ಹೊಸ ರೀತಿಯ ಮಾಧ್ಯಮದ ಅಗತ್ಯ ಮತ್ತು ಸಾಧ್ಯತೆ : ವಿಚಾರ ಸಂಕಿರಣ

ಕೊಪ್ಪಳ : ಗೌರಿ ಲಂಕೇಶ್-ನ್ಯಾಯಪಥ ಪತ್ರಿಕಾ ಬಳಗ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್‌ನಲ್ಲಿ ಹೊಸ ರೀತಿಯ ಮಾಧ್ಯಮದ ಅಗತ್ಯ ಮತ್ತು ಸಾಧ್ಯತೆ ಕುರಿತು ದಿ ೨೫.೧೦.೨೦೧೯ರ ಶುಕ್ರವಾರ, ಮಧ್ಯಾಹ್ನ ೧೨ಕ್ಕೆ ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ಹೊಸ ಮಾಧ್ಯಮದ ಅಗತ್ಯ ಕುರಿತು ಹಂಪಿ ವಿ.ವಿ..ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ.ರಹಮತ್ ತರೀಕೆರೆ ಮಾತನಾಡಲಿದ್ದಾರೆ. ಹೊಸ ರೀತಿಯ ಮಾಧ್ಯಮದ ಸಾಧ್ಯತೆ ಕುರಿತು ಹಂಪಿ ವಿ.ವಿ ಪ್ರಾಧ್ಯಾಪಕರಾದ ಡಾ.ಎ.ಎಸ್ ಪ್ರಭಾಕರ್ ಮಾತನಾಡಲಿದ್ದರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರಿ ಮೀಡಿಯಾಟ್ರಸ್ಟ್ ಬೆಂಗಳೂರಿನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕನ್ನಡನೆಟ್.ಕಾಂ ಸಂಪಾದಕರಾದ ಹೆಚ್.ವಿ.ರಾಜಬಕ್ಷಿ, ಪರ್ತಕರ್ತರಾದ ಸುನಿಲ್ ಶಿರಸಂಗಿ, ಪತ್ರಕರ್ತರು , ಪ್ರೋ.ಶೋಭಾ ಕೆ.ಎಸ್, ಮುಖ್ಯಸ್ಥರು, ಸಾಂಸ್ಕೃತಿಕ ವಿಭಾಗ ಡಾ.ಪ್ರಭುರಾಜ ಕೆ.ಎನ್: ಐಕ್ಯೂಎಸಿಘಟಕದ ಸಂಯೋಜಕರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್‍ಯರಾದ ಡಾ. ಚನ್ನಬಸಪ್ಪ ಚಿಲ್ಕರಾಗಿ ವಹಿಸಿಕೊಳ್ಳಲಿದ್ದಾರೆ. ಹೊಸ ರೀತಿಯ ಮಾಧ್ಯಮ ಪ್ರಯತ್ನದ ಭಾಗವಾಗಲು ಆಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟಕರಾದ ಮುತ್ತುರಾಜು ಕೋರಿದ್ದಾರೆ.

 

Please follow and like us:
error