ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ನಿಜವಾದ ಭೀತಿಹುಟ್ಟಿಸುವ ಅಂಶಗಳು  

1. ತರಗತಿ 3, 5, 8 ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಚೆಕ್ ಪೋಸ್ಟುಗಳಂತೆ ಪರೀಕ್ಷೆಗಳಿರುವುದು; ಇದು ಸಮಾಜದ ತಳಸಮುದಾಯವನ್ನು ಆರಂಭಿಕ ಹಂತದಲ್ಲಿಯೇ ತೆಗೆದುಹಾಕುವ, ಆ ಮೂಲಕ ಈ ವರ್ಗವನ್ನು ಉನ್ನತ ಶಿಕ್ಷಣದಿಂದ ವಂಚಿತವಾಗಿಸುವ ಯತ್ನವಾಗಿ ಕಾಣಿಸುತ್ತದೆ. ತಮ್ಮ ವಿಧ್ಯಾಭ್ಯಾಸ ವನ್ನು ಹಲವು ಮಕ್ಕಳು ಗಂಭೀರವಾಗಿ ಪರಿಗಣಿಸುವುದು ತಾರುಣ್ಯಾವಸ್ಥೆಯ ಅಂತ್ಯದಲ್ಲಿ ಅಥವಾ ತಾರುಣ್ಯಾವಸ್ಥೆಯ ನಂತರವೆಂದರೆ ತಪ್ಪಾಗಲಾರದು.‌

2. ಎಲ್ಲಾ ವಿಷಯಗಳಲ್ಲೂ ಅಖಿಲ ಭಾರತ ಮಟ್ಟದಲ್ಲೇ ಪ್ರವೇಶ ಪರೀಕ್ಷೆ ಗಳಿರುವುದು; ಮೈಸೂರಿನ ಒಬ್ಬ ವಿದ್ಯಾರ್ಥಿ ಬಿ ಎ ( ಇತಿಹಾಸ) ಇಲ್ಲವೇ ಬಿ ಎಸ್ಸಿ (ಗಣಿತಶಾಸ್ತ್ರ) ಕ್ಕೋಸ್ಕರ ತನ್ನ ನೆರೆಯ ಮಹಾರಾಜ/ಮಹಾರಾಣಿ ಕಾಲೇಜಿನಲ್ಲಿ ಸೀಟು ಪಡೆಯಲಿಚ್ಛಿಸಿದರೆ ಆತ ಅಖಿಲ ಭಾರತ ಮಟ್ಟದ ಪರೀಕ್ಷೆ ಯನ್ನು ಏಕೆ ಎದುರಿಸಬೇಕು? ಇಂಥಹ ಪ್ರಯತ್ನ ಪ್ರವೇಶ ಪರೀಕ್ಷೆಯ ಕೋಚಿಂಗ್ ಇಂಡಸ್ಟ್ರಿ ಗಳಿಗೆ ಅವಕಾಶ ಕೊಡುವಂಥಹ ಕೆಲಸಮಾಡುತ್ತದೆ. ಅಷ್ಟೇ ಅಲ್ಲದೆ ಬಿಹಾರ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ ದಂಥಹ ರಾಜ್ಯಗಳಿಂದ ಮೋಸ ಎಸಗಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ದಕ್ಷಿಣ ರಾಜ್ಯಗಳ ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸೀಟುಗಳು ಕೈಸೇರುತ್ತವೆ. ಇದರಿಂದ ಸ್ಥಳೀಯ ಮಟ್ಟದ ಜನಸಾಂಖ್ಯಿಕ ಏರುಪೇರು ಉಂಟಾಗುವುದು ನಿಚ್ಚಳವಾಗುತ್ತದೆ.

3. ಕೇಂದ್ರ ಸರ್ಕಾರವು ಶಿಕ್ಷಣ ನೀತಿಗೆ ಸಂಬಂಧಪಟ್ಟಂತೆ ಎಲ್ಲಾ ನಿರ್ಧಾರಗಳನ್ನು ಕೇಂದ್ರೀಕೃತವಾಗಿಸಿರುವುದರಿಂದ ಸಾಂವಿಧಾನಿಕವಾಗಿ ರಾಜ್ಯಗಳಿಗಿದ್ದ ಸ್ವಾಯತ್ತತೆ ಕಿತ್ತುಕೊಂಡಂತಾಗುತ್ತದೆ. ಇದು ನಮ್ಮ ಫೆಡರಲ್ ವ್ಯವಸ್ಥೆ ಗೂ ಕೊಡಲಿಪೆಟ್ಟು.

