ಕೊಪ್ಪಳ : ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ತಾಲೂಕ ಆಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಆಯೋಜಿಸಿದ ಗೋವುಗಳಿಗೆ ನೀರು ಹಾಗೂ ಮೇವು ಪೂರೈಸಲು ಆರಂಭಿಸಿದ ಗೋಶಾಲೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕ್ಷೇತ್ರವಾರು ಒಂದೊಂದು ಗೋಶಾಲೆಯನ್ನು ತೆರೆಯಲಾಗುವುದು. ಕಳೆದ ೧೮ ವರ್ಷಗಳಲ್ಲಿ ೧೨ ವರ್ಷ ಕೊಪ್ಪಳ ಜಿಲ್ಲೆ ಭೀಕರ ಬರಗಾಲ ಕಂಡಿದೆ.ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜನುವಾರುಗಳಿಗೆ ಹಸಿವು ನೀಗಿಸಲು ಮೇವಿನ ಅಗತ್ಯ ಇರುವುದರಿಂದ, ಗೋಶಾಲೆಗಳನ್ನು ತೆರೆದು ದನಕರಗಳಿಗೆ ಮೇವು ಪೂರೈಸಲಾಗುವುದು. ಮುಂದಿನ ದಿನಗಳಲ್ಲಿಹಿರೇಸಿಂಧೋಗಿಯಲ್ಲಿಯೂ ಗೋಶಾಲೆಯನ್ನು ತೆರೆಯುವ ಉದ್ದೇಶವಿದೆ, ಇದರಿಂದ ಅಕ್ಕಪಕ್ಕ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯುವ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ, ಸರ್ಕಾರ ಮಟ್ಟದಲ್ಲಿ ಗಮನಕ್ಕೆ ತರಲಾಗುವುದು ಅಂತ ಹೇಳಿದರು. ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷೆ , ತಹಶಿಲ್ದಾರ್ ಸೇರಿದಂತೆ ಅಳವಂಡಿ ಗ್ರಾಮದ ಹಿರಿಯರು ಭಾಗವಹಿಸಿದ್ದರು.