೫೭ ಪಾಜಿಟಿವ್ : ಎಲ್ಲಿ? ಎಷ್ಟು ಪ್ರಕರಣಗಳು ?

ಕೊಪ್ಪಳ : ಜಿಲ್ಲೆಯಲ್ಲಿ ೫೭ ಪ್ರಕರಣಗಳು ಎಲ್ಲಿ ಎಷ್ಟು ಬಂದಿವೆ ಮಾಹಿತಿ ಇಲ್ಲಿದೆ

ಗಂಗಾವತಿ ೨೫
ಕೊಪ್ಪಳ ೩೦
ಯಲಬುರ್ಗಾ ೨

ಭಾಗ್ಯನಗರ, ಕೊಪ್ಪಳ ಸೇರಿ 10 ಕಡೆ ಲಾಕ್ ಡೌನ; ಅನಗತ್ಯ ಓಡಾಡಿದ್ರೆ ಕ್ವಾರೆಂಟೆನ್


ಜಿಲ್ಲೆಯ ಗಂಗಾವತಿ ನಗರ ಸೇರಿ ಒಟ್ಟು 10 ಪ್ರದೇಶಗಳು ನಾಳೆ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಆಗಲಿವೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ ಕಿಶೋರ ಹೇಳಿದರು.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗಂಗಾವತಿ ತಾಲೂಕಿನ ಗಂಗಾವತಿ ನಗರ, ಮರ್ಲಾನಹಳ್ಳಿ, ಹೇರೂರು, ಹಣವಾಳ, ಕೊಪ್ಪಳ ತಾಲೂಕಿನ ಭಾಗ್ಯನಗರ, ಮುನಿರಾಬಾದ್, ಹುಲಗಿ, ಹಿರೇಸಿಂಧೋಗಿ, ಯಲಬುರ್ಗಾ ತಾಲೂಕಿನ ಮಂಗಳೂರು ಹಾಗೂ ಕುಷ್ಟಗಿ ತಾಲೂಕಿನ ನವಲಳ್ಳಿ ಗ್ರಾಮಗಳು ಲಾಕ್ ಡೌನ್ ಆಗಲಿವೆ ಎಂದು ತಿಳಿಸಿದರು. ಹಾಲು, ತರಕಾರಿ,‌ ಕಿರಾಣಿ ಸೇರಿ ಎಲ್ಲ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಸಿಬ್ಬಂದಿ ಜೊತೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಲಾಕ್ ಡೌನ್ ಪ್ರದೇಶದಲ್ಲಿ ಮದುವೆ ಸೇರಿ ಎಲ್ಲ ಕಾರ್ಯಕ್ರಮ ನಡೆಸುವಂತಿಲ್ಲ. ಆರೋಗ್ಯ, ಬ್ಯಾಂಕ್ ಮತ್ತು ಕೃಷಿ ಸಂಬಂಧಿತ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ ಈ ಜಾಗದಲ್ಲೂ ಕಲಂ 144ನಡಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ನಾಲ್ಕು ಜನರಿಗಿಂತ ಹೆಚ್ಚು ಜನ ಈ ಪ್ರದೇಶದಲ್ಲೂ ಸೇರುವಂತಿಲ್ಲ ಎಂದು ತಿಳಿಸಿದರು.
ಅನಗತ್ಯ ಓಡಾಡಿದ್ರೆ ಕ್ವಾರೆಂಟೆನ್: ಲಾಕ್ ಡೌನ್ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಅನಗತ್ಯ ಓಡಾಡುವಂತಿಲ್ಲ. ಹೀಗೆ ಓಡಾಡುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಒಂದು ಕೇಂದ್ರದಲ್ಲಿ ಕ್ವಾರೆಂಟೇನ್ ಮಾಡಲಾಗುವುದು. ಲಾಕ್ ಡೌನ್ ಮುಗಿಯುವವರೆಗೂ ಕ್ವಾರೆಂಟೆನ್ ಕೇಂದ್ರದಲ್ಲಿ ಇಡುತ್ತೇವೆ ಎಂದರು. ಕಟ್ಟುನಿಟ್ಟಾಗಿ ಲಾಕ್ ಡೌನ್ ಅನುಷ್ಠಾನ ಮಾಡಲಾಗುವುದು ಎಂದರು. ಜಿಪಂ ಸಿಇಒ ರಘುನಂದನ ಮೂರ್ತಿ ಇದ್ದರು.

Please follow and like us:
error