4. ಐದನೇ ತರಗತಿಯ ನಂತರ ಔದ್ಯೋಗಿಕ ತರಬೇತಿಗೆ ಅವಕಾಶ; ಒಬ್ಬ ವಿದ್ಯಾರ್ಥಿ ಗೆ ಔದ್ಯೋಗಿಕ ತರಬೇತಿಯ ಆಯ್ಕೆ 15 ವರ್ಷ ದಾಟಿದ ನಂತರವೇ ಕೊಡಲಾಗಬೇಕು. ಐದನೇ ತರಗತಿಯಂಥಹ ಎಳೆಯ ವಯಸ್ಸಿನಲ್ಲಿ ಆತನಿಗೆ ತಾನು ಕಲಿಕೆಯಲ್ಲಿ ಏಕೆ ಹಿಂದುಳಿಯುತ್ತಿದ್ದೇನೆ ಅನ್ನುವ ಮನವರಿಕೆ ಆಗುವುದು ಅಸಾಧ್ಯ. ಇದಕ್ಕೆ ಪರಿಹಾರವಾಗಿ ಮತ್ತು ಕಲಿಕೆಗೆ ಪೂರಕವಾಗಿ ಬೆಳೆಸುವುದು ಸಮಾಜದಲ್ಲಿ ಹಿಂದುಳಿದವರಿಗೆ ಕಷ್ಟಸಾಧ್ಯ ಅನ್ನುವುದೂ ಇಲ್ಲಿ ಉಲ್ಲೇಖನೀಯ. ಇಂಥಹ ಯತ್ನ ಮೇಲ್ನೋಟಕ್ಕೆ ಸದುದ್ದೇಶಪೂರ್ವಕ ಎಂದು ಕಂಡುಬಂದರೂ ಆಳಕ್ಕೆ ಹೋಗಿ ಗಮನಿಸಿದರೆ ಆರ್ಥಿಕವಾಗಿ/ಸಾಮಾಜಿಕವಾಗಿ ನಿಮ್ನವಾಗಿರುವ ವರ್ಗವನ್ನು ಶಾಶ್ವತವಾಗಿ ಬ್ಲೂಕಾಲರ್ ವೃತ್ತಿಗಳಿಗೇ ಅಂಟಿಕೊಳ್ಳುವಂತೆ ಮಾಡುವುದು ಸ್ಪಷ್ಟವಾಗಿ ಕಾಣುತ್ತದೆ.

5. ಮೂರು ಭಾಷೆ ಗಳನ್ನು ಹೇರಿರುವುದು: ಮೂರು ಭಾಷೆಗಳನ್ನು ಕಡ್ಡಾಯ ಮಾಡಿರುವುದರಿಂದ ಹಿಂದಿಯನ್ನು ನಮ್ಮ ಮೇಲೆ ಪರೋಕ್ಷವಾಗಿ ಹೇರಿದಂತಾಗುತ್ತದೆ. ಮಕ್ಕಳ ಮಾತೃಭಾಷೆ ಒಂದಾದರೆ ಹೊರಗಿನ ವ್ಯವಹಾರಕ್ಕಾಗಿ ಇಂಗ್ಲೀಷ್ ಭಾಷೆಯನ್ನು ಕಡ್ಡಾಯ ಮಾಡಿದರೆ ಬೇಕಾದಷ್ಟಾಯಿತು. ಹಲವು ಭಾಷೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಅವರಿಗೆ ಹೊರೆಯಾಗುತ್ತದೆ ಮಾತ್ರವಲ್ಲ ಇದು ಅನಾವಶ್ಯಕ ವೂ ಸಹ.

