ಹಿರಿಯ ಐಪಿಎಸ್​ ಅಧಿಕಾರಿ ಚರಣ್​​ ರೆಡ್ಡಿ ನಿಧನ

ಬೆಂಗಳೂರು, ಮಾ.13: ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ಚರಣ್​​ ರೆಡ್ಡಿ(56) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.

ತೀವ್ರತರದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಆಂಧ್ರ ಪ್ರದೇಶದವರಾದ ಚರಣ್​ ರೆಡ್ಡಿ 1993ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಸ್.ಐ.ಟಿ. ಮುಖ್ಯಸ್ಥರಾಗಿದ್ದರು. ಐದು ವರ್ಷಗಳ ಕಾಲ ಸಿಬಿಐನಲ್ಲೂ ಕೆಲಸ ಮಾಡಿದ್ದರು. ಸದ್ಯ ಸಿಐಡಿ ಎಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕೆಲ ಹೊತ್ತಿನಲ್ಲಿ ಸಂಜಯ ನಗರದ ಮನೆಗೆ ಅವರ ಪಾರ್ಥಿವ ಶರೀರ ರವಾನೆಯಾಗಲಿದ್ದು, ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಚರಣ್ ರೆಡ್ಡಿ ನಿಧನದ ಹಿನ್ನೆಲೆ ಇಂದು ವನಿತಾ ಸಹಾಯವಾಣಿ ವತಿಯಿಂದ ನಡೆಯಬೇಕಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

Please follow and like us:
error