ಹಕ್ಕಿಪಿಕ್ಕಿ ಸಮುದಾಯಕ್ಕೆ ಸಕಲ ಸೌಲಭ್ಯ – ಶಾಸಕ ಹಿಟ್ನಾಳ್

Koppal ಕೊಪ್ಪಳ ನಗರದ ಸಜ್ಜಿಹೊಲ ಬಡವಾಣೆಯಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ ಜನಾಂಗದ ಸ್ಥತಿಗತಿ ತಿಳಿಯಲು ಇಂದು ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದರು. ಅಲ್ದೆ ಜನಾಂಗದ ಹಿರಿಯರೊಂದಿಗೆ ಚರ್ಚೆ ನಡೆಸಿ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು, ಆಧಾರ ಕಾರ್ಡ್, ವೋಟರ್ ಕಾರ್ಡ್, ರೇಶನ್ ಕಾರ್ಡ್ ಯಾರಿಗಿಲ್ಲ ಅವರಿಗೆ ಕೂಡಲೇ

ಮಾಡಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಆಶ್ರಯ ಮನೆಗಳ ಕುರಿತು ಮಾತಾಡಿದ ಶಾಸಕರು ಇನ್ನು ಅದಕ್ಕೆ ಕಾಲಾವಕಾಶ ಬೇಕಾಗಿದೆ. ಮೊದಲು ಆರೋಗ್ಯ, ಶಿಕ್ಷಣ ಹಾಗೂ ಶಿಸ್ತಿ ಕಡೆ ಗಮನಕೊಡುವಂತೆ ಹಕಿಪಿಕ್ಕಿ ಜನಾಂಗದ ಮಹಿಳೆಯರಿಗೆ, ಯುವಕರಿಗೆ ಹಿರಿಯರಿಗೆ ತಿಳಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ೧೫ ದಿನಗಳ ಒಳಗಾಗಿ ಸರ್ವೇ ಕಾರ್ಯ ನಡೆಸಿ ಅಗತ್ಯಕ್ಕಾನುಗಣವಾಗಿ ಹಂತಹಂತವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು. ನಗರಸಭೆ ಸಿಗುವ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಲಾಗುವುದು, ಅದರಲ್ಲೂ ಜನಾಂಗ ಮುಂದುವರೆಯಲು ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ವಿನ ಆದ್ಯತೆ ನೀಡಲಾಗಿವುದು ಅಂತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಇದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಶಾಸಕರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಮಜ್ಜಿಗಿ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಬಿ.ಕಲ್ಲೇಶ್ ಹಕ್ಕಿಪಿಕ್ಕಿ‌ ಜನಾಂಗದ ಸ್ಥತಿಯನ್ನು ಬೆಳಕಿಗೆ ತಂದ ಜ್ಯೋತಿ ಗೊಂಡಬಾಳ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು

Please follow and like us:
error