ಹಿರಿಯ ಕತೆಗಾರ ಅಬ್ಬಾಸ್ ಮೇಲಿನಮನಿಯವರಿಗೆ ನುಡಿನಮನ

ಕೊಪ್ಪಳ : ಇತ್ತೀಚಿಗಷ್ಟೇ ನಮ್ಮನಗಲಿದ ನಾಡಿನ ಹಿರಿಯ ಕತೆಗಾರ ಅಬ್ಬಾಸ್ ಮೇಲಿಮನಿಯವರಿಗೆ ಕೊಪ್ಪಳದಲ್ಲಿ ನುಡಿ ನಮನ ಸಲ್ಲಿಸಲಾಯಿತು. ಶಕ್ತಿ ಶಾರಧೆಯ ಮೇಳ ಹಾಗೂ ಬೆರಗು ಪ್ರಕಾಶನ ಭಾಗ್ಯನಗರ ಕೊಪ್ಪಳದ ಸಂಘಟಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಂತೇಶ ಮಲ್ಲನಗೌಡರ್, ಕಾಸಿಂಸಾಬ್, ಸಿ.ಬಿ. ಚಿಲ್ಕರಾಗಿ , ಅಕ್ಬರ್ ಕಾಲಿಮಿರ್ಚಿ, ಶಿ.ಕಾ.ಬಡಿಗೇರ, ರಾಮಣ್ಣ ಅಲ್ಮರಿಕೆರಿ, ಮೆಹಬೂಬ್ ಮಠದ, ಸಿರಾಜ್ ಬಿಸರಳ್ಳಿ, ದಾನಪ್ಪ ಕವಲೂರು ಸೇರಿದಂತೆ ಇತರರು ಭಾಗವಹಿಸಿ ಅಬ್ಬಾಸ್ ಮೇಲಿಮನಿಯವರ ಜೊತೆಗಿನ ಒಡನಾಟ ಹಾಗೂ ಅವರ ಕೃತಿಗಳ ಕುರಿತು ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಬಿ.ಆರ್.ತುಬಾಕಿ ಹಾಗೂ ಹಾಲೇಶ್ ಕಂದಾರಿಯವರನ್ನು ಸ್ಮರಿಸಲಾಯಿತು.

Please follow and like us:
error