ಕೊಪ್ಪಳ : ಮಕ್ಕಳ ಕಲಿಕೆಗೆ ಸರಕಾರ ರೂಪಿಸಿರುವ ಎಲ್ಲ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ. ಮಕ್ಕಳು ಯಾವುದೇ ರೀತಿಯಲ್ಲಿ ಆತಂಕ ಪಡುವ ಅವಶ್ಯಕತೆಯಿಲ್ಲ. ಶಾಲೆಯ ಪ್ರತಿಯೊಂದು ಕೊಠಡಿಯನ್ನು ಸ್ಯಾನಿಟೈಜ್ ಮಾಡಿ , ಥರ್ಮಲ್ ಸ್ಯಾನಿಂಗ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ವಿಧ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಶಾಲೆಯಲ್ಲಿ ಕಲಿಕೆಯನ್ನು ಮುಂದುವರೆಸಬೇಕು ಎಂದು ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆರ್.ಬಿ.ಪಾನಘಂಟಿ ಹೇಳಿದರು.

ಇಂದು ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ಕೊಠಡಿಯನ್ನು ಉದ್ಘಾಟಿಸುವ ಮೂಲಕ ಮಕ್ಕಳಿಗೆ ಕಲಿಕೆಗೆ ಆರಂಭ ನೀಡಿ ಮಾತನಾಡಿದ ಅವರು ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗುವುದೇ ಇಲ್ಲ ಎನ್ನುವ ಪರಿಸ್ಥಿತಿಯ ನಡುವೆಯೂ ಸರಕಾರ ಅವಕಾಶ ಮಾಡಿದೆ. ಎಸ್

ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅವರ ಉತ್ತಮ ಭವಿಷ್ಯಕ್ಕಾಗಿ ಅವಕಾಶ ನೀಡಿದ್ದು ಒಳ್ಳೆಯ ಬೆಳವಣಿಗೆ. ವಿದ್ಯಾಗಮ ಆರಂಭ ಮಾಡಿದ್ದು ಸರಿಯಾದ ನಿರ್ದಾರ. ಎಲ್ಲ ರಂಗಗಳು ಆರಂಭವಾಗಿದ್ದರೂ ಶಾಲೆಗಳ ಆರಂಭವಾ

 

ಗದೇ ಇದ್ದರ ಬಗ್ಗೆ ಪ್ರಶ್ನೆಗಳಿದ್ದವು. ಶಾಲೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಹೆಚ್ಚಿನ ಜಾಗರೂಕತೆ ಅವಶ್ಯಕವಾಗಿತ್ತು. ಒಟ್ಟಿನಲ್ಲಿ ಈಗ ಶಾಲೆಗಳು ಆರಂಭವಾಗಿದ್ದು ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ಹಿಂದಿನ ವರ್ಷ ನಡೆದಿರುವುದನ್ನು ಎಲ್ಲರೂ ಮರೆತು ಬಿಡಿ, ಖಂಡಿತ ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಎಂದು ಹೇಳಿದರು.

ಹಳೆಯ ಕಹಿ ನೆನಪು ಮರೆತು ಮಕ್ಕಳು ಓದಿನತ್ತ ಗಮನಕೊಡಿ ಭವಿಷ್ಯ ಉಜ್ವಲವಾಗುತ್ತೆ- ಆರ್.ಬಿ.ಪಾನಘಂಟಿ

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಹನುಮಂತಸಾ ನಿರಂಜನ, ಸತೀಶ ಮೇಘರಾಜ, ಮಾರುತಿ ಮೇಘರಾಜ್, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ಕರೋನಾ ಕಾರಣಕ್ಕೆ ಕಳೆದ ೧೦ ತಿಂಗಳುಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆಂಭವಾದ ಹಿನ್ನೆಲೆಯಲ್ಲಿ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರ ಮಾಡಿ ಸಂಭ್ರಮಿಸಲಾಯಿತು. ಸಾಮಾಜಿಕ ಅಂತರ , ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಕೋವಿಡ್ ನಿಯಮ ಪಾಲನೆಯ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು.

Please follow and like us:
error