6. ಪದವಿ ಹಂತದಲ್ಲಿ ಹಲವು ನಿರ್ಗಮನ ಆಯ್ಕೆಗಳನ್ನು ನೀಡಿರುವುದು: ಇಂಥಹ ಯತ್ನವೊಂದು ಮೇಲ್ನೋಟಕ್ಕೆ ಅವಶ್ಯಕವೆಂದು ಕಂಡರೂ ನಿಜವಾಗಿ ವಿಶ್ಲೇಷಿದರೆ ಅಪಾಯ ಕಾಣಿಸುತ್ತದೆ. ಹಲವು ಕುಟುಂಬಗಳಿಂದ ಕಾಲೇಜು ಮೆಟ್ಟಿಲು ಹತ್ತುವ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದ ಬಹುಹಂತೀಯ ನಿರ್ಗಮನ ಆಯ್ಕೆ ಕಲಿಕೆಯಿಂದ ಹೊರಗುಳಿಯಲು ಸುಲಭಮಾರ್ಗವಾಗುತ್ತದೆ ಇದರಿಂದ ಪದವಿಯ ಹಂತದಿಂದ ಹೊರನಡೆಯುವವರ ಸಂಖ್ಯೆಯೂ ಹೆಚ್ಚಳವಾಗುತ್ತದೆ.

6. ಎಮ್ ಫಿಲ್ ಪದವಿಯನ್ನು ಸಾರಾಸಗಟಾಗಿ ತೆಗೆದುಹಾಕಿರುವುದು: ಸದ್ಯದ ಪರಿಸ್ಥಿತಿಯಲ್ಲಿ ಎಮ್ ಫಿಲ್ ಅಪ್ರಸ್ತುತ ವೆಂದೆನಿಸಿದರೂ ಇಂತಹ ಪದವಿಹಂತವನ್ನು ತೆಗೆದುಹಾಕುವ ಬದಲು ಎಮ್ ಎಸ್ ನಂತೆ ಪುನರ್ರಚಿಸುವುದು ಸಾಧ್ಯವಿದೆ.

7. ಹೊಸ ವಿನ್ಯಾಸದಂತೆ ಪಿ ಎಚ್ ಡಿ ಯನ್ನು ನಾಲ್ಕು ವರ್ಷದ ಕಾಲಬದ್ಧ ಕೋರ್ಸು ಮಾಡಿರುವುದು; ಪಿ ಎಚ್ ಡಿಯನ್ನು ನಾಲ್ಕು ವರ್ಷಗಳ ಪದವಿ ಯ ನಂತರದ ನಾಲ್ಕು ವರ್ಷಗಳಲ್ಲೇ ಪಡೆಯುವಂತೆ ಕಡ್ಡಾಯ ಮಾಡಿರುವುದು ಸ್ನಾತಕೋತ್ತರ ಪದವಿ ಕಲಿಯುವವರಿಗೆ ಅವಕಾಶವಂಚಿತರನ್ನಾಗಿ ಮಾಡುತ್ತದೆ.

8. ಸಂಸ್ಕೃತ ಭಾಷೆಯನ್ನು ಹೇರುವ ಮೂಲಕ ಇಂಗ್ಲಿಷ್ ನ್ನು ಅಪ್ರಸ್ತುತ ಮಾಡುವುದು: ನೀತಿರೂಪಕರ ವಿಶ್ಲೇಷಕರ ಪ್ರಕಾರ ಇಂಥಹ ಪ್ರಯತ್ನ ಇಂಗ್ಲೀಷ್ ಎಲೀಟಿಸಮ್ ನ್ನು ಮಟ್ಟಹಾಕುವುದು ಎಂದಂದುಕೊಂಡರೂ ಸ್ಯಾಂಸ್ಕ್ರಿಟ್ ಎಲೀಟಿಸಮ್ ಅನ್ನುವುದು ಇನ್ನೂ ಅಪಾಯಕಾರಿ ಮತ್ತು ಕ್ರೂರ ವೆನ್ನುದು ನಮಗೆ ತಿಳಿದಿರಬೇಕಾದ ಅಂಶ.

ಇಂಗ್ಲಿಷ್ ಮೂಲ: ವಿಜಯರಾಘವನ್ ಸುಬ್ರಹ್ಮಣ್ಯನ್
ಕನ್ನಡ ಅನುವಾದ: ಜಿಸ್‍ಪಿ

Please follow and like us:
error