ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು-ಜಿ.ಎನ್.ಹಳ್ಳಿ

ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಆವರಣದಲ್ಲಿ ಕೇಂದ್ರ ಸರ್ಕಾರಿ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿಯ ಕರೆಯ ಮೇರೆಗೆ ಹಮ್ಮಿಕೊಂಡ ಮುಷ್ಕರ


ಕೊಪ್ಪಳ: ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಬೇಕು, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ನೌಕರರು ಮತ್ತು ಪಿಂಚಣಿದಾರರಿಗೆ ಸ್ಥಗಿತಗೊಳಿಸಿರುವ ಡಿ.ಎ. ಮತ್ತು ಡಿ.ಆರ್‌ನ್ನು ಪಾವತಿ ಮಾಡಬೇಕು, ೭ನೇ ವೇತನ ಆಯೋಗ ಶಿಪಾರಸ್ಸು ಮಾಡಿರುವ ಕನಿಷ್ಟ ವೇತನ ಮತ್ತು ಫಿಟ್‌ಮೆಂಟ್ ಸೂತ್ರವನ್ನು ಹೆಚ್ಚಿಸಿ ೨೦೦೬ ರ ಜನವರಿ ಒಂದರಿಂದ ಎಚ್.ಆರ್.ಎ ಪಾವತಿ ಮಾಡಬೇಕು, ರೈಲ್ವೆ ರಕ್ಷಣಾ ಮತ್ತು ಅಂಚೆ ಇಲಾಖೆಗಳ ಖಾಸಗಿಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ನೌಕರರೆಂದು ಪರಿಗಣಿಸಬೇಕು, ಅಂತರ್ಜಾಲ ಸಮಸ್ಯೆಯನ್ನು ಪರಿಹರಿಸಬೇಕು ಹಾಗೂ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿಗೆ ತೆಗೆದುಕೊಳ್ಳಲೇಬೇಕು ಎಂದು ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಪ್ಪಳ ಶಾಖೆಯ ಅಧ್ಯಕ್ಷರಾದ ಜಿ.ಎನ್.ಹಳ್ಳಿ ಹೇಳಿದರು.
ಅವರು ಗುರುವಾರ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಆವರಣದಲ್ಲಿ ಕೇಂದ್ರ ಸರ್ಕಾರಿ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿಯ ಕರೆಯ ಮೇರೆಗೆ ಹಮ್ಮಿಕೊಂಡ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದರು.
ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಪ್ಪಳ ಶಾಖೆಯ ಕಾರ್ಯದರ್ಶಿಯಾದ ಜಿ.ಕಾರ್ತಿಕ, ಖಜಾಂಚಿಯಾದ ವೀರಣ್ಣ ಹೊಸಮನಿ, ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಪ್ಪಳ ಶಾಖೆಯ ಫೋಸ್ಟಮನ್ ಸಂಘದ ಅಧ್ಯಕ್ಷರಾದ ಬಸವರಾಜ ತಲೆಖಾನ್, ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಗೋಣೆಪ್ಪ ಹಲಗೇರಿ, ಕಾರ್ಯದರ್ಶಿಯಾದ ಸೋಮಶೇಖರಗೌಡ, ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಪ್ಪಳ ಶಾಖೆಯ ಎಸ್.ಸಿ, ಎಸ್.ಟಿ ಸಂಘದ ಅಧ್ಯಕ್ಷರಾದ ವಾಯ್.ವಾಯ್. ಕೋಳೂರು, ಸಂಘದ ಪದಾದಿಕಾರಿಗಳಾದ ಬಿ.ವಿ.ಅಂಗಡಿ, ಸವೋತ್ತಮ ಉಪಾಧ್ಯಾಯ, ಡಿ.ಎಂ.ದ್ರಾಕ್ಷಿ, ಎಸ್.ಎಚ್.ಹೂಗಾರ, ಪ್ರೇಮಾ ಕಾಪಸೆ, ಉಷಾ ಆರ್, ತೇಜಾವತಿ ಇನಾಮದಾರ, ಹೇಮಾವತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೋಟೋ : ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಆವರಣದಲ್ಲಿ ಕೇಂದ್ರ ಸರ್ಕಾರಿ ನೌಕರರ ಮತ್ತು ಕೆಲಸಗಾರರ ಸಮನ್ವಯ ಸಮಿತಿಯ ಕರೆಯ ಮೇರೆಗೆ ಹಮ್ಮಿಕೊಂಡ ಮುಷ್ಕರವನ್ನು ಉದ್ದೇಶಿಸಿ ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಪ್ಪಳ ಶಾಖೆಯ ಅಧ್ಯಕ್ಷರಾದ ಜಿ.ಎನ್.ಹಳ್ಳಿ ಮಾತನಾಡಿದರು.

Please follow and like us:
error