುತ್ತಾರೆ. ಜಿಲ್ಲೆಯ ೧೭ ಶಾಲೆಗಳು ಶೇ.೧೦೦ ರಷ್ಟು ಫಲಿತಾಂಶ ಸಾಧನೆ ಮಾಡಿವೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯು ೨೩ನೇ ಸ್ಥಾನದಲ್ಲಿದೆ. ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಯಡಿಯಲ್ಲಿ ಹೆಚ್ಚು ಅಂಕ ಗಳಿಸಿದ ೧೫ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಪಾರಿತೋಷಕಗಳನ್ನು ವಿತರಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ:
ಪರಿಶಿಷ್ಟ ಜಾತಿ
ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ೬೪ ಸಂಸ್ಥೆಗಳಿದ್ದು, ಈ ಪೈಕಿ ೩೩ ಮೆಟ್ರಿಕ್ ಪೂರ್ವ, ೧೪ ಮೆಟ್ರಿಕ್ ನಂತರ, ೧೬ ವಸತಿ ಶಾಲೆಗಳು, ೦೧ ಆಶ್ರಮ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಭೋಜನ, ಸಮವಸ್ತç, ಪಠ್ಯಪುಸ್ತಕ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮತ್ತು ಹೊಸದಾಗಿ ಕನಕಗಿರಿ ಮತ್ತು ಯಲಬುರ್ಗಾ ನಗರಗಳಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳು ಮಂಜೂರಾಗಿರುತ್ತವೆ.
ಪರಿಶಿಷ್ಟ ಪಂಗಡ::-
ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ೧೪ ಸಂಸ್ಥೆಗಳಿದ್ದು, ಈ ಪೈಕಿ ೦೭ ಮೆಟ್ರಿಕ್ ಪೂರ್ವ, ೦೭ ಮೆಟ್ರಿಕ್ ನಂತರ, ೦೮ ವಸತಿ ಶಾಲೆಗಳು, ೦೨ ಆಶ್ರಮ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಭೋಜನ, ಸಮವಸ್ತç, ಪಠ್ಯಪುಸ್ತಕ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
೨೦೨೦-೨೧ನೇ ಸಾಲಿನ ಆಯವ್ಯಯ ಘೋಷಣೆಯಂತೆ ಸ್ವಾತಂತ್ರö್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ಸಂದೀಪ ಮುದ್ಲಾಪೂರ (ಶೇ.೯೭.೨೮) ಹಾಗೂ ಪರಿಶಿಷ್ಟ ಜಾತಿಯ ವಿದ್ಯಾ ಚಂದ್ರಪ್ಪ ರಾಠೋಡ (ಶೇ.೯೬.೧೬), ಮೇಘನಾ ಚವ್ಹಾಣ (ಶೇ.೯೬.೧೬) ಮತ್ತು ಜೀವನ ಪಿ. (ಶೇ.೯೬.೧೬) ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ನಗದು ಬಹುಮಾನ ನೀಡಲಾಗಿರುತ್ತದೆ.
ಕಾರ್ಮಿಕ ಇಲಾಖೆ:
ಜಿಲ್ಲಾ ಕಚೇರಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸೇರಿದಂತೆ ಒಟ್ಟು ೫೭,೨೮೯ ಕಾರ್ಮಿಕರ ನೋಂದಣಿಯಾಗಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ವಿವಿಧ ಸೌಲಭ್ಯಗಳಾದ ಮದುವೆ ಧನ ಸಹಾಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟ್ರೆöÊನಿಂಗ್ ಕಮ್ ಟೂಲ್‌ಕಿಟ್ ಸೌಲಭ್ಯ, ವಸತಿ ಸೌಲಭ್ಯ, ತಾಯಿ-ಮಗು ಸಹಾಯ ಹಸ್ತ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಎಲ್‌ಪಿಜಿ ಸಂಪರ್ಕ ಸೌಲಭ್ಯ, ಶೈಕ್ಷಣಿಕ ಧನಸಹಾಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.
