ಹೆಚ್ಚಿನವರು ಲಾಕ್‌ಡೌನ್‌ನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ: ಪ್ರಧಾನಿ ಮೋದಿ ಬೇಸರ

ಹೊಸದಿಲ್ಲಿ, ಮಾ.23: ಹೆಚ್ಚಿನ ಜನರು ಲಾಕ್‌ಡೌನ್‌ನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ರವಿವಾರ ಜನತಾ ಕರ್ಫ್ಯೂ ವಿಧಿಸಲಾಗಿದ್ದು, ಕೊರೋನ ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

‘‘ಲಾಕ್‌ಡೌನ್‌ನ್ನು ಹೆಚ್ಚಿನ ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ದಯವಿಟ್ಟು ನಿಮ್ಮನ್ನೇ ರಕ್ಷಿಸಿಕೊಳ್ಳಿ, ನಿಮ್ಮ ಕುಟುಂಬದವರನ್ನು ರಕ್ಷಿಸಿ, ನಿರ್ದೇಶನವನ್ನು ಗಂಭೀರವಾಗಿ ಪಾಲಿಸಿ. ನಿಯಮ ಹಾಗೂ ಕಾನೂನು ಪಾಲಿಕೆಯಾಗುವುದನ್ನು ರಾಜ್ಯ ಸರಕಾರ ಖಚಿತಪಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ’’ ಎಂದು ಹಿಂದಿಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿ, ಮುಂಬೈ,ಚೆನ್ನೈ, ಕೋಲ್ಕತಾ ಹಾಗೂ ಬೆಂಗಳೂರು ಸಹಿತ ದೇಶದ 80 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಲಾಕ್‌ಡೌನ್ ವೇಳೆ ಅಗತ್ಯವಸ್ತುಗಳು ಮಾತ್ರ ಲಭ್ಯವಿರುತ್ತದೆ. ರೈಲುಗಳು, ಮೆಟ್ರೋಗಳು ಹಾಗೂ ಅಂತರ್-ರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪಂಜಾಬ್, ರಾಜಸ್ಥಾನ, ಪಶ್ಚಿಮಬಂಗಾಳ ಹಾಗೂ ಹರ್ಯಾಣದಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಲಾಗಿದೆ.

Please follow and like us:
error