ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಭರಪೂರ ದೇಣಿಗೆ

ಕೊಪ್ಪಳ- ನಗರದ ಗವಿಮಠದ ಪೂಜ್ಯರಾದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ವಿವಿಧ ಮಠಾಧಿಶರು. ಸರಕಾರಿ ನೌಕರರು, ವರ್ತಕರು. ವಿವಿಧ ಸಂಘ ಸಂಸ್ಥೆಗಳು ದೇಣಿಗೆಯನ್ನು ಅರ್ಪಿಸುತಿದ್ದಾರೆ. ಇಂದು ನಗರದ ಪ್ರತಿಭಾ ಆಟೋ ಟ್ರೇಡರ್ಸ ಇವರಿಂದ ೫೧೦೦. ಸಂಧ್ಯಾ ಬಸವರೆಡ್ಡಿ ಮಾದಿನೂರ ಇವರಿಂದ ೫೦೦೦. ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಇವರಿಂದ ೨೦೦೦೦೦ (ಎರಡು ಲಕ್ಷ) ರೂಪಾಯಿಗಳು. ನೆಹರು ಮೆಮೋರಿಯಲ್ ಸ್ಫೋರ್ಟ್ಸ & ರಿಕ್ರೇಯಶನ್ ಸೇಂಟರ್ ೧೫೦೦೦೦ (ಒಂದು ಲಕ್ಷದ ಐವತ್ತು ಸಾವಿರ) ರೂಪಾಯಿಗಳನ್ನು ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ಕೆ ದೇಣಿಗೆಯನ್ನು ಪೂಜ್ಯರಿಗೆ ಅರ್ಪಿಸಿದ್ದಾರೆ. ದಾನಿಗಳಿಗೆ ಪೂಜ್ಯ ಗವಿಮಠದ ಶ್ರೀಗಳು ಆಶಿರ್ವದಿಸಿದ್ದಾರೆ.

Please follow and like us:
error