೨೦೨೦-೨೧ ನೇ ಸಾಲಿನಲ್ಲಿ ೨,೦೬೩ ಶೈಕ್ಷಣಿಕ ಧನಸಹಾಯ ಸೌಲಭ್ಯ, ೬೪೨ ಮದುವೆ ಧನ ಸಹಾಯ ಸೌಲಭ್ಯ, ೫೨ ಹೆರಿಗೆ ಸೌಲಭ್ಯ, ೧೧ ಸಾಮಾನ್ಯ ವೈದ್ಯಕೀಯ ಸೌಲಭ್ಯ, ೬ ಪ್ರಮುಖ ವೈದ್ಯಕೀಯ ಸೌಲಭ್ಯ ಸೇರಿದಂತೆ ಒಟ್ಟು: ೨,೭೭೪ ಫಲಾನುಭವಿಗಳಿಗೆ ಇಲಾಖೆಯಿಂದ ಸೌಲಭ್ಯವನ್ನು ಒದಗಿಸಲಾಗಿದೆ.
ರೇಷ್ಮೆ ಇಲಾಖೆ:
ಜಿಲ್ಲೆಯಲ್ಲಿ ರೇಷ್ಮೆ ಕೃಷಿಯಲ್ಲಿ ಆಸಕ್ತಿಯಿರುವ ರೈತರನ್ನು ಗುರುತಿಸಿ ಅವರಿಗೆ ರೇಷ್ಮೆ ವ್ಯವಸಾಯ ಕೈಗೊಳ್ಳಲು ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತಿದೆ. ಅದರಂತೆ ೨೦೨೦-೨೧ ನೇ ಸಾಲಿಗೆ ೧೦೦.೦೦ ಹೆಕ್ಟರ್ ಹಿಪ್ಪುನೇರಳೆ ನಾಟಿ ಗುರಿ ನಿಗದಿ ಮಾಡಿದ್ದು, ಅದರಲ್ಲಿ ೭೨.೭೫ ಹೆಕ್ಟರ್ ಪ್ರದೇಶದಲ್ಲಿ ಹಿಪ್ಪುನೇರಳೆ ಕ್ಷೇತ್ರವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ೪೮೨.೬೪ ಹೆಕ್ಟರ್ ಹಿಪ್ಪುನೇರಳೆ ಕ್ಷೇತ್ರವಿದೆ.
ರೇಷ್ಮೆ ಅಭಿವೃದ್ಧಿ ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ ಸಹಾಯ ಧನವನ್ನು ವಿತರಿಸಲಾಗುತ್ತಿದ್ದು, ೨೦೨೦-೨೧ನೇ ಸಾಲಿಗೆ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ ಒಟ್ಟು ರೂ. ೮೮.೩೮ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ರೂ. ೫೮.೨೦ ಲಕ್ಷಗಳ ಸಹಾಯ ಧನವನ್ನು ೧೯ ಮನೆಗಳ ನಿರ್ಮಾಣಕ್ಕಾಗಿ ರೇಷ್ಮೆ ಬೆಳೆಗಾರರಿಗೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ಮತ್ತು ಕಾನೂನು ನೆರವು ಹಾಗೂ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸುವ ಸಂಬAಧ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ನವ್ಹೆಂಬರ್-೨೦೧೯ ರಿಂದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯನ್ನು ಪ್ರಾರಂಭಿಸಲಾಗಿರುತ್ತದೆ. ಇಲ್ಲಿಯವರೆಗೆ ೨೧ ಪ್ರಕರಣಗಳು ದಾಖಲಾಗಿರುತ್ತವೆ.
ಬಾಲ್ಯವಿವಾಹ ನಿಷೇಧ ಪ್ರಕರಣದಡಿ ೨೦೨೦ ರ ಏಪ್ರಿಲ್ ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ೯೪ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ೧೦ ಪ್ರಕರಣಗಳನ್ನು ದಾಖಲಿಸಿದೆ.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೂಡಿ ಬಾಳೋಣ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಇಲ್ಲಿ ಹಿಂದೂ, ಕ್ರೆöÊಸ್ತ, ಮುಸಲ್ಮಾನ, ಪಾರಸಿಕ, ಜೈನರು ಸೇರಿದಂತೆ ಎಲ್ಲಾ ಧರ್ಮ, ಜಾತಿ ಜನಾಂಗದವರು ಸಹೋದರರಂತೆ ಬಾಳುತ್ತಿದ್ದೇವೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಇಡೀ ವಿಶ್ವಕ್ಕೆ ಸಾರಿದ ದೇಶ ನಮ್ಮದಾಗಿದೆ. ಈ ಸಂವಿಧಾನದ ಆಶಯಗಳನ್ನು ಎಲ್ಲರೂ ಸೇರಿ ಮುನ್ನಡೆಸೋಣವೆಂದು ಹೇಳುತ್ತಾ ನನ್ನ ಮಾತಿಗೆ ವಿರಾಮ ಹೇಳುತ್ತೇನೆ.

Please follow and like us:
error