ಹುಚ್ಚು ಹಿಡಿದ ಕೋತಿಗಳು ಮಾಡಿದ್ದೇನು ಗೊತ್ತಾ ?

Bellary   ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೆಕುಪ್ಪ ಮತ್ತು ವಡ್ಡು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕೋತಿಗಳ ಹಾವಳಿ ಜಾಸ್ತಿಯಾಗಿದ್ದು, ಕಂಡ, ಕಂಡವರ ಮೇಲೆ ಎಗರಿ ಕಚ್ಚಿ ಗಾಯಗೊಳಿಸುತ್ತಿವೆ. ಇದರಿಂದ ಈ ಭಾಗದ ಜನರು 

ಬೆಚ್ಚಿಬಿದ್ದಿದ್ದಾರೆ. ಕರಿಕೋತಿಯೊಂದಕ್ಕೆ ಹುಚ್ಚುಹಿಡಿದಿದೆ ಎನ್ನಲಾಗಿದ್ದು 28 ಜನರಿಗೆ ಕಚ್ಚಿ ಗಾಯಗೋಳಿಸಿದೆ‌.  ಕೋತಿಯನ್ನು ಹಿಡಿಯಲು  ಮತ್ತು ಗಾಯಗೊಂಡ ಸ್ಥಳೀಯರಿಗೆ ಸೂಕ್ತಪರಿಹಾರ ಒದಗಿಸುವಂತೆ ಸ್ಥಳೀಯರಿಂದ ಬಳ್ಳಾರಿ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಯಾವುದೇ ಪ್ರಯೋಜನವಿಲ್ಲ.  

ಕರಿಕೋತಿಯೊಂದಕ್ಕೆ ಹುಚ್ಚುಹಿಡಿದಿದ್ದು  ಅದರಿಂದಾಗಿ ಗ್ರಾಮದಲ್ಲಿ ಮಕ್ಕಳು, ವಯಸ್ಸಾದವರು   ಹೆಣ್ಣು ಮಕ್ಕಳು  ಹೊರಗೆ ಬರಲು ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೋತಿಯನ್ನು ಹಿಡಿದು ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಇಲ್ಲದಿದ್ದರೆ ಈ ಕೋತಿ ಮತ್ತಷ್ಟು ಜನರಿಗೆ ಕಚ್ಚುವದರಲ್ಲಿ ಸಂಶಯವಿಲ್ಲ.
.‌

Please follow and like us:
error