‘ಹೊಟ್ಟೆಗೆ ಹಿಟ್ಟು ಇಲ್ದೇ ಇದ್ರೂ ಜುಟ್ಟಿಗೆ ಮಲ್ಲಿಗೆ ಹೂ’

ಪೌರತ್ವ ಕಾಯ್ದೆ ವಿರೋಧಿಸಿ ಉಪೇಂದ್ರ

ಬೆಂಗಳೂರು, ಡಿ.18: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚಿತ್ರನಟ, ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ರಾಜಕೀಯ ಮಾಡುವವರಿಗೆ ‘ಹೊಟ್ಟೆಗೆ ಹಿಟ್ಟು ಇಲ್ದೇ ಇದ್ರೂ ಜುಟ್ಟಿಗೆ ಮಲ್ಲಿಗೆ ಹೂ ಇಡೋ ಕೆಲಸ ಸಿಕ್ತು’ ಎಂದು ವ್ಯಂಗ್ಯವಾಗಿ ಬರೆದುಕೊಂಡಿರುವ ಅವರು ಮರು ಟ್ವೀಟ್‌ನಲ್ಲಿ ಸರಿಯಾದ ವಿಭಜನೆ, ಸುಭದ್ರ ಗಡಿ, ಸ್ಪಷ್ಟ ಪೌರತ್ವ ದಾಖಲೆ ಇವೆಲ್ಲಾ ಈ ರಾಜಕೀಯ ಅವ್ಯವಸ್ಥೆಯಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ನೋಡೋಣ… ಮುಂದಿನ ಚುನಾವಣೆ ಒಳಗೆ ಈ ಸಮಸ್ಯೆ ಬಗೆಹರಿಯಲಿ, ನಮ್ಮ ಅರ್ಥಿಕತೆ ಉನ್ನತ ಮಟ್ಟಕ್ಕೇರಲಿ. ಎಲ್ಲರಿಗೂ ಕೆಲಸ, ಉತ್ತಮ ಸರಕಾರಿ ಶಿಕ್ಷಣ, ಆರೋಗ್ಯ, ರಕ್ಷಣೆ, ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲದ ಪಾರದರ್ಶಕ ವ್ಯವಸ್ಥೆ ಎಲ್ಲವೂ ರಾಜಕೀಯ ನಾಯಕರಿಂದಲೇ ಸಿಗಲಿ. ರಾಜಕೀಯವನ್ನೇ ಪ್ರಜೆಗಳು ಬೆಂಬಲಿಸಿದರೆ ಪ್ರಜಾ ತೀರ್ಪೆ ಪ್ರಜಾಕೀಯದ ತೀರ್ಪು ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

Please follow and like us:
error