ಹೊಲದಲ್ಲಿ ಉಳುಮೆ ಮಾಡಿದ ಬಿಜೆಪಿ ಮುಖಂಡ ಅಮರೇಶ ಕರಡಿ ವಿಡಿಯೋ ವೈರಲ್

Kannadanet ಕೊಪ್ಪಳ :  ರೈತನ ಹೊಲದಲ್ಲಿ ಉಳುಮೆ ಮಾಡಿದ ಬಿಜೆಪಿ ಮುಖಂಡ ಅಮರೇಶ ಕರಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕವಲೂರು ಗುಡಿಗೇರಿ ಬಳಿಯ ಹನಿನೀರಾವರಿ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಬರುವಾಗ ದಾರಿಯಲ್ಲಿ ಕೃಷಿ ಚಟುವಟಿಕೆ ನಡೆಯುವುದನ್ನು ಕಂಡು ವಾಹನದಿಂದ ಕೆಳಗಿಳಿದಿದ್ದಾರೆ. ರೈತರ ಜೊತೆ ಮಳೆ, ಕೃಷಿ ಚಟುವಟಿಕೆ , ಬೀಜ ಗೊಬ್ಬರ ಪೂರೈಕೆ ಬಗ್ಗೆ ಚರ್ಚೆ ಮಾಡಿ ನಂತರ ರೈತನ ಜೊತೆ ಸೇರಿ ಉಳುಮೆ ಮಾಡಿದ್ದಾರೆ.

ಹ೦ದ್ರಾಳ್ ಸಿಂದೋಗಿ ಗ್ರಾಮದ ನಡುವೆ ಇರುವ ಹನುಮಂತ ಸಿಂಧೂಗೆಪ್ಪ ಇವರ ಹೊಲದಲ್ಲಿ ಉಳುಮೆ ಮಾಡಿದ ವಿಡಿಯೋ ವೈರಲ್ ಆಗಿದೆ.ಅಮರೇಶ್ ಕರಡಿಯ ಈ ಕಾರ್ಯಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error