ಹಕ್ಕಿ-ಪಿಕ್ಕಿ ಜನಾಂಗದ ಕಾಲೋನಿಗೆ ಜಿಲ್ಲಾ ನ್ಯಾಯಾಧೀಶರ ಭೇಟಿ

ಕೊಪ್ಪಳ ಫೆ. ಕೊಪ್ಪಳ ನಗರ ಪ್ರದೇಶದ ೧೨ನೇ ವಾರ್ಡಿನ ಸಜ್ಜಿಹೋಲದಲ್ಲಿ ಹಕ್ಕಿ-ಪಿಕ್ಕಿ ಜನಾಂಗದ ಕಾಲೋನಿಗೆ ಜಿಲ್ಲಾ ನ್ಯಾಯಾಧೀಶರಾದ ಟಿ.ಶ್ರೀನಿವಾಸ ಇವರು ಭೇಟಿ ನೀಡಿ ವಿವಿಧ ಸೌಲಭ್ಯ ದೊರೆಯುವ ಬಗ್ಗೆ ಕಾಲೋನಿಯಲ್ಲಿ ವಿಚಾರಿಸಿದರು.
ಈ ವೇಳೆ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳು ಮಾತನಾಡಿ, ಆರೋಗ್ಯ ಇಲಾಖೆಯಿಂದ ಈಗಾಗಲೇ ಗರ್ಭಿಣಿಯರಿಗೆ, ಮಕ್ಕಳಿಗೆ ಚುಚ್ಚುಮದ್ದು, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಹದಿ ಹರೆಯದವರಿಗೆ ವೈಯಕ್ತಿಕ ಸುಚಿತ್ವ ಎನ್.ಹೆಚ್.ಎಂ ಯೋಜನೆಗಳಡಿ ಸೌಲಭ್ಯ ನೀಡುತ್ತಿದ್ದು, ವಿವಿಧ ಯೋಜನೆಗಳ ಬಗ್ಗೆ ಆರೋಗ್ಯ ಶಿಕ್ಷಣದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳು ನ್ಯಾಯಾಧೀಶರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ನ್ಯಾಯಾಧೀಶರು, ಈ ಭಾಗದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಸೂಚಿಸಿ, ಇಲ್ಲಿ ಆರೋಗ್ಯ ಶಿಭಿರ ಏರ್ಪಡಿಸಿ ನ್ಯೂನತೆಗಳು ಕಂಡುಬಂದಲ್ಲಿ ಚಿಕಿತ್ಸೆನೀಡಿ ಸಾರ್ವಜನಿಕರಿಗೆ ಆರೋಗ್ಯವಂತರಾಗಿಮಾಡಲು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಸ್ಥಳಕ್ಕೆ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಅಲಕನಂದಾ ಮಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಜಂಬಯ್ಯ ಬಿ, ತಹಸಿಲ್ದಾರರು ಮತ್ತು ನಗರಸಭೆ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆರೋಗ್ಯ ಇಲಾಖೆಯ ಆರೋಗ್ಯ ಶೀಕ್ಷಣಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

Please follow and like us:
error